ಯಾಕೋ ಕನ್ನಡ ಮತ್ತು ಇತರೆ ಚಿತ್ರರಂಗದ ಸಮಯ ಸ್ವಲ್ಪಾನು ಸರಿ ಇಲ್ಲ ಅಂತ ಕಾಣುತ್ತದೆ. ಹೌದು ಕರೋನ ಮಹಾಮಾರಿ ಅನ್ನುವುದು ದೇಶದಲ್ಲಿ ಆವರಿಸಿದ ಕ್ಷಣದಿಂದ ಅದೆಷ್ಟೋ ನಟ ನಟಿಯರು ಕರೋನ ಸೋಂಕಿಗೆ ಬಲಿಯಾಗಿದ್ದು ಚಿತ್ರರಂಗಕ್ಕೆ ತುಂಬಲಾರದ ನಷ್ಟವನ್ನ ಉಂಟುಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕರೋನ ಮಹಾಮಾರಿ ಸೋಂಕು ಚಿತ್ರರಂಗಕ್ಕೆ ಆವರಿಸಿದ್ದು ನಟ ನಟಿಯರು ಮತ್ತು ಕೆಲವು ಕಲಾವಿದರು ಕರೋನ ಸೋಂಕಿಗೆ ಬಲಿಯಾಗುತ್ತಿದ್ದು ಇದು ಜನರ ಬೇಸರಕ್ಕೆ ಕೂಡ ಕಾರಣವಾಗಿದೆ ಎಂದು ಹೇಳಬಹುದು. ಇನ್ನು ಸಾವಿನ ಕೇಕೆ ಇನ್ನೂ ಕೂಡ ಮುಂದಿವರೆದಿದ್ದು ಉಸಿರಾಟದ ಸಮಸ್ಯೆಯಿಂದ ಖ್ಯಾತ ನಟ ಮತ್ತು ನಿರೂಪಕ ಇಹಲೋಕವನ್ನ ತ್ಯಜಿಸಿದ್ದಾರೆ ಎಂದು ಹೇಳಬಹುದು.
ಇನ್ನು ಇವರ ಅಗಲಿಕೆಗೆ ಇಡೀ ಚಿತ್ರರಂಗವೇ ಕಂಬನಿಯನ್ನ ಮಿಡಿದಿದೆ ಎಂದು ಹೇಳಬಹುದು. ಹಾಗಾದರೆ ಆ ನಟ ಮತ್ತು ನಿರೂಪಕ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ದೇಶದಲ್ಲಿ ಖ್ಯಾತ ನಟ ಮತ್ತು ನಿರ್ಮಾಪಕ ಅನಿಸಿಕೊಂಡಿರುವ ಟಿ ನರಸಿಂಹ ರಾವ್ ಅವರು ಕರೋನ ಸೋಂಕಿನಿಂದ ವಿಧಿವಶರಾಗಿದ್ದಾರೆ. ಕೆಲವು ದಿನಗಳ ಹಿಂದೆ ಟಿ ನರಸಿಂಹ ರಾವ್ ಅವರಿಗೆ ಕರೋನ ಸೋಂಕು ಇರುವುದು ದೃಢಪಟ್ಟಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನ ಪಡೆದುಕೊಳ್ಳುತ್ತಿದ್ದರು, ಆದರೆ ಈಗ ಚಿಕಿತ್ಸೆ ಫಲಕಾರಿಯಾಗದೆ ಅವರು ವಿಧಿವಶರಾಗಿದ್ದಾರೆ.
ಟಿಎನ್‌ಆರ್‌ನೊಂದಿಗೆ ಫ್ರಾಂಕ್ಲಿ ಸ್ಪೀಕಿಂಗ್ ಅವರ ಸಂದರ್ಶನ ಕಾರ್ಯಕ್ರಮಕ್ಕಾಗಿ ಅವರು ವಿಶೇಷವಾಗಿ ಪ್ರಸಿದ್ಧರಾಗಿದ್ದರು. ಇತ್ತೀಚೆಗೆ ಈ ನಟನನ್ನು ಹೈದರಾಬಾದ್‌ನ ಮಲ್ಕಜ್‌ಗಿರಿಯಲ್ಲಿರುವ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು ಎಂದು ಹೇಳಲಾಗಿದೆ.ಸ್ವಲ್ಪ ಸಮಯದ ಹಿಂದೆ ನಟ ಟಿಎನ್‌ಆರ್‌ಗೆ ಕೋವಿಡ್ 19 ಸಂಭವಿಸಿದೆ. ವೈದ್ಯರು ಹೇಳುವ ಪ್ರಕಾರ ಅವರು ಹಂತ ಹಂತವಾಗಿ ಸುಧಾರಿಸಿಕೊಳ್ಳುತ್ತಿದ್ದರು, ಆದರೆ ಅವರಿಗೆ ಸಡನ್ ಆಗಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡ ಕಾರಣ ಅವರಿಗೆ ವೆಂಟಿಲೇಟರ್ ಕೊಡಬೇಕಾಗಿತ್ತು, ಆದರೆ ಅವರಿಗೆ ಉಸಿರಾಟದ ಸಮಸ್ಯೆ ತೀವ್ರವಾಗಿ ಕಾಣಿಸಿಕೊಂಡ ಕಾರಣ ಅವರನ್ನ ಉಳಿಸಿಕೊಳ್ಳಲು ಆಗಲಿಲ್ಲ ಎಂದು ವೈದ್ಯರು ಹೇಳಿದ್ದಾರೆ.
ಇವರ ನಿಧನದ ಸುದ್ದಿಯನ್ನ ಕೇಳಿ ದೇಶದ ಹಲವು ನಟ ನಟಿಯರು ಸಂತಾಪವನ್ನ ವ್ಯಕ್ತಪಡಿಸಿದ್ದಾರೆ. ಕರೋನ ಅನ್ನುವುದು ಇಡೀ ಚಿತ್ರರಂಗಕ್ಕೆ ಆವರಿಸಿದ್ದು ಇದು ಚಿತ್ರರಂಗದ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಏನೇ ಆಗಲಿ ನರಸಿಂಹ ರಾವ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.