eBikeGo EV: ಒಮ್ಮೆ ಚಾರ್ಜ್ ಮಾಡಿದರೆ 85 Km ಮೈಲೇಜ್, 15000 ರೂ ಕೊಟ್ಟು ಮನೆಗೆ ತನ್ನಿ ಹೊಸ EV.
eBikeGo ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ, 85 km ಮೈಲೇಜ್.
Muvi Electric Scooter: ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಇನ್ನು ವಾಹನಗಳಿಗೆ ಅಗತ್ಯವಾಗಿರುವ ಪೆಟ್ರೋಲ್, ಡೀಸೆಲ್ ಬೆಲೆ ಇತ್ತೀಚಿಗೆ ಏರಿಕೆಯಾಗುತ್ತದೆ. ಕಚ್ಚಾ ತೈಲಗಳ ಬೆಲೆಯ ಕಾರಣ ಜನರು ಹೆಚ್ಚಾಗಿ ಎಲೆಕ್ಟ್ರಿಕ್ ವಾಹನ (Electric Vehicle)ದ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ.
ಈ ಬೆಲೆಯ ಹೆಚ್ಚಳದಿಂದಾಗಿ ಭವಿಷ್ಯದಲ್ಲಿ ಹೆಚ್ಚಾಗಿ ಎಲೆಕ್ಟ್ರಿಕ್ ವಾಹನಗಳೇ ಹೆಚ್ಚಾಗುವ ಸಾಧ್ಯತೆ ಇದೆ ಎಂದರು ತಪ್ಪಾಗಲಾರದು. ಎಲೆಕ್ಟ್ರಿಕ್ ವಾಹನಗಳ ಮೇಲಿನ ಬೇಡಿಕೆ ಹೆಚ್ಚುತ್ತಿರುವ ಹಿನ್ನಲೆ ವಿವಿಧ ಕಂಪನಿಗೂ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರ್ ಹಾಗು ಬೈಕ್ ಗಳನ್ನೂ ಪರಿಚಯಿಸುತ್ತಿವೆ.
eBikeGo ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ
ಬಹು ಬೇಡಿಕೆಯ ಎಲೆಕ್ಟ್ರಿಕ್ ವಾಹನಗಳು ಇತ್ತೀಚಿಗೆ ಹೆಚ್ಚಿನ ಸೆಲ್ ಕಾಣುತ್ತಿವೆ. ಹೊಸ ಹೊಸ ಸ್ಟಾರ್ಟ್ ಅಪ್ ಕಂಪನಿಗಳು ಕೂಡ ಎಲೆಕ್ಟ್ರಿಕ್ ಮಾದರಿಯನ್ನೇ ಮಾರುಕಟ್ಟೆಗೆ ಪರಿಚಯಿಸುತ್ತಿವೆ. eBikeGo ನೂತನ ಮಾದರಿಯ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನಲ್ಲಿ ನೂತನ ಫೀಚರ್ ಅನ್ನು ಅಳವಡಿಸಿದ್ದು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ನೀಡಲಿದೆ.
ಮುವಿ ಎಲೆಕ್ಟ್ರಿಕ್ ಸ್ಕೂಟರ್
eBikeGo ಇದೀಗ ಭಾರತೀಯ ಮಾರುಕಟ್ಟೆಯಲ್ಲಿ ಮುವಿ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಸದ್ಯದಲ್ಲೇ ಪರಿಚಯಿಸಲಿದೆ. ಬಿಡುಗಡೆಗೊಳ್ಳಲಿರುವ ನೂತನ ಮುವಿ ಸಿಟಿ ಎಲೆಕ್ಟ್ರಿಕ್ ಸ್ಕೂಟರ್ ಟ್ಯೂಬ್ ಲರ್ ಸಿಲ್ವರ್ ಪ್ರೇಮ್ ಅನ್ನು ಹೊಂದಿದೆ. ಇನ್ನು ವಾಹನ ಸವಾರರ ಸುರಕ್ಷತೆಗಾಗಿ 220 ಎಂಎಂ ಮುಂಭಾಗದ ಮತ್ತು 190 ಎಂಎಂ ಹಿಂಭಾಗದ ಬ್ರೇಕಿಂಗ್ ಸಿಸ್ಟಮ್ ಅನ್ನು ಅಳವಡಿಸಲಾಗಿದೆ. ಇನ್ನು ಎಲೆಕ್ಟ್ರಿಕ್ ಸ್ಕೂಟರ್ ಹೈಡ್ರಾಲಿಕ್ ಸಂಯೋಜಿತ ಬ್ರೇಕ್ ಸಿಸ್ಟಮ್ (ಸಿಬಿಎಸ್) ನ ಮೂಲಕ ನಿರ್ವಹಾಯಿಸಲಾಗಿದೆ.
ಭರ್ಜರಿ ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್
ಇನ್ನು ಈ ಸ್ಕೂಟರ್ ಟೊರೊಟ್ ಬ್ರಶ್ ಲೆಸ್ 48V ಮೋಟಾರ್, 4.1 CV (3kW) ಅಥವಾ 35 Nm ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಈ ಸ್ಕೂಟರ್ 70 ಕಿಲೋಮೀಟರ್ ಟಾಪ್ ಸ್ಪೀಡ್ ಅನ್ನು ಹೊಂದಿದ್ದು, 48V (54.6V ಗರಿಷ್ಠ ವೋಲ್ಟೇಜ್) 5A ಡಬಲ್ ಟೊರೊಟ್ ಬ್ಯಾಟರಿ ಚಾರ್ಜರ್ ಅನ್ನು ನೀಡುತ್ತದೆ.
ಇದು ಸುಮಾರು 7 ಗಂಟೆಗಳಲ್ಲಿ ಸಂಪೂರ್ಣ ಚಾರ್ಜ್ ಆಗಲಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ನ ಬ್ಯಾಟರಿ ಬಗ್ಗೆ ಹೇಳುವುದಾದರೆ, ಇದು 2x48V/35.2Ah Li-iON ನಿಂದ ಮಾಡಲ್ಪಟ್ಟಿದ್ದು ಇಕೋ ಮೋಡ್ ನಲ್ಲಿ ಸರಿಸುಮಾರು 85 ಕಿಲೋಮೀಟರ್ ರೇಂಜ್ ನೀಡಲಿದೆ.
ಇನ್ನು ಈ ಮುವಿ ಎಲೆಕ್ಟ್ರಿಕ್ ಸ್ಕೂಟರ್ ಗೆ 85 ಸಾವಿರದಿಂದ 1 ಲಕ್ಷ ಬೆಲೆಯನ್ನು ಕಂಪನಿಯು ನಿಗದಿಪಡಿಸಿದೆ. ಈ ಮೂವಿ ಎಲೆಕ್ಟ್ರಿಕ್ ಸ್ಕೂಟರ್ ನ ಬುಕಿಂಗ್ 2023 ರ ಅಕ್ಟೊಬರ್ ನಿಂದ ಪ್ರಾರಂಭವಾಗಲಿದೆ ಎನ್ನುವ ಬಗ್ಗೆ ಕಂಪನಿ ಮಾಹಿತಿ ನೀಡಿದೆ. ಇನ್ನು ಜನರು 15000 ರೂಪಾಯಿಗಿಂತ ಕಡಿಮೆ EMI ನಲ್ಲಿ ಈ ಸ್ಕೂಟರ್ ಖರೀದಿ ಮಾಡಬಹುದಾಗಿದೆ.