Ads By Google

Nari Shakti: ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ 1 ಕೋಟಿ ರೂಪಾಯಿ, ಜಾರಿಗೆ ಬಂದಿದೆ “ನಾರಿ ಶಕ್ತಿ” ಯೋಜನೆ.

Nari Shakti Saving Account

Image Source: NDTV

Ads By Google

Nari Shakti Saving Account: ಸದ್ಯ ಕೇಂದ್ರ ಸರ್ಕಾರ ಮಹಿಳೆಯರ ಸಬಲೀಕರಣದತ್ತ ಗಮನ ಹರಿಸುತ್ತಿದೆ. ಈ ನಿಟ್ಟಿನಲ್ಲಿ ಅನೇಕ ಕಲ್ಯಾಣ ಯೋಜನೆಗಳನ್ನು ಮಹಿಳೆಯರಿಗಾಗಿ ಜಾರಿ ಮಾಡಿದೆ. ಸರ್ಕಾರ ಎಲ್ಲಾ ಯೋಜನೆಯ ಲಾಭ ಮಹಿಳೆಯರಿಗೆ ಲಭ್ಯವಾಗುತ್ತಿದೆ.

ಸದ್ಯ ದೇಶದ ಪ್ರತಿಷ್ಠಿತ ಬ್ಯಾಂಕ್ ಇದೀಗ ಆರ್ಥಿಕವಾಗಿ ಹಿಂದುಳಿದಂತಹ ಮಹಿಳೆಯರಿಗೆ ವಿಶೇಷ ಯೋಜನೆಯನ್ನು ಪರಿಚಯಿಸಲು ನಿರ್ಧರಿಸಿದೆ. ಈ ಉಲಿತ್ಯ ಖಾತೆಯನ್ನು ತೆರೆಯುವ ಮೂಲಕ ಮಹಿಳೆಯರು ಹೆಚ್ಚಿನ ಲಾಭವನ್ನು ಪಡೆಯಬಹುದು. ಅಷ್ಟಕ್ಕೂ ಯಾವ ಬ್ಯಾಂಕ್ ಮಹಿಳೆಯರಿಗಾಗಿ ವಿಶೇಷ ಯೋಜನೆ ಪ್ರಾರಂಭಿಸಿದೆ..? ಯೋಜನೆಯ ಪ್ರಯೋಜನವೇನು..? ಯೋಜನೆಯ ಲಭ್ಯ ಯಾರಿಗೆ ಸಿಗಲಿದೆ..? ಎಂಬೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ.

Image Credit: Informal News

ಮಹಿಳೆಯರಿಗಾಗಿ ಜಾರಿಗೆ ಬಂದಿದೆ “ನಾರಿ ಶಕ್ತಿ” ಯೋಜನೆ
ಸದ್ಯ Bank Of India ಮಹಿಳೆಯರ ಸಬಲೀಕರಣದತ್ತ ಗಮನಿ ಹರಿಸಿ “ನಾರಿ ಶಕ್ತಿ” ಯೋಜನೆಯನ್ನು ಪರಿಚಯಿಸಿದೆ. 18 ವರ್ಷ ಮೇಲ್ಪಟ್ಟ ಆರ್ಥಿಕವಾಗಿ ಸ್ವತಂತ್ರರಾಗಿರುವ ಮಹಿಳೆಯರಿಗೆ ಈ ನಾರೀಶಕ್ತಿ ಯೋಜನೆಯ ಪ್ರಯೋಜನ ಲಭ್ಯವಾಗಲಿದೆ. ಬ್ಯಾಂಕ್ ಆಫ್ ಇಂಡಿಯಾದ ನಾರಿ ಶಕ್ತಿಯ ಈ ವಿಶೇಷ ಉಳಿತಾಯ ಖಾತೆಯಲ್ಲಿ ಖಾತೆ ತೆರೆಯುವ ಮಹಿಳೆಯರು ಅನೇಕ ಪ್ರಯೋಜನಗಳನ್ನು ಪಡೆಯುತ್ತಾರೆ. ಈ ವಿಶೇಷ ಉಳಿತಾಯ ಯೋಜನೆಯಡಿ ಖಾತೆ ತೆರೆಯುವ ಮಹಿಳೆಯರು 1 ಕೋಟಿ ರೂ. ವರೆಗಿನ ಅಪಘಾತ ವಿಮೆಯನ್ನು ಪಡೆಯುವ ಅವಕಾಶವಿದೆ.

ಮಹಿಳೆಯರಿಗೆ ಈ ಯೋಜನೆಯಲ್ಲಿ ಸಿಗಲಿದೆ 1 ಕೋಟಿ ರೂಪಾಯಿ
ಮಹಿಳೆಯರು ಈ ಯೋಜನೆಯಡಿ ಹೆಚ್ಚಿನ ಪ್ರಯೋಜನವನ್ನು ಪಡೆಯಬಹುದು. 1 ಕೋಟಿ ವರೆಗೆ ಅಪಘಾತ ವಿಮೆ, ಮಹಿಳಾ ಆಧಾರಿತ ಆರೋಗ್ಯ ಮತ್ತು ಕ್ಷೇಮ ಯೋಜನೆಯಲ್ಲಿ ರಿಯಾಯಿತಿ, ಲಾಕರ್ ಬಾಡಿಗೆಗೆ ರಿಯಾಯಿತಿ, ಸಂಸ್ಕರಣಾ ಶುಲ್ಕವಿಲ್ಲದೆ ಚಿಲ್ಲರೆ ಸಾಲ, ಉಚಿತ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ ಗಳು, ಡಿಮ್ಯಾಟ್ ಖಾತೆಗೆ AMC ಶುಲ್ಕಗಳಲ್ಲಿ ರಿಯಾಯಿತಿ, POS ನಲ್ಲಿನ ವಹಿವಾಟುಗಳಿಗೆ 5 ಲಕ್ಷದವರೆಗೆ ಮಿತಿಯನ್ನು ಪಡೆಯಬಹುದು. ಯಾವುದೇ ಮಹಿಳೆ ದೇಶದಾದ್ಯಂತ ಬ್ಯಾಂಕ್ ಆಫ್ ಇಂಡಿಯಾದ 5132 ಶಾಖೆಗಳಲ್ಲಿ Nari Shakti Saving Account  ತೆರೆಯಬಹುದು. ಇದರೊಂದಿಗೆ ಡಿಜಿಟಲ್ ಪ್ಲಾಟ್‌ ಫಾರ್ಮ್ ಮೂಲಕ ನಾರಿ ಶಕ್ತಿ ಖಾತೆಯನ್ನು ಸಹ ತೆರೆಯಬಹುದು.

Image Credit: ETV Bharat

ನಾರಿ ಶಕ್ತಿ ಉಳಿತಾಯ ಖಾತೆ
1 ಲಕ್ಷದವರೆಗಿನ ಬ್ಯಾಂಕ್ ಆಫ್ ಇಂಡಿಯಾ ಉಳಿತಾಯ ಖಾತೆಯ ಬಡ್ಡಿ ದರವು 2.75 ಪ್ರತಿಶತ ಆಗಿದೆ. ಬ್ಯಾಂಕ್ 1 ಲಕ್ಷಕ್ಕಿಂತ ಹೆಚ್ಚಿನ ಉಳಿತಾಯ ಖಾತೆಯಲ್ಲಿನ ಬಾಕಿ ಮೊತ್ತದ ಮೇಲೆ 2.90 ಪ್ರತಿಶತ ಬಡ್ಡಿಯನ್ನು ನೀಡುತ್ತಿದೆ. ನಾರಿ ಶಕ್ತಿ ಉಳಿತಾಯ ಖಾತೆಯನ್ನು ಪ್ರಾರಂಭಿಸುವಾಗ, ಬ್ಯಾಂಕ್ ಆಫ್ ಇಂಡಿಯಾ ಈ ಯೋಜನೆಯಡಿಯಲ್ಲಿ ತೆರೆಯಲಾದ ಪ್ರತಿಯೊಂದು ಖಾತೆಯಲ್ಲಿ, ಬ್ಯಾಂಕ್ ತನ್ನ ಸಿಎಸ್ ಆರ್ ನಿಧಿಗೆ ರೂ. 10 ಕೊಡುಗೆ ನೀಡುತ್ತದೆ ಎಂದು ಹೇಳಿಕೆ ನೀಡಿದೆ. ಈ ನಿಧಿಯನ್ನು ನಿರ್ಗತಿಕ ಮಹಿಳೆಯರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಳಸಲಾಗುತ್ತದೆ.

Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in