Mushroom Business: ಮನೆಯ ಈ ಚಿಕ್ಕ ರೂಮ್ ನಲ್ಲಿ ಈ ತಳಿಯ ಅಣಬೆ ಕೃಷಿ ಮಾಡಿದರೆ ಪ್ರತಿ ತಿಂಗಳು ಲಕ್ಷಕ್ಕೂ ಅಧಿಕ ಲಾಭ, ಕಡಿಮೆ ಖರ್ಚು.

ಕಡಿಮೆ ಖರ್ಚಿನಲ್ಲಿ ಅಣಬೆ ಕೃಷಿ ಆಅಂಬಿಸಿದರೆ ಲಕ್ಷಕ್ಕೂ ಅಧಿಕ ಲಾಭ ಗಳಿಸಬಹುದು.

Mushroom Business Profit: ಸಾಮಾನ್ಯವಾಗಿ ಕೃಷಿ ಮಾಡುವ ಸಮಯದಲ್ಲಿ ಹೆಚ್ಚಿನ ಲಾಭ ನೀಡುವ ಕೃಷಿಯನ್ನೇ ಆರಿಸುತ್ತಾರೆ. ಯಾವುದೇ ಕೃಷಿಯನ್ನು ಮಾಡುವ ಮುನ್ನ ಅದಕ್ಕೆ ಆಗುವ ಖರ್ಚು ಹಾಗೂ ಅದರಿಂದ ಬರುವ ಲಾಭದ ಬಗ್ಗೆ ಮೊದಲೇ ಲೆಕ್ಕಾಚಾರ ಹಾಕಲಾಗುತ್ತದೆ. ಇತ್ತೀಚೆಗಂತೂ ಎಲ್ಲ ರೀತಿಯ ತಿನ್ನುವ ಪದಾರ್ಥಗಳಿಗೆ ಬಾರಿ ಬೇಡಿಕೆ ಇದೆ. ರೈತರು ತಮ್ಮ ಕೃಷಿಯ ಮೂಲಕ ಕೋಟಿಗಟ್ಟಲೆ ಹಣವನ್ನು ಸಂಪಾದಿಸುತ್ತಾರೆ.

Mushroom Business Profit
Image Credit: Newscientist

ಅಣಬೆ ಕೃಷಿ ಹೆಚ್ಚು ಲಾಭದಾಯಕ
ಎಲ್ಲ ರೀತಿಯ ಲಾಭ ನೀಡುವ ಕೃಷಿಯಲ್ಲಿ ಅಣಬೆ ಕೃಷಿ ಕೂಡ ಒಂದಾಗಿದೆ. ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಲಾಭಗಳಿಸುವ ಕೃಷಿಯಲ್ಲಿ ಅಣಬೆ ಬಹುಮುಖ್ಯ ಪಾತ್ರ ವಹಿಸುತ್ತದೆ. ಅಣಬೆ ಕೃಷಿಗೆ ಹೆಚ್ಚಿನ ಸ್ಥಳವಾಗಲಿ, ಖರ್ಚಾಗಲಿ ಅಗತ್ಯವಿಲ್ಲ. ನಿಮ್ಮ ಮನೆಯಲ್ಲಿ ಸಣ್ಣ ಜಾಗದಲ್ಲಿಯೂ ಕೊಡ ಅಣಬೆ ಕೃಷಿಯನ್ನು ಸಲೀಸಾಗಿ ಮಾಡಬಹುದು. ಅಗ್ಗದ ಮತ್ತು ಉತ್ತಮ ವ್ಯಪಾರದ ಯೋಜನೆಗೆ ಅಣಬೆ ಕೃಷಿ ಉತ್ತಮ ಉದಾಹರಣೆಯಾಗಿದೆ.

ಅಣಬೆ ಕೃಷಿ ಮಾಡಿದರೆ ಪ್ರತಿ ತಿಂಗಳು ಲಕ್ಷಕ್ಕೂ ಅಧಿಕ ಲಾಭ ಸಿಗಲಿದೆ
ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಅಣಬೆ ಇದೀಗ ಎಲ್ಲೆಡೆ ತಲುಪಿದೆ. ಯಾವುದೇ ಹೋಟೆಲ್ ಗಳಿಗೆ ಭೇಟಿ ನೀಡಲು ಈ ಅಣಬೆಯ ಮೂಲಕ ವಿವಿಧ ರೀತಿಯ ಆಹಾರ ಪದಾರ್ಥಗಳು ಸಿಗುತ್ತದೆ. ಅಣೆಬೆಯ ರುಚಿ, ಪರಿಮಳದ ಮುಂದೆ ಚಿಕನ್, ಮಟನ್ ಕೂಡ ಕಡಿಮೆ. ಅಣಬೆ ಇತ್ತೀಚಿಗೆ ಬಹುಬೇಡಿಕೆ ಪದಾರ್ಥವಾಗಿದೆ. ಅಣಬೆಗಳಲ್ಲಿ ಹಲವು ವಿಧಗಳಿವೆ.

If you do mushroom business, you will get more than one lakh profit every month
Image Credit: MB

ಭಾರತದಲ್ಲಿ ಬಿಳಿ ಬೆಣ್ಣೆ ಮಶ್ರೂಮ್, ಸಿಂಪಿ ಮಶ್ರೂಮ್, ಮಿಲ್ಕಿ ಮಶ್ರೂಮ್, ಪಾಡಿಸ್ಟ್ರಾ ಮಶ್ರೂಮ್ ಮತ್ತು ಶಿಟೇಕ್ ಮಶ್ರೂಮ್ ಗಳು ಉತ್ತಮ ಆದಾಯ ಗಳಿಕೆಗೆ ಹೆಸರುವಾಸಿ. ಮಶ್ರೂಮ್ ಕೃಷಿಗಾಗಿ ನೀವು ಆ ಪ್ರಭೇದಗಳನ್ನು ಆರಿಸಬೇಕು. ಇದು ಕಡಿಮೆ ಸಮಯದಲ್ಲಿ ಉತ್ತಮ ಲಾಭವನ್ನು ನೀಡುತ್ತದೆ. ಇದಲ್ಲದೇ ಸಮೀಪದ ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಅಣಬೆಯನ್ನೂ ಉತ್ಪಾದಿಸಬಹುದು. ಅಣಬೆ ಕೃಷಿಯ ಮೂಲಕ ಪ್ರತಿ ತಿಂಗಳು ಲಕ್ಷಕ್ಕೂ ಅಧಿಕ ಲಾಭ ಪಡೆಯಬಹುದು.

ಅಣಬೆ ಕೃಷಿ ಮಾಡುವುದು ಹೇಗೆ
ಪ್ರಪಂಚದಾದ್ಯಂತ 70 ವಿಧದ ಅಣಬೆಗಳಿವೆ. ಅಣಬೆ ಕೃಷಿಯ ಮಣ್ಣಿನ ಅಗತ್ಯವಿಲ್ಲ. ದೊಡ್ಡ ಪ್ಲಾಸ್ಟಿಕ್ ಚೀಲಗಳು, ಕಾಂಪೋಸ್ಟ್ ಗೊಬ್ಬರ, ಭತ್ತ ಮತ್ತು ಗೋಧಿ ಹುಲ್ಲು ಇದ್ದರೆ ಸುಲಭವಾಗಿ ಅಣಬೆ ಕೃಷಿಯನ್ನು ಮಾಡಬಹುದು. ಮನೆಯಲ್ಲಿ ಅಣಬೆಯನ್ನು ಬೆಳೆಯಲು ಬಯಸಿದರೆ ಈ ವಿಧಾನವನ್ನು ಬಳಸಿ.

Join Nadunudi News WhatsApp Group

Mushroom Business Profit
Image Credit: Farmerstrend

ಅಣೆಬೆ ಕೃಷಿಗೆ ಈ ವಿಧಾನವನ್ನು ಅನುಸರಿಸಿ
*ಮೊದಲು ಪ್ಲಾಸ್ಟಿಕ್ ಚೀಲದಲ್ಲಿ ಕಾಂಪೋಸ್ಟ್ ಗೊಬ್ಬರದೊಂದಿಗೆ ಬೆರೆಸಿದ ಭತ್ತ-ಗೋಧಿ ಹುಲ್ಲು ಇರಿಸಿ.

*ನಂತರ ಅಣಬೆ ಬೀಜಗಳನ್ನು ಕಾಂಪೋಸ್ಟ್ ತುಂಬಿದ ಚೀಲದಲ್ಲಿ ಹಾಕಿ ಅದರಲ್ಲಿ ಸಣ್ಣ ರಂಧ್ರಗಳನ್ನು ಮಾಡಿ, ಈ ರಂಧ್ರಗಳ ಸಹಾಯದಿಂದ ಅಣಬೆಗಳು ಬೆಳೆದ ತಕ್ಷಣ ಹೊರಬರುತ್ತವೆ.

*ಬೀಜಗಳನ್ನು ಬಿತ್ತಿದ 15 ದಿನಗಳವರೆಗೆ ಶೆಡ್‌ ನಲ್ಲಿ ಗಾಳಿ ಬೀಸದಂತೆ ಕಾಳಜಿ ವಹಿಸಬೇಕು.

*ಬೀಜಗಳನ್ನು ಬಿತ್ತನೆ ಮಾಡಿದ 15 ದಿನಗಳ ನಂತರ ಶೆಡ್‌ ನಲ್ಲಿ ಫ್ಯಾನ್‌ ಗಳನ್ನು ಹಾಕಿ ಗಾಳಿಯನ್ನು ಹರಿಯುವಂತೆ ಮಾಡಬೇಕು.

*ಇದಾದ ಬಳಿಕ ಅಣಬೆ ಬೆಳೆ 30 ರಿಂದ 40 ದಿನಗಳವರೆಗೆ ಹಣ್ಣಾಗಲು ಬಿಡಬೇಕು. ನಂತರ ಮಾರುಕಟ್ಟೆಯ ಬೆಲೆಯಲ್ಲಿ ಅಣಬೆಯನ್ನು ಮಾರಾಟ ಮಾಡಿ ಹೆಚ್ಚಿನ ಲಾಭವನ್ನು ಗಳಿಸಬಹುದು.

Join Nadunudi News WhatsApp Group