Rajmargyatra: ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸುವವರಿಗೆ ಕೇಂದ್ರದಿಂದ ಹೊಸ ಆಪ್ ಬಿಡುಗಡೆ.
ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಬಳಸುತ್ತಿರುವವರಿಗೆ ಕೇಂದ್ರದಿಂದ ಮಹತ್ವದ ಮಾಹಿತಿ.
National Highway Rajmagyatra App: ಇತ್ತೀಚಿನ ದಿನಗಳಲ್ಲಿ ರಸ್ತೆ ಸಂಚಾರ ನಿಯಮದಲ್ಲಿ ಸಾಕಷ್ಟು ಬದಲಾವಣೆಯನ್ನು ತರಲಾಗಿದೆ. ಇನ್ನು ಟೋಲ್(Toll) ತೆರಿಗೆ ಸಂಗ್ರಹಣೆಯಲ್ಲಿ ವಿವಿಧ ರೀತಿಯ ಸುಲಭ ಮಾರ್ಗಗಳನ್ನು ಪರಿಚಯಿಸಲಾಗಿದೆ.
ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ(Nithin Gatkar) ಅವರು ಸಂಚಾರಿ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತಿದ್ದಾರೆ. ನಿಯಮಗಳ ಬದಲಾವಣೆಯ ಜೊತೆಗೆ ಟೋಲ್ ತೆರಿಗೆ ಸಂಗ್ರಹಣೆ ವಿವಿಧ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಬಳಸುತ್ತಿರುವವರು ಬಿಗ್ ಅಪ್ಡೇಟ್
ಇದೀಗ ರಾಷ್ಟ್ರೀಯ ಹೆದ್ದಾರಿ ಮಾರ್ಗವನ್ನು ಬಳಸುತ್ತಿರುವವರಿಗೆ ಕೇಂದ್ರದಿಂದ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ತಡೆರಹಿತ ಹಾಗೂ ಸುರಕ್ಷಿತ ಪ್ರಯಾಣವನ್ನು ನೀಡಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ (MoRTH ) ಹೊಸ ಮೊಬೈಲ್ ಅಪ್ಲಿಕೇಶನ್ “ರಾಜಮಾರ್ಗಯಾತ್ರೆ” (Rajmargyatra) ಬಿಡುಗಡೆ ಮಾಡಲಿದೆ. ಈ ಹೊಸ ಅಪ್ಲಿಕೇಶನ್ ಬಿಡುಗಡೆಯಾ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI ) ಮಾಹಿತಿ ನೀಡಿದೆ.
ರಾಜಮಾರ್ಗ ಯಾತ್ರೆ
ಹೆದ್ದಾರಿಯ ಮಾರ್ಗವನ್ನು ಸುಗಮಗೊಳಿಸುವ ಸಲುವಾಗಿ ರಾಜಮಾರ್ಗ ಯಾತ್ರೆ ಅಪ್ಲಿಕೇಶನ್ ಅನ್ನು ಪರಿಚಯಿಸಲಾಗಿದೆ. ಈ ರಾಜಮಾರ್ಗಯಾತ್ರೆ ಅಪ್ಲಿಕೇಶನ್ ದೂರು ಪರಿಹಾರ ವ್ಯವಸ್ಥೆಯನ್ನು ನೀಡುತ್ತದೆ. ಇನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಾಜಮಾರ್ಗ ಯಾತ್ರೆ ಅಪ್ಲಿಕೇಶನ್ ಕಾರ್ಯನಿರ್ವಹಿಸಲಿದೆ. ಇನ್ನು ಗೂಗಲ್ ಪ್ಲೇ ಸ್ಟಾರ್ ಮತ್ತು ಐಓಎಸ್ ಆಪ್ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
ರಾಜಮಾರ್ಗ ಯಾತ್ರೆ ಅಪ್ಲಿಕೇಶನ್ ನ ಪ್ರಯೋಜನಗಳು
ಈ ಅಪ್ಲಿಕೇಶನ್ ಕೇಂದ್ರೀಕೃತ ರೆಪೊಸಿಟರಿಯಾಗಿ ಸೇವೆ ಸಲ್ಲಿಸುತ್ತಿರುವ ಅಪ್ಲಿಕೇಶನ್ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಅಗತ್ಯ ಮಾಹಿತಿಯನ್ನು ನೀಡುತ್ತದೆ. ನೈಜ-ಸಮಯದ ಹವಾಮಾನ ನವೀಕರಣಗಳು, ಸಮಯೋಚಿತ ಪ್ರಸಾರ ಅಧಿಸೂಚನೆಗಳು ಮತ್ತು ಹತ್ತಿರದ ಟೋಲ್ ಪ್ಲಾಜಾಗಳು, ಪೆಟ್ರೋಲ್ ಬಂಕ್‌ಗಳು, ಆಸ್ಪತ್ರೆಗಳು, ಹೋಟೆಲ್‌ಗಳು ಮತ್ತು ಇತರ ಪ್ರಮುಖ ಸೇವೆಗಳ ವಿವರಗಳನ್ನು ಒದಗಿಸುತ್ತದೆ.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುರಕ್ಷಿತ ಮತ್ತು ತಡೆರಹಿತ ಪ್ರಯಾಣವನ್ನು ಖಚಿತಪಡಿಸುತ್ತದೆ. ಈ ಅಪ್ಲಿಕೇಶನ್ ನ ಮೂಲಕ ಹೆಚ್ಚಿನ ಸ್ಪಷ್ಟತೆಗಾಗಿ ಜಿಯೋ ಟ್ಯಾಗ್ ಮಾಡಿದ ವಿಡಿಯೋಗಳು ಅಥವಾ ಫೋಟೋಗಳು ಸೇರಿದಂತೆ ಹೆದ್ದಾರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಳಕೆದಾರರು ವರದಿ ಮಾಡಬಹುದಾಗಿದೆ. ರಾಜಮಾರ್ಗ ಯಾತ್ರೆ ಅಪ್ಲಿಕೇಶನ್ ರಾಷ್ಟ್ರೀಯ ಹೆದ್ದಾರಿ ಬಳಕೆದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಡಲಿದೆ.