Naresh Babu In Dubai: ದುಬೈ ನಲ್ಲಿ ಸುತ್ತಾಟ ಮಾಡುತ್ತಿರುವ ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್, ಯುವ ಪ್ರೇಮಿಗಳು ಅಂದ ನೆಟ್ಟಿಗರು.
Naresh Babu And Pavitra Lokesh In Dubai: ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ಬಾಬು (Naresh Babu) ಹಾಗೂ ನಟಿ ಪವಿತ್ರ ಲೋಕೇಶ್ (Pavitra Lokesh) ಇತ್ತೀಚಿಗೆ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.
ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಇಬ್ಬರು ಸಹ ಮದುವೆ ಕೂಡ ಸೋಶಿಯಲ್ ಮಿಡಿಯಾದಲ್ಲಿ ಹರಿದಾಡಿತ್ತು. ಇದೀಗ ಈ ಇಬ್ಬರು ದುಬೈನಲ್ಲಿ ಇದ್ದಾರೆ ಎನ್ನಲಾಗುತ್ತಿದೆ.
ದುಬೈನಲ್ಲಿ ನಟ ನರೇಶ್ ಬಾಬು ಹಾಗೂ ಪವಿತ್ರ ಲೋಕೇಶ್
ಈಗಾಗಲೇ ನರೇಶ್ ಬಾಬು 3 ಮದುವೆಯಾಗಿದ್ದಾರೆ. ನಟಿ ಪವಿತ್ರ ಲೋಕೇಶ್ ಅವರನ್ನು ನಾಲ್ಕನೇ ಮದುವೆಯಾಗಲು ಸಜ್ಜಾಗಿದ್ದಾರೆ.
ಇದೀಗ ಈ ಇಬ್ಬರು ದುಬೈ ಗೆ ಹಾರಿದ್ದಾರೆ. ದುಬೈ ನಲ್ಲಿ ಈ ಜೋಡಿ ಕೆಲವು ದಿನಗಳು ಕಾಲ ಕಳೆದಿದ್ದಾರೆ ಎನ್ನಲಾಗುತ್ತಿದೆ. ಈ ಇಬ್ಬರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮದುವೆಯ ವಿಡಿಯೋ ಹಂಚಿಕೊಂಡ ನರೇಶ್ ಬಾಬು
ಇದೀಗ ಪವಿತ್ರ ಲೋಕೇಶ್ ಮತ್ತು ನರೇಶ್ ಬಾಬು ಅವರು ಮದುವೆಯಾದ ವಿಡಿಯೋವನ್ನು ನರೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಒಂದು ಪವಿತ್ರ ಬಂಧ, ಎರಡು ಮನಸ್ಸುಗಳು, ಮೂರೂ ಮುಳ್ಳುಗಳು, ಏಳು ಪಾದಗಳು ಎಂದು ಬರೆದುಕೊಂಡಿದ್ದಾರೆ.
ರಮ್ಯಾ ರಘುಪತಿ ಅವರಿಂದ ವಿಚ್ಚೇಧನ ಪಡೆಯದೇ ನರೇಶ್ ಬಾಬು ಮತ್ತೊಂದು ಮದುವೆ ಆಗುವಂತಿಲ್ಲ. ಸಿನಿಮಾ ದೃಶ್ಯದಲ್ಲಿನ ಮದುವೆ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ನರೇಶ್ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ.