Hijab: ಹಿಜಾಬ್ ವಿಷಯವಾಗಿ ಇನ್ನೊಂದು ಘೋಷಣೆ ಮಾಡಿದ ಸಿದ್ದರಾಮಯ್ಯ ಸರ್ಕಾರ, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಗುಡ್ ನ್ಯೂಸ್.

ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರ ಬಗ್ಗೆ ಮಹತ್ವದ ಆದೇಶ.

Muslim Students Allowed To Wear Hijab In Exams: ಕಳೆದ ವರ್ಷ ನಡೆದ ಈ ಹಿಜಾಬ್ ವಿವಾದದಿಂದಾಗಿ ರಾಜ್ಯದಲ್ಲಿ ಸಾಕಷ್ಟು ಪ್ರಕರಣಗಳು ಸಂಭವಿಸಿದೆ ಎನ್ನಬಹುದು. Hijab ಹಾಗೂ ಕೇಸರಿ ಶಾಲು ವಿವಾದವು ಕರ್ನಾಟಕದ ಹೆಚ್ಚಿನ ಕಾಲೇಜುಗಳಿಗೆ ವ್ಯಾಪಿಸಿತ್ತು. ಈ ಹಿಂದೆ Muslim ಯುವತಿಯರು Hijab ಧರಿಸಿ ಕಾಲೇಜಿಗೆ ಬರಬಾರದು ಎನ್ನುವ ವಿಷಯವು ಸಾಕಷ್ಟು ವಿವಾದಗಳಿಗೆ ಸಿಲುಕಿತ್ತು.

Hijab ಮತ್ತು ಕೇಸರಿ ಶಾಲು ಪ್ರತಿಭಟನೆ ದೊಡ್ಡ ಮಟ್ಟದ ಚರ್ಚೆಯನ್ನೇ ಹುಟ್ಟುಹಾಕಿತ್ತು. ಇನ್ನು ಕರ್ನಾಟಕ ಸರ್ಕಾರ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸಲು ತೀರ್ಮಾನಿಸಿದೆ. ಇದೀಗ ಹಿಜಾಬ್ ವಿಷಯವಾಗಿ ಇನ್ನೊಂದು ಸುದ್ದಿ ವೈರಲ್ ಆಗಿದೆ ಎಂದು ಹೇಳಬಹುದು. ಇದೀಗ ಹಿಜಾಬ್ ಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ Siddaramaiah ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

Muslim Students Allowed To Wear Hijab In Exams
Image Credit: Khaleejtimes

ಹಿಜಾಬ್ ಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿ Siddaramaiah ಮಹತ್ವದ ನಿರ್ಧಾರ
ಇದೀಗ ರಾಜ್ಯ ಸರ್ಕಾರ ಹಿಜಾಬ್ ಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಕೈಗೊಂಡಿದೆ. ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸುವುದರ ಬಗ್ಗೆ ಹೊಸ ಆದೇಶ ಹೊರಡಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಸಿ ಕರ್ನಾಟಕದ ಎಲ್ಲ ಪರೀಕ್ಷೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅನುಮತಿ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗಿದೆ. ಈ ಬಗ್ಗೆ ರಾಜ್ಯ ಶಿಕ್ಷಣ ಸಚಿವ M.C ಸುಧಾಕರ್ ಘೋಷಣೆ ಹೊರಡಿಸಿದ್ದಾರೆ.

Muslim Students Allowed To Wear Hijab In Exams
Image Credit: Mend

ಮುಸ್ಲಿಂ ವಿದ್ಯಾರ್ಥಿಗಳಿಗೆ ಪರೀಕ್ಷೆಯಲ್ಲಿ ಹಿಜಾಬ್ ಧರಿಸಲು ಅನುಮತಿ
ಕರ್ನಾಟಕದ ಶಾಲಾ ಕಾಲೇಜು ಪರೀಕ್ಷೆಗಳಲ್ಲಿ ಮಾತ್ರವಲ್ಲದೆ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಲಾಗಿದೆ. ಮಹಿಳೆಯರು ಹಿಜಾಬ್ ಧರಿಸಿ ನೀಟ್ ಪರೀಕ್ಷೆ ಬರೆಯಲು ಕೇಂದ್ರ ಸರ್ಕಾರ ಈಗಾಗಲೇ ಅನುಮತಿ ನೀಡಿದ್ದು, ಕಾಂಗ್ರೆಸ್ ಸರ್ಕಾರದ ನಿರ್ಧಾರ ಯಾವುದೇ ರೀತಿಯಲೂ ತಪ್ಪಿಲ್ಲ ಎಂದು ಹೇಳಲಾಗಿದೆ.

Join Nadunudi News WhatsApp Group

ಇನ್ನು ಮುಂದೆ ಕರ್ನಾಟಕದ ಎಲ್ಲ ಪರೀಕ್ಷೆಗಳಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಧರಿಸಲು ಅನುಮತಿ ನೀಡಲಾಗುತ್ತದೆ ಎಂದು ರಾಜ್ಯ ಶಿಕ್ಷಣ ಸಚಿವ M .C ಸುಧಾಕರ್ ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಸದ್ಯ ಕಾಂಗ್ರೆಸ್ ಸರ್ಕಾರ ಈ ನಿರ್ಧಾರ ಬಗ್ಗೆ ಪರ ವಿರೋಧ ಹೇಳಿಕೆಗಳು ಬಂದಿದ್ದು ಸರ್ಕಾರ ಮುಂದಿನ ನಡೆ ಏನು ಅನ್ನುವುದರ ಬಗ್ಗೆ ನಾವು ಕಾದು ನೋಡಬೇಕಿದೆ.

Join Nadunudi News WhatsApp Group