Naresh And Pavithra Lokesh Movie: ತೆರೆಯ ಮೇಲೆ ಬರಲಿದೆ ಪವಿತ್ರ ಲೋಕೇಶ್ ಮತ್ತು ನರೇಶ್ ಜೀವನ ಚರಿತ್ರೆ ಸಿನಿಮಾ.

Naresh Babu And Pavithra Lokesh Life Story Movie: ನಟ ನರೇಶ್ ಬಾಬು (Naresh Babu) ಮತ್ತು ಪವಿತ್ರಾ ಲೋಕೇಶ್ ಅವರ ವಿಚಾರಗಳು ಸದಾ ಸುದ್ದಿಯಾಗುತ್ತ ಇರುತ್ತದೆ. ತೆಲುಗು ನಟ ನರೇಶ್ ಮತ್ತು ಕನ್ನಡದ ನಟಿ ಪವಿತ್ರಾ ಲೋಕೇಶ್ (Pavithra Lokesh) ಸಂಬಂಧದ ಬಗ್ಗೆ ಜನರು ಅತಿಯಾಗಿ ಆರೋಪ ಮಾಡುತ್ತಿದ್ದಾರೆ.

ಇವರಿಬ್ಬರ ವಿಚಾರ ಏನು ಗುಟ್ಟಾಗಿ ಉಳಿದಿಲ್ಲ. ಕೆಲವು ವಿಚಾರವನ್ನು ನನರೇಶ್ ಪತ್ನಿ ರಮ್ಯಾ ರಘಪತಿ (Ramya Raghupati)ಅವರು ಹೇಳಿದ್ದಾರೆ. ಇನ್ನು ಕೆಲವು ವಿಚಾರಗಳನ್ನು ನರೇಶ್ ಬಾಬು ಅವರೇ ಹೇಳಿಕೊಂಡಿದ್ದಾರೆ.

Naresh Babu And Pavithra Lokesh Life Story Movie
Image Source: India Today

ತಮ್ಮ ಜೀವನದ ಘಟನೆಯನ್ನು ಸಿನಿಮಾದಲ್ಲಿ ತೋರಿಸಲಿದ್ದಾರೆ ನರೇಶ್ ಮತ್ತು ಪವಿತ್ರಾ
ನರೇಶ್ ಬಾಬು ಮತ್ತು ಪವಿತ್ರಾ ಲೋಕೇಶ್ ಅವರ ಸಾಕಷ್ಟು ವಿಚಾರಗಳು ಈಗಾಗಲೇ ಹೊರ ಬಿದ್ದಿದೆ. ತಮ್ಮ ಜೀವನದ ಘಟನೆ ಇಟ್ಟುಕೊಂಡೆ ಇಬ್ಬರು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ ನಟ ನರೇಶ್ ಅವರೇ ನಾಯಕ ನಟಿ ಪವಿತ್ರ ಅವರೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

Naresh Babu And Pavithra Lokesh Life Story Movie
Image Source: India Today

ತೆಲುಗಿನಲ್ಲಿ ಇವರ ಸಿನಿಮಾ ರಿಲೀಸ್ ಆಗಲಿದೆಯಂತೆ. ಇವರಿಬ್ಬರ ಸಿನಿಮಾವನ್ನು ಎಂ ಆರ್ ರಾಜು ಅವರು ನಿರ್ದೇಶನ ಮಾಡಲಿದ್ದಾರಂತೆ. ಸ್ವತಃ ಪವಿತ್ರ ಲೋಕೇಶ್ ಮತ್ತು ನರೇಶ್ ಬಾಬು ನಾಯಕ ನಾಯಕಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾವಾಗಿ ಮೂಡಿ ಬರಲಿದೆ ನರೇಶ್ ಮತ್ತು ಪವಿತ್ರಾ ಲೋಕೇಶ್ ಜೀವನ ಚರಿತ್ರೆ
ಈ ಸಿನಿಮಾದಲ್ಲಿ ನರೇಶ್ ಬದುಕು, ಎರಡನೇ ಪತ್ನಿ ರಮ್ಯಾ ಜೊತೆಗಿನ ಮದುವೆ ಅದಕ್ಕೂ ಮೊದಲಿನ ಮದುವೆ ಹಾಗು ಪವಿತ್ರ ಲೋಕೇಶ್ ತಮ್ಮ ಬದುಕಿನಲ್ಲಿ ಬಂದಿದ್ದು ಹೇಗೆ, ಈ ಎಲ್ಲ ಸಂಗತಿಗಳನ್ನು ಚಿತ್ರಕಥೆಯಲ್ಲಿ ಹೇಳಲಿದ್ದಾರಂತೆ. ಸದ್ಯದಲ್ಲಿ ಈ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಇರಲಿದೆಯಂತೆ. ಸದ್ಯ ಈ ವಿಚಾರ ಈಗ ಭಾರಿ ಚರ್ಚೆ ಆಗುತ್ತಿದೆ.

Join Nadunudi News WhatsApp Group

Naresh Babu And Pavithra Lokesh Life Story Movie
Image Source: India Today

Join Nadunudi News WhatsApp Group