Demat Account: ಮ್ಯೂಚುಯಲ್ ಫಂಡ್ ಇದ್ದವರಿಗೆ ಹೊಸ ನಿಯಮ, ಸೆ 30 ರೊಳಗೆ ಈ ಕೆಲಸ ಮಾಡದಿದ್ದರೆ ಈ ಖಾತೆ ಬ್ಲಾಕ್.
ನಿಗದಿತ ಸಮಯದೊಳಗೆ ಈ ಕೆಲಸ ಆಗದಿದ್ದರೆ ಫ್ರೀಜ್ ಆಗಲಿದೆ ನಿಮ್ಮ Mutual Fund Account.
Demat Account Nomination: Septembar ತಿಂಗಳು ಅಂತ್ಯಗೊಳ್ಳಲು ಇನ್ನೇನು ಕೇವಲ 12 ದಿನಗಳು ಬಾಕಿ ಇವೆ. Septembar 30 2023 ರೊಳಗೆ ಸಾಕಷ್ಟು ಕೆಲಸಗಳು ಪೂರ್ಣಗೊಳ್ಳಬೇಕಿದೆ. ನೋಟು ವಿನಿಮಯ, SBI ವೀಕೇರ್ FD scheme, ರೇಷನ್ ಕಾರ್ಡ್ ಹಾಗು ಆಧಾರ್ ಕಾರ್ಡ್ ಲಿಂಕ್, ಉಳಿತಾಯ ಯೋಜನೆಗಳಿಗೆ Aadhar Card ಲಿಂಕ್ ಸೇರಿದಂತೆ ಟ್ರೇಡಿಂಗ್ & ಡಿಮ್ಯಾಟ್ ಅಕೌಂಟ್ ನಾಮಿನೇಷನ್ ಅನ್ನು ಸೆಪ್ಟೆಂಬರ್ 30 ರೊಳಗೆ ಪೂರ್ಣಗೊಳಿಸಿಕೊಳ್ಳಬೇಕಿದೆ.
ಈ ಎಲ್ಲ ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳಲು ಸರ್ಕಾರ ನಿಂಗೇ ಈ ತಿಂಗಳು ಮಾತ್ರ ಸಮಯಾವಕಾಶವನ್ನು ನೀಡಿದೆ. ಅದೇ ರೀತಿಯಲ್ಲಿ ಈಗ ಮ್ಯೂಚುಯಲ್ ಫಂಡ್ ಖಾತೆ ಇದ್ದವರಿಗೆ ಹೊಸ ಆದೇಶ ಬಂದಿದ್ದು ಸೆಪ್ಟೆಂಬರ್ 30 ಈ ಕೆಲಸ ಮಾಡದೆ ಇದ್ದರೆ ಅಂತವರ ಡಿಮ್ಯಾಟ್ ಅಕೌಂಟ್ (Demat Account) ಬ್ಲಾಕ್ ಆಗುವ ಸಾಧ್ಯತೆ ಇದೆ.
ಸೆಪ್ಟೆಂಬರ್ 30 ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕ
ಮುಂದಿನ October ನಿಂದ ಈ ಎಲ್ಲ ಕೆಲಸಗಳು ಆಗದೆ ಇದ್ದರೆ ನೀವು ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಎದುರಿಸಬೇಕಾಗುತ್ತದೆ. ಇನ್ನು ಈಗಾಗಲೇ Securities and Exchange Board of India (SEBI) Trading & Demat Account Nomination ಗೆ ಅರ್ಜಿ ಸಲ್ಲಿಕೆ ಕೊನೆಯ ದಿನಾಂಕವನ್ನು ನಿಗದಿಪಡಿಸಿದ್ದು, ಸೆಪ್ಟೆಂಬರ್ 30 ನಾಮಿನೇಷನ್ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದೆ.
ಡಿಮ್ಯಾಟ್ ಖಾತೆಗೆ ನಾಮನಿರ್ದೇಶನ ಸಲ್ಲಿಕೆ
Septembar 30 ರೊಳಗೆ ನಾಮನಿರ್ದೇಶನ ಘೋಷಣೆಗಳನ್ನು ಸಲ್ಲಿಸಬೇಕು ಎಂದು SEBI ಕಡ್ಡಾಯಗೊಳಿಸಿದೆ. ವ್ಯಕ್ತಿಯ ಮರಣದ ನಂತರ ಡಿಮ್ಯಾಟ್ ಖಾತೆಯಲ್ಲಿರುವ ಸೆಕ್ಯೂರಿಟಿಗಳನ್ನು ಅನುವಂಶಿಕವಾಗಿ ಪಡೆಯಲು ನೀವು ನಾಮನಿರ್ದೇಶನ ಮಾಡುವುದು ಅಗತ್ಯವಾಗಿದೆ. ಅಪ್ರಾಪ್ತ ವಯಸ್ಕರನ್ನು ನಾಮನಿರ್ದೇಶನ ಮಾಡುವಂತಿಲ್ಲ. ನೀವು https://nsdl.co.in/ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡುವ ಮೂಲಕ ಎಲ್ಲ ಮಾಹಿತಿಯನ್ನು ಭಾರ್ತಿ ಮಾಡಿ ಸುಲಭವಾಗಿ ಆನ್ಲೈನ್ ನಲ್ಲಿಯೇ ನಾಮನಿರ್ದೇಶನವನ್ನು ಸಲ್ಲಿಸಬಹುದು.
ನಿಗದಿತ ಸಮಯದೊಳಗೆ ಈ ಕೆಲಸ ಆಗದಿದ್ದರೆ ಫ್ರೀಜ್ ಆಗಲಿದೆ ನಿಮ್ಮ Mutual Fund Account
ಮಾರುಕಟ್ಟೆಯಲ್ಲಿ ಭಾಗವಹಿಸುವವರಿಂದ ಪಡೆದ ಪ್ರಾತಿನಿಧ್ಯಗಳ ಆಧಾರದ ಮೇಲೆ ಜೂನ್ 15 2022 ರ SEBI ಸುತ್ತೋಲೆಯ ಪ್ಯಾರಾಗ್ರಾಫ್ 4 ರಲ್ಲಿ ಉಲ್ಲೇಖಿಸಲಾದ ನಿಬಂಧನೆಗಳನ್ನು ನಿರ್ಧರಿಸಲಾಗಿದೆ. ಪೋಲಿಯೊಗಳ ಘನೀಕರಣಕ್ಕೆ ಸಂಭಂದಿಸಿದಂತೆ ಮಾರ್ಚ್ 31 2023 ರ ಬದಲಿಗೆ September 30 2023 ರಂದು ಜಾರಿಗೆ ಬರಲಿದೆ. SEBI ಹೊಸ ನಿಯಮದ ಪ್ರಕಾರ, ನಿಗದಿತ ಸಮಯದೊಳಗೆ ನಾಮನಿರ್ದೇಶನ ಮಾಡಲು ನೀವು ವಿಫಲವಾದರೆ ನಿಮ್ಮ ಮ್ಯೂಚುವಲ್ ಫಂಡ್ ಖಾತೆಗಳು ಫ್ರೀಜ್ ಆಗಲಿದೆ.