Rishabh Shetty And Narendra Modi: ಕಾಂತಾರ ಚಿತ್ರದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಇದು ಕನ್ನಡದ ಮಹಿಮೆ ಅಂದ ಕನ್ನಡಿಗರು.

Narendra Modi About Kantara: ಏರೋ ಇಂಡಿಯಾ ಶೋ ಉದ್ಘಾಟನೆಯ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ (Narendra Modi) ಭಾನುವಾರದಂದು ಬೆಂಗಳೂರಿಗೆ ಭೇಟಿ ನೀಡಿದ್ದರು.

ಈ ವೇಳೆ ಮೋದಿ ಚಿತ್ರರಂಗದ ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರಿಗೆ ಔತಣಕೂಟ ಆವ್ಹಾನ ನೀಡಿದ್ದರು. ಮೋದಿ ನಡೆಸಿದ ಔತಣ ಕೂಟದಲ್ಲಿ ಅನೇಕ ಗಣ್ಯರ ಜೊತೆ ಮೋದಿ ಸಂವಾದ ನಡೆಸಿದ್ದಾರೆ.

Prime Minister Modi spoke about the film Kantara
Image credit: instagram

ಕಾಂತಾರ ಚಿತ್ರದ ಬಗ್ಗೆ ಮೋದಿ ಮೆಚ್ಚುಗೆ
ಮೋದಿ ನಡೆಸಿದ ಔತಣ ಕೂಟಕ್ಕೆ ಯಶ್ (Yash), ರಿಷಬ್ (Rishabh Shetty), ಅಶ್ವಿನಿ ಪುನೀತ್ ರಾಜಕುಮಾರ್ (Ashwini Puneeth Rajkumar) ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಈ ವೇಳೆ ಕಾಂತಾರ (Kantara) ಸ್ಟಾರ್ ರಿಷಬ್ ಶೆಟ್ಟಿ ಅವರನ್ನು ಭೇಟಿ ಮಾಡಿ ಕಾಂತಾರ ಚಿತ್ರದ ಯಶಸ್ಸಿನ ಬಗ್ಗೆ ಮೋದಿ ಮೆಚ್ಚುಗೆ ಸೂಚಿಸಿದ್ದಾರೆ.

Actor Rishabh Shetty appeared with Modi
Image Credit: instagram

ಮೋದಿ ಜೊತೆಗಿನ ಭೇಟಿಯ ಬಗ್ಗೆ ಹೇಳಿಕೊಂಡ ರಿಷಬ್ ಶೆಟ್ಟಿ
ಮೋದಿ ಅವರನ್ನು ಭೇಟಿ ಮಾಡಿದ್ದೂ ನನ್ನ ಕನಸು ನನಸಾದ ಕ್ಷಣ ಎಂದು ರಿಷಬ್ ಹೇಳಿದ್ದಾರೆ. ನಾನು ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಹಾನ್ ನಾಯಕರೆಂದು ಕರೆಯುತ್ತೇನೆ. ಇದೀಗ ಅವರನ್ನು ಭೇಟಿ ಮಾಡಿದ್ದಕ್ಕೆ ತುಂಬಾ ಖುಷಿಯಾಗಿದೆ.

ಕನ್ನಡ ಚಿತ್ರರಂಗದ ಮತ್ತು ಭಾರತೀಯ ಚಿತ್ರರಂಗದಲ್ಲಿ ಏನೆಲ್ಲಾ ನಡೆಯುತ್ತಿದೆ? ನಮಗೆ ಇಲ್ಲಿ ಇನ್ನು ಏನೆಲ್ಲಾ ಬೇಕು ಎಂಬ ಬಗ್ಗೆ ತಿಳಿಸಿದ್ರು. ಅಷ್ಟೇ ಅಲ್ಲದೆ ಅವರ ಮುಂದಿನ ಯೋಜನೆಯ ಬಗ್ಗೆ ಕೂಡ ನಮಗೆ ತಿಳಿಸಿದ್ದಾರೆ ಎಂದು ರಿಷಬ್ ಹೇಳಿದ್ದಾರೆ.

Join Nadunudi News WhatsApp Group

 

View this post on Instagram

 

A post shared by Rishab Shetty (@rishabshettyofficial)

ಕಾಂತಾರ ಚಿತ್ರಕ್ಕೆ ಮೋದಿ ಮೆಚ್ಚುಗೆಯ ಬಗ್ಗೆ ರಿಷಬ್ ಮಾತು
“ಕಾಂತಾರ ಸಿನಿಮಾದ ಬಗ್ಗೆ ಮೋದಿ ಅವರು ಮಾತನಾಡಿದ್ದೆ ನನಗೆ ಖುಷಿ ಕೊಟ್ಟಿದೆ. ಕಾಂತಾರ ಚಿತ್ರದ ಬಗ್ಗೆ ಅವರು ಸಾಕಷ್ಟು ತಿಳಿದಿದ್ದಾರೆ.

ನಮ್ಮ ನಾಡಿನ ಕಥೆ, ನಮ್ಮ ಜಾನಪದ, ನಮ್ಮ ನಂಬಿಕೆ, ಸಂಪ್ರದಾಯವನ್ನು ಇಟ್ಟುಕೊಂಡು ಮಾಡಿದ ಕಾಂತಾರ ಸಿನಿಮಾ ಜಾಗತಿಕ ಮಟ್ಟದಲ್ಲಿ ಹೋಗಿದ್ದಕ್ಕೆ ಅಭಿನಂದನೆ ತಿಳಿಸಿದರು. ಅವರ ಬಾಯಲ್ಲಿ ಹಲವು ಬಾರಿ ಕಾಂತಾರ ಕಾಂತಾರ ಶಬ್ದ ಕೇಳಿ ನನಗೆ ತುಂಬಾ ಖುಷಿ ಆಯಿತು” ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ.

Join Nadunudi News WhatsApp Group