RBI Restriction: ರಾತ್ರೋರಾತ್ರಿ ಕರ್ನಾಟಕದ ಇನ್ನೊಂದು ಬ್ಯಾಂಕ್ ಗೆ ನಿರ್ಬಂಧ ಹೇಳಿದ RBI, 50 ಸಾವಿರಕ್ಕಿಂತ ಹೆಚ್ಚು ತೆಗೆಯುವಂತಿಲ್ಲ.
ನ್ಯಾಷನಲ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ ನ ವಹಿವಾಟುಗಳಿಗೆ ನಿರ್ಬಂಧ ವಿಧಿಸಿದ RBI.
National Co-Operative Bank Limited: ಆರ್ ಬಿ ಐ ಇತ್ತೀಚಿಗೆ ಹೊಸ ಹೊಸ ನಿಯಮಗಳನ್ನು ಹೊರ ತರುತ್ತಿದೆ. ಅದರಲ್ಲೂ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಆರ್ ಬಿ ಐ ಹೊಸ ಹೊಸ ನಿಯಮಗಳನ್ನು ಬಿಡುಗಡೆ ಮಾಡಿದೆ.
ನ್ಯಾಷನಲ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್
ನ್ಯಾಷನಲ್ ಕೋ-ಒಪರೇಟಿವ್ ಬ್ಯಾಂಕ್ ಲಿಮಿಟೆಡ್ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಹಿವಾಟು ನಿರ್ಬಂಧಗಳನ್ನು ವಿಧಿಸಿದೆ. ಠೇವಣಿದಾರರು ಬ್ಯಾಂಕ್ ನಲ್ಲಿರುವ ತಮ್ಮ ಖಾತೆಯಿಂದ 50 ಸಾವಿರ ರೂಪಾಯಿಗಿಂತ ಹೆಚ್ಚು ಹಣ ವಿತ್ ಡ್ರಾ ಮಾಡುವಂತೆ ಇಲ್ಲ. ಬೆಂಗಳೂರು ಮೈಸೂರಿನಲ್ಲಿ 13 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ನ ಹೂಡಿಕೆದಾರರು ಇದರಿಂದ ಆತಂಕಕ್ಕೆ ಒಳಗಾಗಿದ್ದಾರೆ.
ರಿಸರ್ವ್ ಬ್ಯಾಂಕ್ ಆಫ್ ಇಂಡಿಯ(Reserve Bank Of India)
ಬೆಂಗಳೂರು ಮೂಲದ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಲಿಮಿಟೆಡ್ ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಹಿವಾಟು ನಿರ್ಬಂಧಗಳನ್ನು ವಿಧಿಸಿದೆ. ಬ್ಯಾಂಕ್ ನ ಹಣಕಾಸು ಸ್ಥಿತಿ ದುರ್ಬಲವಾಗಿರುವುದರಿಂದ ಠೇವಣಿದಾರರು ಗರಿಷ್ಠ 50 ಸಾವಿರ ರೂಪಾಯಿಯವರೆಗೆ ಮಾತ್ರ ವಿತ್ ಡ್ರಾ ಮಾಡಿಕೊಳ್ಳುವ ಮಿತಿಯನ್ನು ಆರ್ ಬಿ ಐ ವಿಧಿಸಿದೆ ಎಂದು ಮನಿಕಂಟ್ರೊಲ್ ವರದಿ ಮಾಡಿದೆ. ಇದರಿಂದ ಕರ್ನಾಟಕದ ಸುಮಾರು 13 ಶಾಖೆಗಳಲ್ಲಿ ಹಣ ಠೇವಣಿಯಿಟ್ಟವರು ಆತಂಕಕ್ಕೆ ಒಳಗಾಗಿದ್ದಾರೆ.
ಬೆಂಗಳೂರು ಮತ್ತು ಮೈಸೂರಿನಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ನ 13 ಶಾಖೆಗಳಿವೆ. ಬೆಂಗಳೂರಿನ ಗಾಂಧಿ ಬಜಾರ್, ಜಯನಗರ 5 ನೇ ಬ್ಲಾಕ್, ಬನಶಂಕರಿ 2 ನೇ ಹಂತ, ಕೋರಮಂಗಲ, ಸದಾಶಿವನಗರ, ಅಗ್ರಹಾರ ದಾಸರಹಳ್ಳಿ, ಬನಶಂಕರಿ 3 ನೇ ಹಂತ, ಇಂದಿರಾನಗರ, ಯಶವಂತಪುರ, ರಾಜರಾಜೇಶ್ವರಿ ನಗರ, ಬಾಣಸವಾಡಿ ಪ್ರದೇಶಗಳಲ್ಲಿ ನ್ಯಾಷನಲ್ ಕೋ ಆಪರೇಟಿವ್ ಬ್ಯಾಂಕ್ ಶಾಖೆ ಹೊಂದಿದೆ.
ಮೈಸೂರಿನ ಕುವೆಂಪು ನಗರದಲ್ಲಿ ಬ್ಯಾಂಕ್ ಶಾಖೆ ಇದೆ. ಹತ್ತಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ನಲ್ಲಿ ಕರ್ನಾಟಕದ ಸಾಕಷ್ಟು ಜನರು ವಾಹಿವಾಟು ನಡೆಸುತ್ತಿದ್ದಾರೆ. ಇದೀಗ ರಿಸರ್ವ್ ಬ್ಯಾಂಕ್ ವಿಧಿಸಿರುವ ನಿರ್ಬಂಧದಿಂದ ಗ್ರಾಹಕರಿಗೆ ಆತಂಕ ಮೂಡಿದೆ.