Narendra Modi About Pathan: ಪಠಾಣ್ ಚಿತ್ರದ ಬಗ್ಗೆ ಮಾತನಾಡಿದ ನರೇಂದ್ರ ಮೋದಿ, ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ.

PM Narendra Modi About Pathan Movie: ವಿಶ್ವದೆಲ್ಲೆಡೆ ಪಠಾಣ್ ಚಿತ್ರ (Pathan Movie) ಬಾರಿ ಸದ್ದು ಮಾಡಿದೆ.

ಭಾರತದ ಜೊತೆಗೆ ವಿದೇಶದಲ್ಲಿಯೂ ಕೂಡ ಪಠಾಣ್ ಬಾಕ್ಸ್ ಆಫೀಸ್ ದೂಳಿಪಟ ಮಾಡಿದೆ. ಇದೀಗ ಪಠಾಣ್ ಚಿತ್ರದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಲೋಕಸಭೆಯಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Narendra Modi appreciated Shah Rukh Khan's film Pathan.
Image Credit: instagram

ಪಠಾಣ್ ಚಿತ್ರದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ
ಪಠಾಣ್ ಚಿತ್ರ ಬಹುತೇಕ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಅದರಲ್ಲೂ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿಯೂ ಈ ಚಿತ್ರ ಮೋಡಿ ಮಾಡುತ್ತಿದೆ. ಅಲ್ಲಿನ ಐನಾಕ್ಸ್ ರಾಮ್ ಮುನ್ಷಿ ಬ್ಯಾಗ್ ನ ಮಾಲ್ ನಲ್ಲಿ ಪಠಾಣ್ ಚಿತ್ರದ ಶೋ ಗಳು ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ.

ಈ ವಿಚಾರವನ್ನೇ ಲೋಕಸಭೆಯಲ್ಲಿ ಕೈಗೆತ್ತಿಕೊಂಡ ಪ್ರಧಾನಿ ಮೋದಿ, ನೇರವಾಗಿ ಸಿನಿಮಾ ಹೆಸರನ್ನು ಹೇಳದೆ, “ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ದಶಕಗಳ ಬಳಿಕ ಚಿತ್ರಮಂದಿರಗಳು ಹೌಸ್ ಫುಲ್ ಆಗುತ್ತಿದೆ. ಇದು ಖುಷಿಯ ವಿಚಾರ” ಎಂದಿದ್ದಾರೆ.

Narendra Modi spoke about Pathan film in Lok Sabha
Image credit: swarajyamag

ಪಠಾಣ್ ಮೂವಿ ಇಲ್ಲಿವರೆಗಿನ ಗಳಿಕೆ
ಇನ್ನು ಪಠಾಣ್ ಚಿತ್ರ ಬಾಕ್ಸ್ ಆಫೀಸ್ ಅನ್ನು ದೂಳಿಪಟ ಮಾಡಿದೆ. ಶಾರುಖ್ ಹಾಗು ದೀಪಿಕಾ ಪಡುಕೋಣೆ ಅಭಿನಯಾದ್ ಪಠಾಣ್ ಚಿತ್ರ ಇದೀಗ 865 ಕೋಟಿ ಕಲೆಕ್ಷನ್ ಮಾಡಿದೆ. ಪಠಾಣ್ ಚಿತ್ರ ಕೋಟಿ ಕೋಟಿ ಹಣ ಬಾಚಿಕೊಂಡಿದೆ. ಅದೆಷ್ಟೋ ಸಿನಿಮಾಗಳ ಧಾಖಲೆಯನ್ನು ಪಠಾಣ್ ಬ್ರೇಕ್ ಮಾಡಿದೆ.

Join Nadunudi News WhatsApp Group

ಅಮೇರಿಕಾದಲ್ಲಿ ಬಾಹುಬಲಿ 2 ಕಲೆಕ್ಷನ್ ಬ್ರೇಕ್ ಮಾಡಿದೆ. ಆರ್.ಆರ್.ಆರ್ US ನಲ್ಲಿ 14.3 ಮಿಲಿಯನ್ ಡಾಲರ್ ಗಳಿಸಿದೆ. ಪಠಾಣ್ ಇತ್ತೀಚಿಗೆ $15 ಮಿಲಿಯನ್ ಡಾಲರ್ ಗಳಿಸುವ ಮೂಲಕ ಆರ್.ಆರ್.ಆರ್ ಚಿತ್ರದ ದಾಖಲೆಯನ್ನು ಬೇಕ್ ಮಾಡಿದೆ.

Narendra Modi wished the success of Pathan movie
Image Credit: thehindubusinessline

ಶಾರುಖ್ ಖಾನ್ (Shah Rukh Khan) ಅಭಿನಯದ ಪಠಾಣ್ ಸಿನಿಮಾ ಜನವರಿ 25 ರಂದು ವಿಶ್ವದಾದ್ಯಂತ 7,700 ಸ್ಕ್ರೀನ್ ಗಳಲ್ಲಿ ಬಿಡುಗಡೆಯಾಗಿತ್ತು.ಅದರಲ್ಲಿ ಭಾರತದಲ್ಲಿ 5200, ವಿದೇಶದಲ್ಲಿ 2500 ಸ್ಕ್ರೀನ್ ನಲ್ಲಿ ಆಕ್ಷನ್ ತ್ರಿಲ್ಲರ್ ಪಠಾಣ್ ಚಿತ್ರ ಬಿಡುಗಡೆಗೊಂಡಿತ್ತು. ಪಠಾಣ್ ಸಿನಿಮ ಹಿಂದಿ ಜೊತೆಗೆ ತೆಲಗು ಮತ್ತು ತಮಿಳು ಭಾಷೆಗಳಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದೆ.

Narendra Modi wished success of Pathan movie in Lok Sabha
Image Credit: instagram

ಪಠಾಣ್ ಚಿತ್ರ ವಿಶ್ವದೆಲ್ಲೆಡೆ ಜನಪ್ರಿಯತೆ ಪಡೆದುಕೊಂಡಿದೆ. ಇನ್ನು ಪಠಾಣ್ ಮೂವಿ ಇನ್ನೇನು ಕೆಲವೇ ದಿನಗಳಲ್ಲಿ 1000 ಕೋಟಿ ಗಳಿಸುದರಲ್ಲಿ ಯಾವುದೇ ಸಂದೇಹವಿಲ್ಲ.

ಬಾಲಿವುಡ್ ನಲ್ಲಿ ಪಠಾಣ್ ಬಿಗ್ ಸಕ್ಸಸ್ ಕಾಣುತ್ತಿದೆ. ಇದೀಗ ಪಠಾಣ್ ಚಿತ್ರಕ್ಕೆ ಮೋದಿ ಅವರು ಪಠಾಣ್ ಚಿತ್ರಕ್ಕೆ ಮೆಚ್ಚುಗೆ ಸೂಚಿಸಿರುವುದು ಬಹಳ ಹೆಮ್ಮೆಯ ವಿಷಯವಾಗಿದೆ.

Join Nadunudi News WhatsApp Group