Pavithra Lokesh Marriage Video: ನರೇಶ್ ಮತ್ತು ಪವಿತ್ರ ಲೋಕೇಶ್ ಮದುವೆ ವಿಡಿಯೋ ವೈರಲ್, ಗೊಂದಲಕ್ಕೆ ಒಳಗಾದ ನೆಟ್ಟಿಗರು.
Naresh Babu And Pavithra Lokesh Marriage Video: ಕನ್ನಡದ ಖ್ಯಾತ ನಟಿ ಪವಿತ್ರ ಲೋಕೇಶ್ (Pavitra Lokesh) ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟ ನರೇಶ್ ಬಾಬು (Naresh Babu) ಅವರು ಸಾಕಷ್ಟು ದಿನಗಳಿಂದ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಇವರಿಬ್ಬರ ಲವ್ ಸ್ಟೋರಿ ಈಗಾಗಲೇ ಎಲ್ಲರಿಗೂ ತಿಳಿದೇ ಇದೆ.
ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಇಬ್ಬರು ಸಹ ಮದುವೆ ಆಗುತ್ತಾರೆ ಎಂಬ ಸದ್ದಿ ಹರಡಿತ್ತು. ಈಗಾಗಲೇ ನರೇಶ್ ಬಾಬು 3 ಮದುವೆಯಾಗಿದ್ದಾರೆ.
ಇಬ್ಬರು ಹೆಂಡತಿಯರ ಜೊತೆ ಡಿವೋರ್ಸ್ ತೆಗೆದುಕೊಂಡ ನಟ ನರೇಶ್ ತಮ್ಮ ಮೂರನೇ ಹೆಂಡತಿ ರಮ್ಯಾ ರಘುಪತಿ ಜೊತೆಗೂ ಸಹ ಡಿವೋರ್ಸ್ ಕೇಳಿದ್ದಾರೆ. ಆದರೆ ಅವರು ಡಿವೋರ್ಸ್ ಕೊಡಲು ನಿರಾಕರಿಸಿದ್ದರಿಂದ ಅವರ ಮೇಲೆ ಇಲ್ಲಸಲ್ಲದ ಆರೋಪ ಮಾಡಿದ್ದಾರೆ ನರೇಶ್.
ಪವಿತ್ರ ಜೊತೆಗಿನ ಮದುವೆಯಾದ ವಿಡಿಯೋ ಹಂಚಿಕೊಂಡ ನಟ ನರೇಶ್ ಬಾಬು
ಇದೀಗ ಪವಿತ್ರ ಲೋಕೇಶ್ ಮತ್ತು ನರೇಶ್ ಬಾಬು ಅವರು ಮದುವೆಯಾದ ವಿಡಿಯೋವನ್ನು ನರೇಶ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಒಂದು ಪವಿತ್ರ ಬಂಧ, ಎರಡು ಮನಸ್ಸುಗಳು, ಮೂರೂ ಮುಳ್ಳುಗಳು, ಏಳು ಪಾದಗಳು ಎಂದು ಬರೆದುಕೊಂಡಿದ್ದಾರೆ. ಈ ಪದಗಳೇ ನೆಟ್ಟಿಗರ ಚರ್ಚೆಗೆ ಕಾರಣವಾಗಿದೆ ಎನ್ನಬಹುದು.
ನರೇಶ್ ಬಾಬು ಮತ್ತು ಪವಿತ್ರ ಲೋಕೇಶ್ ಮದುವೆ
ರಮ್ಯಾ ರಘುಪತಿ ಅವರಿಂದ ವಿಚ್ಚೇಧನ ಪಡೆಯದೇ ನರೇಶ್ ಬಾಬು ಮತ್ತೊಂದು ಮದುವೆ ಆಗುವಂತಿಲ್ಲ. ಆದರೆ ಸಿನಿಮಾ ದೃಶ್ಯದಲ್ಲಿಯೇ ತಮ್ಮ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದರಂತೆ ನರೇಶ್. ಈಗ ಇವರು ಹಂಚಿಕೊಂಡಿರುವ ಮದುವೆ ವಿಡಿಯೋ ಸಿನಿಮಾ ದೃಶ್ಯವಾಗಿದ್ದು ಮುಂದಿನ ದಿನದಲ್ಲಿ ಇದು ನಿಜವಾದ ದೃಶ್ಯವಾದರೂ ಅಚ್ಚರಿ ಪಡಬೇಕಿಲ್ಲ.
ಇನ್ನು ನರೇಶ್ ಹಂಚಿಕೊಂಡಿರುವ ಮದುವೆ ವಿಡಿಯೋಗೆ ಕೆಲವರು ಶುಭಾಶಯ ತಿಳಿಸಿದ್ದಾರೆ. ಇನ್ನು ಕೆಲವರು ನೆಗೆಟಿವ್ ಕಮೆಂಟ್ ಮಾಡಿದ್ದಾರೆ. ಇಬ್ಬರ ಹುಚ್ಚಾಟ ಏನಿದು ಎಂದು ನೆಟ್ಟಿಗರು ನರೇಶ್ ಹಂಚಿಕೊಂಡ ವಿಡಿಯೋಗೆ ಪ್ರತಿಕ್ರಿಯಿಸಿದ್ದಾರೆ.