Pratham Nata Bhayankara: ಮೂರೂ ದಿನದಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಪ್ರಥಮ್ ನಟ ಭಯಂಕರ ಮೂವಿ.

Nata Bhayankara Movie Day 3 Collection: ಬಿಗ್ ಬಾಸ್ ಸೀಸನ್ 4 ರ (Bigg Boss Season 4) ವಿನ್ನರ್ ಪ್ರಥಮ್ (Pratham) ಬಿಗ್ ಬಾಸ್ ಮೂಲಕ ಸಾಕಷ್ಟು ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಬಿಗ್ ಬಾಸ್ ಮನೆಯಿಂದ ಹೊರಬಂದ ಪ್ರಥಮ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಆದರೆ ಇವರು ನಟಿಸಿರುವ ಎರಡು ಸಿನಿಮಾದಲ್ಲಿ ಸಹ ಅವರಿಗೆ ಗೆಲುವು ಸಿಗಲಿಲ್ಲ.

The Pratham actor Bhayankar movie made a huge collection in three days.
Image Credit: instagram

ಇದೀಗ ನಟ ಪ್ರಥಮ್ ಮೊದಲ ಬಾರಿಗೆ ನಿರ್ದೇಶನ ಮಾಡಿ ನಟಿಸಿರುವ ನಟ ಭಯಂಕರ ಸಿನಿಮಾ ಈಗಾಗಲೇ ತೆರೆ ಕಂಡಿದ್ದು ಜನರಿಂದ ಒಳ್ಳೆಯ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ.

ಪ್ರಥಮ್ ನಟ ಭಯಂಕರ ಸಿನಿಮಾ
ಫೆಬ್ರವರಿ 6 ರಂದು ದೇಶದಾದ್ಯಂತ ಬಿಡುಗಡೆಯಾದ ನಟ ಭಯಂಕರ ಸಿನಿಮಾ ನೋಡಿದ ಹಲವು ಸಿನಿ ಪ್ರೇಮಿಗಳು ಈ ಚಿತ್ರದ ಬಗ್ಗೆ ಮಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

Actor Pratham, who is performing well in cinemas, is Bhayankara
Image Credit: instagram

ನಟ ಭಯಂಕರ ಸಿನಿಮಾ ಬಿಡುಗಡೆಯಾದ ದಿನ ಎಷ್ಟು ಗಳಿಕೆ ಮಾಡಿತು ಹಾಗು ಮೊದಲ ವಾರಾಂತ್ಯಕ್ಕೆ ಎಷ್ಟು ಸಂಪಾದಿಸಿತು ಎಂಬ ಮಾಹಿತಿಯನ್ನು ಚಿತ್ರತಂಡ ಬಿಟ್ಟು ಕೊಡಲಿಲ್ಲ.

Join Nadunudi News WhatsApp Group

ಆದರೆ ಪ್ರತಿ ಸಿನಿಮಾದಂತೆ ಈ ಸಿನಿಮಾದ ಕಲೆಕ್ಷನ್ ಬಗ್ಗೆಯೂ ಸಹ ಬಾಕ್ಸ್ ಆಫೀಸ್ ಟ್ರ್ಯಾಕರ್ಸ್ ಮಾಹಿತಿ ಹಂಚಿಕೊಂಡಿದ್ದು ಚಿತ್ರ ಮೊದಲ ಮೂರೂ ದಿನದಲ್ಲಿ ಎಷ್ಟು ಗಳಿಸಿದೆ ಎಂಬ ಮಾಹಿತಿಯನ್ನು ಹಂಚಿಕೊಂಡಿದೆ.

Actor Pratham's debut movie actor Bhayankara did a good collection in the first Muru
Image Credit: instagram

ಮೂರನೆಯ ದಿನಕ್ಕೆ 90 ಲಕ್ಷ ಗಳಿಸಿಕೊಂಡಿರುವ ನಟ ಭಯಂಕರ ಸಿನಿಮಾ
ಇನ್ನು ಭಾರತದ ಅತಿ ನಂಬುಗೆಯ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್ ತಾಣವಾದ ಸ್ಯಾಕ್‌ ನಿಕ್ ನೀಡಿರುವ ಮಾಹಿತಿ ಪ್ರಕಾರ ನಟ ಭಯಂಕರ ಚಿತ್ರ ಮೊದಲ ದಿನ 15 ಲಕ್ಷ ರೂಪಾಯಿಗಳನ್ನು ಗಳಿಸಿದ್ದು, ಎರಡನೇ ದಿನ 30 ಲಕ್ಷ ರೂಪಾಯಿಗಳನ್ನು ಗಳಿಸಿದೆ ಹಾಗೂ ಮೂರನೇ ದಿನ 45 ಲಕ್ಷ ರೂಪಾಯಿಗಳನ್ನು ಗಳಿಸಿದ್ದು, ಮೊದಲ ಮೂರು ದಿನಗಳಲ್ಲಿ ಒಟ್ಟಾರೆ 90 ಲಕ್ಷ ರೂಪಾಯಿಗಳನ್ನು ಗಳಿಸಿಕೊಂಡಿದೆ.

Join Nadunudi News WhatsApp Group