Naresh Babu: ಮದುವೆ ಬೇಡ ಮತ್ತು ನಮ್ಮ ಮನಸ್ಸು ಒಂದಾಗಿದೆ, ನರೇಶ್ ಹೇಳಿಕೆಗೆ ಪವಿತ್ರ ಲೋಕೇಶ್ ಗೊಂದಲ.

ನಮ್ಮಿಬ್ಬರ ಮನಸ್ಸು ಒಂದಾಗಿದೆ ಮತ್ತು ಮದುವೆ ಬೇಡ ಎಂದು ಹೇಳಿದ ನರೇಶ್ ಬಾಬು.

Naresh Babu About Marriage: ನಟ ನರೇಶ್ ಬಾಬು (Naresh Babu) ಹಾಗೂ ನಟಿ ಪವಿತ್ರ ಲೋಕೇಶ್ ತಮ್ಮ ಮದುವೆಯ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇತ್ತೀಚೆಗಂತೂ ಸೋಶಿಯಲ್ ಮೀಡಿಯಾದಲ್ಲಿ ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ (Pavitra Lokesh) ಅವರ ಮದುವೆಯ ಸುದ್ದಿಗಳು ಸಾಕಷ್ಟು ಹರಿದಾಡಿವೆ.

ಇನ್ನು ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ ಅವರ ಜೀವನ ಆಧಾರಿತ ಚಿತ್ರದ ರಿಲೀಸ್ ಆಗುವ ಬಗ್ಗೆ ಕೂಡ ಸುದ್ದಿಯಾಗಿದೆ. ಇದೀಗ ನರೇಶ್ ಬಾಬು ಅವರು ನಮ್ಮಿಬ್ಬರ ಮನಸ್ಸು ಒಂದಾಗಿದೆ ಮದುವೆ ಬೇಡ ಎನ್ನುವ ಹೇಳಿಕೆ ನೀಡಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

Naresh Babu About Marriage
Image Source: India Heraland

ನಿಜ ಜೀವನದ ಘಟನೆ ಆಧಾರಿತ ಸಿನಿಮಾ 
ನಟ ನರೇಶ್ ಬಾಬು ಹಾಗೂ ನಟಿ ಪವಿತ್ರ ಲೋಕೇಶ್ ಅವರ ನಿಜ ಜೀವನದ ಕಥೆಯನ್ನು ಆಧರಿಸಿ ತೆಲುಗುನಲ್ಲಿ ‘ಮಳ್ಳಿ ಪೆಳ್ಳಿ’ ಹಾಗೂ ಕನ್ನಡದಲ್ಲಿ ‘ಮತ್ತೆ ಮದುವೆ’ ಎನ್ನುವ ಟೈಟಲ್ ಮೂಲಕ ಸಿನಿಮಾ ತೆರೆಯ ಮೇಲೆ ಬರಲಿದೆ. ಇನ್ನು ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದ್ದು, ಚಿತ್ರದಲ್ಲಿ ಅನೇಕ ಪಾತ್ರಗಳು ಬರಲಿವೆ. ಇನ್ನು ಈ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇಳೆ ನರೇಶ್ ಬಾಬು ತಮ್ಮ ಮದುವೆಯ ಬಗ್ಗೆ ಮಾತನಾಡಿದ್ದಾರೆ.

Naresh Babu About Marriage
Image Source: News18

ನಮ್ಮಿಬ್ಬರ ಮನಸ್ಸು ಒಂದಾಗಿದೆ ಮದುವೆ ಬೇಡ, ನರೇಶ್ ಹೇಳಿಕೆಗೆ ಪವಿತ್ರ ಲೋಕೇಶ್ ಶಾಕ್
ಮಳ್ಳಿ ಪೆಳ್ಳಿ ಚಿತ್ರದ ಟ್ರೈಲರ್ ರಿಲೀಸ್ ಕಾರ್ಯಕ್ರಮದ ವೇಳೆ ನಟ ನರೇಶ್ ಬಾಬು ಅವರಿಗೆ ನೀವಿಬ್ಬರು ಮದುವೆಯಾಗಿದ್ದೀರಾ? ಅಥವಾ ಅಗಲಿದ್ದೀರಾ ಎನ್ನುವ ಪ್ರಶ್ನೆ ಎದುರಾಗಿದೆ ಈ ಪ್ರಶ್ನೆ ನರೇಶ್ ಬಾಬು ಉತ್ತರಿಸಿದ್ದಾರೆ. ಮದುವೆ ಎನ್ನುವ ವ್ಯವಸ್ಥೆ ಈಗ ಮುರಿದು ಬೀಳುತ್ತಿದೆ. ಐದಾರು ಪ್ಯಾಮಿಲಿ ಕೋರ್ಟ್ ಇದೆ ಅಂದರೆ ಮದುವೆ ವ್ಯವಸ್ಥೆ ಹಾಳಾಗ್ತಿವೆ ಎಂದರ್ಥ. ಆ ವ್ಯವಸ್ಥೆಯನ್ನು ಗೌರವಿಸಿ ನಾವು ಮಳ್ಳಿ ಪೆಳ್ಳಿ ಸಿನಿಮಾ ಮಾಡಿದ್ದೇವೆ ಎಂದಿದ್ದಾರೆ.

‘ಕೆಲವರು ತಾಳಿ ಹಾಕಿಕೊಳ್ಳುತ್ತಾರೆ. ಇನ್ನು ಕೆಲವರು ಉಂಗುರು ಹಾಕುತ್ತಾರೆ. ಒಂದೊಂದು ಧರ್ಮದಲ್ಲಿ ಒಂದೊಂದು ರೀತಿ ಇದೆ. ಎರಡು ಹೃದಯಗಳು ಒಂದಾಗುವುದೇ ಮದುವೆಗೆ ನಿಜವಾದ ಅರ್ಥ. ಹೃದಯಗಳು ಒಂದಾಗಿವೆ ಎಂದ ಮೇಲೆ ನಾವು ಮದುವೆ ಆದ ಹಾಗೇನೇ ಅಥವಾ ಆಗಿಲ್ಲ ಅಂತಾನಾ’ ಎಂದು ನರೇಶ್ ಉತ್ತರಿಸಿದ್ದಾರೆ. ನರೇಶ್ ಅವರ ಈ ಹೇಳಿಕೆ ಕೇಳಿ ಪವಿತ್ರ ಲೋಕೇಶ್ ಅಚ್ಚರಿ ಪಟ್ಟಿದ್ದಾರೆ.

Join Nadunudi News WhatsApp Group

Naresh Babu About Marriage
Image Source: Zee News

Join Nadunudi News WhatsApp Group