Lakshadweep: ಸಕತ್ ವೈರಲ್ ಆಗಿರುವ ಲಕ್ಷದ್ವೀಪದ ಈ ಸಮುದ್ರದ ತೀರಕ್ಕೆ ಹೋಗಲು ಎಷ್ಟು ಹಣ ಬೇಕು…? ಮೋದಿ ಮೋಡಿ.
ಸಕತ್ ವೈರಲ್ ಆಗಿರುವ ಲಕ್ಷದ್ವೀಪ ಸಮುದ್ರ ತೀರಕ್ಕೆ ಹೋಗಲು ಎಷ್ಟು ಹಣ ಬೇಕು...?
Lakshadweep Beach and Lourney: ಜಗತ್ತಿನಲ್ಲಿ ಸಾಕಷ್ಟು ಸುಂದರ ತಾಣಗಳಿವೆ. ಪ್ರವಾಸಿಗರು ಆಕರ್ಷಣೀಯ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳುತ್ತಾರೆ. ಜಗತ್ತಿನಾದ್ಯಂತ ಇನ್ನು ಕಂಡಿರ ಅದೆಷ್ಟೋ ಅದ್ಭುತ ಸ್ಥಳಗಳಿವೆ. ಸದ್ಯ ಇತ್ತೀಚೆಗಷ್ಟೇ ನರೇಂದ್ರ ಮೋದಿ (Narendra Modi) ಅವರು ಭೇಟಿ ನೀಡಿದ್ದ ಲಕ್ಷದ್ವೀಪದ (Lakshadweep) ಸ್ಥಳ ಎಲ್ಲ ಗಮನ ಸೆಳೆಯುತ್ತಿದೆ.
ಮೋದಿ ಅವರು ಎರಡು ದಿನಗಳ ಲಸ್ಕದ್ವೀಪ ಪ್ರವಾಸಕ್ಕೆ ತೆರೆಳಿದ್ದು, ಸಮಾಜಿಕ ಜಾಲತಾಣದಲ್ಲಿಈ ಲಕ್ಷದ್ವೀಪದ ಬಗ್ಗೆ ಚರ್ಚೆ ಜೋರಾಗಿಯೇ ನಡೆಯುತ್ತಿದೆ. ಲಕ್ಷದ್ವೀಪದ ಫೋಟೋವನ್ನು ಕಂಡವರು ಈ ಸುಂದರ ಸ್ಥಳಕ್ಕೆ ಭೇಟಿ ನೀಡಬೇಕು ಎಂದುಕೊಂಡಿದ್ದರೆ, ಈ ಲಕ್ಷದ್ವೀಪವನ್ನು ಹೇಗೆ ತಲುಪುವುದು..? ಪ್ರಯಾಣಕ್ಕೆ ಆಗುವ ಖರ್ಚೆಷ್ಟು..? ಎನ್ನುವ ಬಗ್ಗೆ ಇದೀಗ ನಾವು ಮಾಹಿತಿ ತಿಳಿಯೋಣ.
ಬಾರಿ ಕ್ರೇಜ್ ಹುಟ್ಟಿಸುತ್ತಿದೆ ಮೋದಿ ಭೇಟಿ ನೀಡಿದ ಲಕ್ಷದ್ವೀಪ
ಅರಬ್ಬೀ ಸಮುದ್ರದ ಕರಾವಳಿಯಲ್ಲಿರುವ ಲಕ್ಷದ್ವೀಪವನ್ನು ಹಡಗು ಅಥವಾ ವಿಮಾನದ ಮೂಲಕ ಮಾತ್ರ ತಲುಪಬಹುದು. ಕೊಚ್ಚಿಯಿಂದ ಲಕ್ಷದ್ವೀಪಕ್ಕೆ ಹಡಗಿನ ಪ್ರಯಾಣವು 14 ರಿಂದ 20 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪರ್ಯಾಯವಾಗಿ ನೀವು ಕೊಚ್ಚಿಯಿಂದ ನೇರವಾಗಿ ಅಗತ್ತಿ ವಿಮಾನ ನಿಲ್ದಾಣವನ್ನು ತಲುಪಬಹುದು. ಲಕ್ಷದ್ವೀಪದಲ್ಲಿರುವ ಏಕೈಕ ವಿಮಾನ ನಿಲ್ದಾಣ ಇದಾಗಿದೆ. ಅಗತ್ತಿ ದ್ವೀಪದಿಂದ ನೀವು ಮಿನಿಕೈ ದ್ವೀಪ, ಕಲ್ಪೇನಿ ದ್ವೀಪ ಮತ್ತು ಇತರ ದ್ವೀಪಗಳಿಗೆ ದೋಣಿ ಮೂಲಕ ಹೋಗಬಹುದು.
ನೀವು ಅಗತ್ತಿಯಿಂದ ಕವರಟ್ಟಿ ದ್ವೀಪಕ್ಕೆ ಹೆಲಿಕಾಪ್ಟರ್ ಸವಾರಿ ಮಾಡಬಹುದು. ಲಕ್ಷದ್ವೀಪದ ಸುಂದರ ಕಡಲ ತೀರಗಳು ನೀರೊಳಗಿನ ಜೀವನವನ್ನು ವೀಕ್ಷಿಸುವಂತಹ ಅನೇಕ ಚಟುವಟಿಕೆಗಳನ್ನು ಆನಂದಿಸಲು ಅವಕಾಶವನ್ನು ನೀಡುತ್ತವೆ. ಸ್ನಾರ್ಕ್ಲಿಂಗ್, ಸ್ಕೂಬಾ ಡೈವಿಂಗ್ ಮತ್ತು ನೀರೊಳಗಿನ ನಡಿಗೆಯಂತಹ ಸಾಹಸಗಳನ್ನು ಇಲ್ಲಿ ಮಾಡಬಹುದು. ಅಷ್ಟೇ ಅಲ್ಲ, ಪ್ರವಾಸಿಗರು ಇಲ್ಲಿ ಕಯಾಕಿಂಗ್, ಕ್ಯಾನೋಯಿಂಗ್, ಜೆಟ್ ಸ್ಕೀಯಿಂಗ್, ಕೈಟ್‌ಸರ್ಫಿಂಗ್, ಪ್ಯಾರಾಸೈಲಿಂಗ್ ಅನ್ನು ಆನಂದಿಸಬಹುದು.
ಲಕ್ಷದ್ವೀಪದಲ್ಲಿ ಸಿಗುವ ಬೆಸ್ಟ್ ಆಹಾರಗಳು
ಮಲಬಾರ್ ಪಾಕ ಪದ್ಧತಿಯು ಲಕ್ಷದ್ವೀಪದ ಅನೇಕ ಮನೆಗಳಲ್ಲಿ ಕಂಡುಬರುತ್ತದೆ. ಸ್ವಲ್ಪ ತೆಂಗಿನೆಣ್ಣೆ ಮತ್ತು ಕರಿಬೇವಿನ ಎಲೆಗಳು ಯಾವುದೇ ಖಾದ್ಯದಲ್ಲಿ ಖಂಡಿತವಾಗಿಯೂ ಮ್ಯಾಜಿಕ್ ಮಾಡುತ್ತದೆ. ವಿವಿಧ ಬಗೆಯ ಮೀನುಗಳ ಜೊತೆಗೆ ಅನ್ನವೂ ಇಲ್ಲಿನ ಪ್ರಧಾನ ಆಹಾರವಾಗಿದೆ. ಮೊಟ್ಟೆ ಮತ್ತು ಅಕ್ಕಿಯಿಂದ ಮಾಡಿದ ಖಾದ್ಯವನ್ನು ಕಿಲಾಂಜಿ ಎಂದು ಕರೆಯಲಾಗುತ್ತದೆ. ಇದನ್ನು ಮದುವೆಗಳಲ್ಲಿ ವ್ಯಾಪಕವಾಗಿ ತಯಾರಿಸಲಾಗುತ್ತದೆ. ಮಿನಿಕೈ ದ್ವೀಪದ ಪ್ರಸಿದ್ಧ ಮೂಸ್ ಕಬಾಬ್ ಅನ್ನು ಟ್ಯೂನ ಮೀನುಗಳಿಂದ ತಯಾರಿಸಲಾಗುತ್ತದೆ. ಆಕ್ಟೋಪಸ್ ಫ್ರೈ ಎಂಬುದು ಲಕ್ಷದ್ವೀಪದಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಭಕ್ಷ್ಯವಾಗಿದೆ.
ಲಕ್ಷದ್ವೀಪದ ಈ ಸಮುದ್ರದ ತೀರಕ್ಕೆ ಹೋಗಲು ಎಷ್ಟು ಹಣ ಬೇಕು…?
ಲಕ್ಷದ್ವೀಪದ ಪ್ರವಾಸ ದುಬಾರಿಯಾಗಿಯೇ ಇರುತ್ತದೆ. ಇನ್ನು 4 ದಿನಗಳು, 3 ರಾತ್ರಿಗಳ ಲಕ್ಷದ್ವೀಪ ಪ್ರವಾಸದ ಪ್ಯಾಕೇಜ್ ಗಳು ಸುಮಾರು ರೂ. 23,049 ರೂ.ನಿಂದ ಪ್ರಾರಂಭವಾಗಿದೆ. ಆದರೆ ಈ ಪ್ಯಾಕೇಜ್ ಲಕ್ಷದ್ವೀಪ ತಲುಪಿದ ನಂತರ ಪ್ರಾರಂಭವಾಗುತ್ತದೆ. ಲಕ್ಷದ್ವೀಪವನ್ನು ತಲುಪಲು ಮತ್ತು ಹಿಂತಿರುಗಲು ನೀವು ನಿಮ್ಮ ಸ್ವಂತ ವ್ಯವಸ್ಥೆಯನ್ನು ಮಾಡಬೇಕು.
ನೀವು ಕಡಿಮೆ ಬಜೆಟ್ ನಲ್ಲಿ ಲಕ್ಷದ್ವೀಪಕ್ಕೆ ಭೇಟಿ ನೀಡಲು ಬಯಸಿದರೆ ಹಡಗಿನ ಮೂಲಕ ಹೋಗುವುದು ಉತ್ತಮ ಆಯ್ಕೆಯಾಗಿದೆ. ಕೊಚ್ಚಿಯಿಂದ ಲಕ್ಷದ್ವೀಪಕ್ಕೆ 20 ಗಂಟೆಗಳ ದೋಣಿ ಪ್ರಯಾಣಕ್ಕೆ ರೂ. 2200 ರಿಂದ 5000 ರೂ. ಆದರೆ ವಿಮಾನದ ದರ 5500 ರೂ.ನಿಂದ ಆರಂಭವಾಗುತ್ತದೆ.