Modi Scheme: ದೇಶದ ಪ್ರತಿಯೊಬ್ಬ ರೈತರ ಖಾತೆಗೆ ಬರಲಿದೆ 12000 ರೂ, ಮೋದಿ ಸರ್ಕಾರದ ಇನ್ನೊಂದು ಯೋಜನೆ.

PM Kisan ಯೋಜನೆಯ ಫಲಾನುಭವಿಗಳಿಗೆ ಇನ್ನುಮುಂದೆ ದುಪ್ಪಟ್ಟು ಹಣ.

Namo Shetkari Mahasanman Nidhi Yojana: ಸದ್ಯ ದೇಶದಲ್ಲಿ ರೈತರಿಗಾಗಿ PM Kisan ಯೋಜನೆಯೇ ಚಾಲ್ತಿಯಲ್ಲಿದೆ. PM Kisan ಯೋಜನೆಯ ಫಲಾನುಭವಿಗಳು ಇದೀಗ 15 ನೇ ಕಂತಿನ ಹಣ ಜಮಾ ಆಗುವ ನಿರೀಕ್ಷೆಯಲ್ಲಿದ್ದಾರೆ. PM ಕಿಸಾನ್ ಯೋಜನೆ ದೇಶದ ಎಲ್ಲ ರಾಜ್ಯದ ರೈತರಿಗೆ ಲಭ್ಯವಾಗುತ್ತದೆ.

ಇದೀಗ ಈ ರಾಜ್ಯದಲ್ಲಿ PM Kisan ಯೋಜನೆಯ ಫಲಾನುಭವಿಗಳಿಗೆ ದುಪ್ಪಟ್ಟು ಹಣ ಬರಲು ಮತ್ತೊಂದು ಯೋಜನೆಯನ್ನು ಪ್ರಾರಂಭಿಸಲು ಕೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ. ಈ ಯೋಜನೆ ಯಾವ ರಾಜ್ಯದಲ್ಲಿ ಪರಿಚಯವಾಗಿದೆ? ಯೋಜನೆಯಾ ಹೆಸರೇನು? ಯೋಜನೆಗೆ ಯಾರು ಯಾರು ಅರ್ಹರು? ಹೊಸ ಯೋಜನೆಯಿಂದ ರೈತರ ಖಾತೆಗೆ ಎಷ್ಟು ಹಣ ಹೆಚ್ಚು ಜಮಾ ಆಗಲಿದೆ? ಎನ್ನುವ ಎಲ್ಲ ಪ್ರಶ್ನೆಗೆ ಉತ್ತರ ಇಲ್ಲಿದೆ.

namo shetkari mahasanman nidhi yojana
Image Credit: Housing

ಈ ರಾಜ್ಯದ ರೈತರಿಗೆ ಮೋದಿ ಸರ್ಕಾರದಿಂದ ಗುಡ್ ನ್ಯೂಸ್
ಮಹಾರಾಷ್ಟ್ರದ ಶಿರಡಿ, ಅಹಮದ್‌ ನಗರದಲ್ಲಿ ಆರೋಗ್ಯ, ರೈಲು, ರಸ್ತೆ, ತೈಲ ಮತ್ತು ಅನಿಲದಂತಹ ಕ್ಷೇತ್ರಗಳಲ್ಲಿ ಸುಮಾರು 7500 ಕೋಟಿ ರೂಪಾಯಿಗಳ ಹಲವಾರು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದ್ದಾರೆ. ಮೋದಿ ಅವರು ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಮತ್ತು ಮಾಲೀಕತ್ವದ ಕಾರ್ಡ್‌ ಗಳನ್ನು ವಿತರಿಸುವುದರ ಜೊತೆಗೆ ರಾಜ್ಯದ ರೈತರಿಗೆ ಸಿಹಿ ಸುದ್ದಿ ನೀಡಿದ್ದಾರೆ.

Namo Shetkari Mahasanman Nidhi Yojana
ಮೋದಿ ಸರ್ಕಾರ ರಾಜ್ಯದ 86 ಲಕ್ಷಕ್ಕೂ ಹೆಚ್ಚು ರೈತ ಫಲಾನುಭವಿಗಳಿಗೆ “Namo Shetkari Mahasanman Nidhi Yojana ” ಆರಂಭಿಸಿದ್ದಾರೆ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಸಣ್ಣ ರೈತರಿಗೆ 2 ಲಕ್ಷ 60 ಸಾವಿರ ಕೋಟಿ ರೂ. ಹಾಗೆಯೆ PM Kisan ಯೋಜನೆಯಡಿ ಮಹಾರಾಷ್ಟ್ರದ ಸಣ್ಣ ರೈತರಿಗೆ 26 ಸಾವಿರ ಕೋಟಿ ರೂ. ನೀಡಲಾಗಿತ್ತಿದೆ ಎಂದು ಮೋದಿ ಅವರು ಹೇಳಿದ್ದಾರೆ.

Namo Shetkari Mahasanman Nidhi Yojana Update
Image Credit: Agrowon

ಪ್ರತಿಯೊಬ್ಬ ರೈತರ ಖಾತೆಗೆ ಬರಲಿದೆ 12000 ರೂ
ಮಹಾರಾಷ್ಟ್ರದ ಶೆಟ್ಕರಿ ಕುಟುಂಬಗಳಿಗೆ ಹೆಚ್ಚುವರಿಯಾಗಿ 6000 ರೂ. ಅಂದರೆ ಸ್ಥಳೀಯ ಸಣ್ಣ ರೈತರಿಗೆ 12,000 ರೂ. ಗಳನ್ನು ಸಮ್ಮಾನ್ ನಿಧಿಯಾಗಿ ನೀಡಲಾಗುತ್ತದೆ ಎಂದು ಘೋಷಿಸಲಾಗಿದೆ. ಮಹಾರಾಷ್ಟ್ರದ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 86 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ವರ್ಷಕ್ಕೆ ರೂ. 6,000 ಮೊತ್ತವನ್ನು ಪಡೆಯುತ್ತಾರೆ.

Join Nadunudi News WhatsApp Group

ಇನ್ನುಮುಂದೆ Namo Shetkari Mahasanman Nidhi ಯೋಜನೆಯಿಂದಾಗಿ ಮಹಾರಾಷ್ಟ್ರದ ರೈತರು 12000 ಹಣ ಪಡೆಯಲಿದ್ದಾರೆ. ಈ ಮೂಲಕ ರೈತರ ಖಾತೆಗೆ ದುಪ್ಪಟ್ಟು ಹಣ ಜಮಾ ಆಗಲಿದೆ ಎಂದು ಮುಖ್ಯಮಂತ್ರಿ ಅವರು ಹೇಳಿದ್ದಾರೆ. ಸದ್ಯ ಈ ಯೋಜನೆಗೆ ಮಹಾರಾಷ್ಟ್ರದಲ್ಲಿ ಜಾರಿಗೆ ಬಂದಿದ್ದು ಮಹಾರಾಷ್ಟ್ರದ ಜನರು ಈ ಯೋಜನೆಯ ಲಾಭ ಪಡೆಯಬಹುದು.

Join Nadunudi News WhatsApp Group