ದೇಶದಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಕರೋನ ರಣಕೇಕೆ ಯಾವ ರೀತಿಯಲ್ಲಿ ಮುಂದುವರೆದಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ರಾಜ್ಯದಲ್ಲಿ ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಬಹಳ ಪ್ರಮಾಣದಲ್ಲಿ ಜಾಸ್ತಿ ಆಗುತ್ತಿದ್ದು ಜನರು ಬಹಳ ಭಯದಿಂದ ಜೀವನವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದ ಚಿತ್ರರಂಗಕ್ಕೆ ಕೂಡ ಕರೋನ ಸೋಂಕು ಆವರಿಸಿದ್ದು ಅದೆಷ್ಟೋ ನಟ ನಟಿಯರು ಕರೋನ ಮಹಾಮಾರಿಗೆ ಬಲಿಯಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ.
ಹೌದು ದೇಶದಲ್ಲಿ ಹಲವು ಯುವ ನಟ ನಟಿಯರು ಮತ್ತು ಕಲಾವಿದರು ಕರೋನ ಮಹಾಮಾರಿಗೆ ಬಲಿಯಾಗಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಕರೋನ ಮಹಾಮಾರಿಗೆ ತುತ್ತಾದವರ ಸಂಖ್ಯೆ ಬಹಳ ಜಾಸ್ತಿ ಆಗಿದೆ ಎಂದು ಹೇಳಬಹುದು. ಇನ್ನು ಈಗ ಅಭಿಮಾನಿಗಳಿಗೆ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದ್ದು ದೇಶದ ಇನ್ನೊಬ್ಬ ಖ್ಯಾತ ನಿರ್ದೇಶಕ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇದು ದೇಶದ ಚಿತ್ರರಂಗದ ಕಂಬನಿಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ಆ ನಿರ್ದೇಶಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಮತ್ತು ಲೇಖಕ ಎನಿಸಿಕೊಂಡ ನಂದ್ಯಾಲ ರವಿ ಅವರು ನಿನ್ನೆ ಕರೋನ ಮಹಾಮಾರಿಗೆ ಬಲಿಯಾಗಿದ್ದು ಇವರ ಸಾವಿಗೆ ಇಡೀ ಚಿತ್ರರಂಗವೇ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಕೆಲವು ದಿನಗಳ ಹಿಂದೆ ರವಿ ಅವರು ಕರೋನ ಪರೀಕ್ಷೆ ಮಾಡಿಸಿಕೊಂಡಿದ್ದು ಅವರಿಗೆ ಕರೋನ ಸೋಂಕು ತಗುಲಿರುವುದು ದೃಢಪಟ್ಟಿದ್ದು ಅವರು ಅದಕ್ಕೆ ಬೇಕಾದ ಅಗತ್ಯ ಚಿಕ್ಸಿತೆಯನ್ನ ಕೂಡ ಪಡೆದುಕೊಳ್ಳುತ್ತಿದ್ದರು.
ಕೆಲವು ಸಮಯಗಳ ಕಾಲ ಮನೆಯಲ್ಲಿಯೇ ಚಿಕಿತ್ಸೆಯನ್ನ ಪದ್ದುಕೊಂಡಿದ್ದ ರವಿ ಅವರು ನಂತರ ಹೈದರಾಬಾದ್ ನ ಆಸ್ಪತ್ರೆಯಲ್ಲಿ ಅಗತ್ಯ ಚಿಕಿತ್ಸೆಯನ್ನ ಪಡೆದುಕೊಂಡಿದ್ದರು, ಆದರೆ ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ. ಅವರ ಅಗಲಿಕೆಗೆ ಚಿತ್ರರಂಗದ ಅನೇಕ ಗಣ್ಯರು ಸಂತಾಪವನ್ನ ಸೂಚಿಸಿದ್ದಾರೆ. ಓರೆ ಬುಜ್ಜಿಗಾ, ಲಕ್ಷ್ಮಿ ರಾವ್ ಮಾ ಇಂಟಿಕಿ ಮತ್ತು ಪವರ್ ಪ್ಲೇ ಮುಂತಾದ ಚಿತ್ರಗಳಿಗೆ ನಂದ್ಯಾಲ ರವಿ ಅವರನ್ನು ನೆನಪಿಸಿಕೊಳ್ಳಬಹುದು. ಏನೇ ಆಗಲಿ ಕರೋನ ಅನ್ನುವ ಮಹಾಮಾರಿ ಇಡೀ ಚಿತ್ರರಂಗವನ್ನ ಕಣ್ಣೀರಿನಲ್ಲಿ ಮುಳುಗುವಂತೆ ಮಾಡಿದೆ ಎಂದು ಹೇಳಬಹುದು. ಸ್ನೇಹಿತರೆ ನಂದ್ಯಾಲ ರವಿ ಅವರ ಆತ್ಮಕ್ಕೆ ಆ ದೇವರು ಶಾಂತಿ ಕೊಡಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.