Narendra Modi: ಟೀಮ್ ಇಂಡಿಯಾವನ್ನು ಅದ್ದೂರಿಯಾಗಿ ಸ್ವಾಗತಿಸಿದ ಮೋದಿಯಿಂದ ದೊಡ್ಡ ಘೋಷಣೆ.

ಟೀಮ್ ಇಂಡಿಯಾ ಜೊತೆ ಮಾತನಾಡಿದ ಪ್ರಧಾನಿ ಮೋದಿ

Narendra Modi Meets Indian Cricketers: ಇನ್ನು ಜೂನ್ 29 ರಂದು ನಡೆದ ವಿಶ್ವಕಪ್ ಟೋರ್ನಿಯಲ್ಲಿ ಸೌತ್ ಆಫ್ರಿಕಾವನ್ನು ಸೋಲಿಸಿ Team India ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಟೀಮ್ ಇಂಡಿಯಾದ ಗೆಲುವನ್ನು ಇಡೀ ಭಾರತೀಯರು ಸಂಭ್ರಮಿಸಿದ್ದಾರೆ. ಇನ್ನು ಜುಲೈ 4 ಗುರುವಾರ ಟೀಮ್ ಇಂಡಿಯಾ ತಾಯ್ನಾಡಿಗೆ ಮರಳಿದ್ದು,. ಇಲ್ಲಿ ಅದ್ದೂರಿಯಾಗಿ ವಿಜಯ ಸಂಭ್ರಮಾಚರಣೆ ಮಾಡಲಾಗಿತ್ತು.

ಈ ಸೆಲೆಬ್ರೆಷನ್ ನಲ್ಲಿ ಟೀಮ್ ಇಂಡಿಯಾದ ಪ್ರತಿ ಆಟಗಾರರು ಡಾನ್ಸ್ ಮಾಡಿದ್ದು, ವಿಡಿಯೋ ಹಾಗೂ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ. ಇನ್ನು ವಿಶ್ವ ಚಾಂಪಿಯನ್ ಆದ ಟೀಮ್ ಇಂಡಿಯಾಗೆ ದೇಶದ ಪ್ರಧಾನಿ ವಿಶೇಷವಾಗಿ ಅಭಿನಂದನೆ ಸಲ್ಲಿಸಿದರು. ಈ ವೇಳೆ ಟೀಮ್ ಇಂಡಿಯಾವನ್ನು ಅದ್ದೂರಿಯಾಗಿ ಸ್ವಾಗತಿಸಿದ ಮೋದಿ ದೊಡ್ಡ ಘೋಷಣೆ ಮಾಡಿದ್ದಾರೆ.

Narendra Modi Meets Indian Cricketers
Image Credit: Livemint

ಟೀಮ್ ಇಂಡಿಯಾವನ್ನು ಅದ್ದೂರಿಯಾಗಿ ಸ್ವಾಗತಿಸಿದ ಮೋದಿ 
ಪ್ರಧಾನಿ ನರೇಂದ್ರ ಮೋದಿ ಅವರು ಭಾರತ ತಂಡವನ್ನು ತಮ್ಮ ನಿವಾಸಕ್ಕೆ ಆಹ್ವಾನಿಸಿ ಆತಿಥ್ಯ ನೀಡಿದರು. ಗುರುವಾರ ಬೆಳಗ್ಗೆ ಭಾರತಕ್ಕೆ ಮರಳಿದ ಟೀಮ್ ಇಂಡಿಯಾ ಆಟಗಾರರೀಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಕ್ರಿಕೆಟ್ ಗಣ್ಯರಿಗೆ ಆತಿಥ್ಯ ನೀಡಿದ ನಂತರ, ನರೇಂದ್ರ ಮೋದಿ ಅವರು ತಮ್ಮ ಅಧಿಕೃತ ಹ್ಯಾಂಡಲ್‌ ನಲ್ಲಿ ಅಧಿಕೃತ ಪ್ರಕಟಣೆಗಳ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

ಭಾರತ ತಂಡ ಗುರುವಾರ ತವರಿಗೆ ಮರಳಿತು ಮತ್ತು ಜುಲೈ 4, ಗುರುವಾರದಂದು 7 ಲೋಕ ಕಲ್ಯಾಣ ಮಾರ್ಗದಲ್ಲಿರುವ ಮೋದಿ ಅವರ ನಿವಾಸಕ್ಕೆ ಭೇಟಿ ನೀಡಿತು. ನಾಯಕ ರೋಹಿತ್ ಶರ್ಮಾ, ಮುಖ್ಯ ಕೋಚ್ ರಾಹುಲ್ ದ್ರಾವಿಡ್, ವಿರಾಟ್ ಕೊಹ್ಲಿ, ಹಾರ್ದಿಕ್ ಪಾಂಡ್ಯ, ರಿಷಬ್ ಪಂತ್ ಮತ್ತು ತಂಡದ ಇತರ ಸದ್ಯಸ್ಯರು ಬೆಳಗ್ಗೆ 11 ರ ಸುಮಾರಿಗೆ ತಂಡದ ಇತರ ಸದಸ್ಯರೊಂದಿಗೆ ಮೋದಿ ಸಂವಾದ ನಡೆಸಿದರು.

Join Nadunudi News WhatsApp Group

ಮೋದಿಯಿಂದ ದೊಡ್ಡ ಘೋಷಣೆ
ನರೇಂದ್ರ ಮೋದಿ ಅವರು ತಂಡಕ್ಕೆ ಒಂದು ಗಂಟೆ ಆತಿಥ್ಯ ನೀಡಿದರು. ನಂತರ, ಮೋದಿ ಎಕ್ಸ್‌ ನಲ್ಲಿ ಫೋಟೋಗಳನ್ನು ಹಂಚಿಕೊಂಡರು. ನಮ್ಮ ಚಾಂಪಿಯನ್‌ ಗಳೊಂದಿಗೆ ಅತ್ಯುತ್ತಮ ಭೇಟಿ. ವಿಶ್ವಕಪ್ ವಿಜೇತ ತಂಡಕ್ಕೆ ಆತಿಥ್ಯ ನೀಡಿದ್ದೇನೆ ಮತ್ತು ಟೂರ್ನಿಯುದ್ದಕ್ಕೂ ಅವರ ಅನುಭವಗಳ ಬಗ್ಗೆ ಮಾತನಾಡಿದ್ದಾರೆ” ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಪ್ರಧಾನಿ ಮೋದಿ ಅವರ ನಿವಾಸದಲ್ಲಿ ಭೇಟಿಯಾದ ಬಳಿಕ ಭಾರತದ ಆಟಗಾರರು ಮುಂಬೈಗೆ ತೆರಳಿದರು.

ಬಿಸಿಸಿಐ ಮರೈನ್ ಡ್ರೈವ್‌ ನಿಂದ ವಾಂಖೆಡೆ ಸ್ಟೇಡಿಯಂಗೆ ತೆರೆದ ಬಸ್‌ ನಲ್ಲಿ ಮೆರವಣಿಗೆ ಆಯೋಜಿಸಲಾಗಿತ್ತು. ಭಾರತ ತಂಡ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರಿಂದ 125 ಕೋಟಿ ರೂಪಾಯಿ ಬಹುಮಾನ ಪಡೆಯಲಿದೆ. ಭಾರತೀಯ ಕ್ರಿಕೆಟ್ ತಂಡಕ್ಕೆ ತಮ್ಮ ಅಧಿಕೃತ ನಿವಾಸದಲ್ಲಿ ಆತಿಥ್ಯ ನೀಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಸಿಸಿಐ ಧನ್ಯವಾದ ಅರ್ಪಿಸಿದೆ. ನಿಮ್ಮ ಸ್ಪೂರ್ತಿದಾಯಕ ಮಾತುಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು ಎಂದಿದ್ದಾರೆ.

PM Modi On Team India's T20 World Cup Triumph
Image Credit: The Dailyguardian

Join Nadunudi News WhatsApp Group