Mutual Fund: ಮ್ಯೂಚುಯಲ್ ಫಂಡ್ ನಲ್ಲಿ ಹಣ ಇಟ್ಟವರಿಗೆ ಬೇಸರದ ಸುದ್ದಿ, ನಷ್ಟವಾದರೆ ನಿಮಗೆ ಸಿಗಲ್ಲ ಹಣ.
ಮ್ಯೂಚುಯಲ್ ಫಂಡ್ ನಲ್ಲಿ ನಷ್ಟವಾದರೆ ನಿಮಗೆ ಯಾವುದೇ ರೀತಿಯ ಪೇಮೆಂಟ್ ಸಿಗುವುದಿಲ್ಲ.
SEBI About Mutual Fund: ದೇಶದಲ್ಲಿ ಸಾಕಷ್ಟು ಜನರು ಮ್ಯೂಚುಯಲ್ ಫಂಡ್ ಹೂಡಿಕೆಗೆ ಅವಲಂಭಿತರಾಗಿದ್ದಾರೆ. ಮ್ಯೂಚುಯಲ್ ಫಂಡ್ (Mutual Fund) ಹೂಡಿಕೆ ಸಾಕಷ್ಟು ಜನರಿಗೆ ಲಾಭ ತಂದಿದೆ.
ಒಂದು ವರ್ಷದಲ್ಲಿ ಮ್ಯೂಚುಯಲ್ ಫಂಡ್ ಹೂಡಿಕೆ ಎಷ್ಟು ಲಾಭ ತಂದಿದೆ ಎಂಬ ಸುದ್ದಿಗಳನ್ನು ನಾವು ಕೇಳುತ್ತಿರುತ್ತೇವೆ. ಆದರೆ ಎಲ್ಲ ಮ್ಯೂಚುಯಲ್ ಫಂಡ್ ಗಳು ದೊಡ್ಡ ಲಾಭ ಮಾಡುವುದಿಲ್ಲ.
ಮ್ಯೂಚುಯಲ್ ಫಂಡ್
ಬಹುಪಾಲು ಮ್ಯೂಚುಯಲ್ ಫಂಡ್ ಗಳು ತೀರಾ ಕಡಿಮೆ ಲಾಭ ಅಥವಾ ನಷ್ಟ ತರುವುದುಂಟು. ಒಂದು ಸಮೀಕ್ಷೆ ಪ್ರಕಾರ ಶೇಕಡಾ 26 .67 ರಷ್ಟು ಮ್ಯೂಚುಯಲ್ ಫಂಡ್ ಗಳು ಮಾತ್ರ 5 ವರ್ಷಗಳು ಬೆಂಚ್ ಮಾರ್ಕ್ ಇಂಡೆಕ್ಸ್ ಗಿಂತ ಹೆಚ್ಚಿನ ಮಟ್ಟದ ರಿಟರ್ನ್ಸ್ ಕೊಟ್ಟಿದೆಯಂತೆ.
ಮ್ಯೂಚುವಲ್ ಫಂಡ್ ಸೆಬಿ ಪ್ರಸ್ತಾವನೆ
ಬೆಂಚ್ ಮಾರ್ಕ್ ಇಂಡೆಕ್ಸ್ ಗಿಂತ ಹೆಚ್ಚಿನ ಮಟ್ಟದ ಲಾಭ ತರದ ಮ್ಯೂಚುಯಲ್ ಫಂಡ್ ಗಳು ಮ್ಯಾನೇಜ್ಮೆಂಟ್ ಫೀಸ್ ಪಡೆಯುವಂತಿಲ್ಲ ಎಂಬ ಪ್ರಸ್ತಾವವನ್ನು ಸೆಬಿ ಮುಂದಿಟ್ಟಿದೆ. ಬೆಂಚ್ ಮಾರ್ಕ್ ಇಂಡೆಕ್ಸ್ ಎಂದರೆ ಷೇರುಪೇಟೆಯಲ್ಲಿ ಆಯ್ದ ಷೇರುಗಳ ಸರಾಸರಿ ಬೆಲೆ.
ಉದಾಹರಣೆಗೆ ಬಿಎಸ್ಇ ಸೆನ್ಸೆಕ್ಸ್ 30, ನಿಫ್ಟಿ 50 ಇತ್ಯಾದಿ ಸೂಚ್ಯಂಕಗಳು. ಸೆನ್ಸೆಕ್ಸ್ 30 ಎಂಬುದು ಆಯ್ದ 30 ಪ್ರಮುಖ ಕಂಪನಿಗಳ ಷೇರುಗಳಾಗಿವೆ. ಈ ಷೇರುಗಳ ಬೆಲೆ ಏರಿಳಿಕೆಯ ಮೇಲೆ ಸೂಚ್ಯಂಕದಲ್ಲಿ ವ್ಯತ್ಯಾಸವಾಗುತ್ತದೆ. ಸಾಮಾನ್ಯವಾಗಿ ಈ ಸೂಚ್ಯಂಕಗಳು ವರ್ಷದಲ್ಲಿ ಶೇಕಡಾ 10 ರಷ್ಟು ಹೆಚ್ಚಾಗುತ್ತದೆ.
ಈ ಸೂಚ್ಯಂಕಗಳ ದರವನ್ನು ಮ್ಯೂಚುವಲ್ ಫಂಡ್ಗಳಿಗೆ ಮಾನದಂಡವಾಗಿ ಮಾಡಲು ಸೆಬಿ ಹೊರಟಿದೆ. ಮೇ 18 ರಂದು ಸೆಬಿ ಬರೆದ ಕನ್ಸಲ್ಟೇಶನ್ ಪೇಪರ್ ನಲ್ಲಿ ಈ ಕಾರ್ಯನಿರ್ವಹಣೆ ಆಧಾರಿತ ಶುಲ್ಕ ಮಾದರಿ ವ್ಯವಸ್ಥೆಯ ಪ್ರಸ್ತಾವ ಇದೆ. ಹೊಸ ಮಾರ್ಗ ಸೂಚಿಯ ಪ್ರಕಾರ ಹೆಚ್ಚಿನ ರಿಟರ್ನ್ ದೊರೆಯದ ಮ್ಯೂಚುಯಲ್ ಫಂಡ್ ನಲ್ಲಿ ನಷ್ಟವಾದರೆ ಇದು ನೇರವಾಗಿ ಹೂಡಿಕೆ ಮಾಡಿದವರ ಮೇಲೆ ಪರಿಣಾಮವನ್ನ ಬೀರಲಿದೆ.