NPS Update: ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಹೊಸ ನಿಯಮ, ಬಹುದೊಡ್ಡ ಬದಲಾವಣೆಗೆ ಮುಂದಾದ ಕೇಂದ್ರ.
ಕೇಂದ್ರ ಸರ್ಕಾರ ಪಿಂಚಣಿದಾರರಿಗೆ ದೊಡ್ಡ ಉಡುಗೊರೆ ನೀಡಲು ಮುಂದಾಗಿದೆ.
National Pension Scheme Latest Update: ಸದ್ಯ ದೇಶದಲ್ಲಿ ಅನೇಕ ನಿಯಮಗಳ ಬದಲಾವಣೆಯ ಜೊತೆಗೆ ಪಿಂಚಣಿ ಯೋಜನೆಯ ನಿಯಮಗಳು ಕೂಡ ಬದಲಾಗುತ್ತಿದೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಪಿಂಚಣಿದಾರರು Life Certificate ಅನ್ನು ಕಡ್ಡಾಯವಾಗಿ ಒದಗಿಸಬೇಕಿದೆ ಎಂದು ಆದೇಶ ಹೊರಡಿಸಿದ್ದು, ಜೀವನ್ ಪ್ರಮಾಣಪತ್ರ ಸಲ್ಲಿಕೆಗೆ ಸರ್ಕಾರ ಕೊನೆಯಾ ದಿನಾಂಕವನ್ನು ನಿಗದಿಮಾಡಿದೆ.
ನಿಗದಿತ ದಿನಾಂಕದೊಳಗೆ ಜೀವನ್ ಪ್ರಮಾಣ ಪತ್ರವನ್ನು ನೀಡಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಇದೀಗ ಈ ನಿಯಮ ಜಾರಿಗೆ ತಂದ ಬೆನ್ನಲ್ಲೇ ಸರ್ಕಾರ ಮಹತ್ವದ ಬದಲಾವಣೆಯನ್ನು ತರಲು ಮುಂದಾಗಿದೆ.
ಹಳೆಯ ಪಿಂಚಣಿ ಯೋಜನೆ (Old Pension) ಜಾರಿ ಕುರಿತು ಮಹತ್ವದ ಆದೇಶ
ಸದ್ಯ ಸರ್ಕಾರೀ ನೌಕರರು ವೇತನ ಹೆಚ್ಚಳ ಹಾಗೂ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವುದರ ಬಗ್ಗೆ ಬೇಡಿಕೆ ಇಟ್ಟಿದ್ದರು. ಸದ್ಯ 7 ನೇ ವೇತನದ ಅಡಿಯಲ್ಲಿ ತುಟ್ಟಿಭತ್ಯೆ ಶೇ. 4 ರಷ್ಟು ಹೆಚ್ಚಾಗುವ ಬಗ್ಗೆ ಈಗಾಗಲೇ ಮಾಹಿತಿ ಲಭಿಸಿದೆ. ಇದೀಗ ಕೇಂದ್ರ ಸರ್ಕಾರ ಹಳೆಯ ಪಿಂಚಣಿ ಯೋಜನೆ ಜಾರಿ ಮಾಡುವುದಾಗಿ ಅಪ್ಡೇಟ್ ನೀಡಿದೆ. ಈಗಾಗಲೇ ರಾಜಸ್ಥಾನ, ಛತ್ತೀಸ್ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ರಾಜ್ಯದಲ್ಲಿ ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿ ಮಾಡಲಾಗಿದೆ.
ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಿರುವ ಎಲ್ಲರಿಗೂ ಹೊಸ ನಿಯಮ
ಕೇಂದ್ರ ಸರ್ಕಾರ ಈ ವರ್ಷಾಂತ್ಯದೊಳಗೆ ಪಿಂಚಣಿದಾರರಿಗೆ ದೊಡ್ಡ ಉಡುಗೊರೆ ನೀಡಲು ಮುಂದಾಗಿದೆ. ಲೈವ್ ಮಿಂಟ್ ನ ಸುದ್ದಿ ಪ್ರಕಾರ, National Pension Scheme ತಿದ್ದುಪಡಿ ಮಾಡುವ ಮೂಲಕ, ಪಿಂಚಣಿದಾರರಿಗೆ ಅಂತಿಮ ವೇತನದ ಕನಿಷ್ಠ 40-45% ಅನ್ನು ನೀಡಲು ಸರ್ಕಾರ ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಪ್ರಸ್ತುತ ಈ ವಿಷಯವನ್ನು ಪರಿಶೀಲಿಸುವ ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ನಂತರ ಯೋಜನೆಯಲ್ಲಿ ತಿದ್ದುಪಡಿ ಮಾಡುವ ಸಾಧ್ಯತೆಯಿದೆ. ಇದು ಜಾರಿಯಾದರೆ ಸುಮಾರು 8.7 ಮಿಲಿಯನ್ ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರು ಇದರ ಲಾಭ ಪಡೆಯಲಿದ್ದಾರೆ.
ಮಹತ್ವದ ಬದಲಾವಣೆಗೆ ಮುಂದಾದ ಕೇಂದ್ರ
2004 ರಲ್ಲಿ ಪ್ರಾರಂಭಿಸಲಾದ ಹೊಸ ಮಾರುಕಟ್ಟೆ-ಸಂಯೋಜಿತ ಪಿಂಚಣಿ ಯೋಜನೆಯು ಹಳೆಯ ಪಿಂಚಣಿ ಯೋಜನೆಯಂತೆ ಖಾತರಿಯ ಆದಾಯವನ್ನು ಒದಗಿಸುವುದಿಲ್ಲ. ಹಳೆಯ ಪಿಂಚಣಿ ಯೋಜನೆಯಲ್ಲಿ ಪಿಂಚಣಿದಾರರು ನಿವೃತ್ತಿಯ ಮೊದಲು ತಮ್ಮ ಕೊನೆಯ ಸಂಬಳದ 50 ಪ್ರತಿಶತದಷ್ಟು ಮಾಸಿಕ ಪ್ರಯೋಜನಗಳನ್ನು ಪಡೆಯುತ್ತಾರೆ.
ಲೈವ್ ಮಿಂಟ್ ವರದಿಯ ಪ್ರಕಾರ, ಹೆಚ್ಚಿನ ಆದಾಯವನ್ನು ನೀಡಲು ಪರಿಷ್ಕೃತ ಹೊಸ ಪಿಂಚಣಿ ಯೋಜನೆಯಲ್ಲಿ ಅನೇಕ ಬದಲಾವಣೆಗಳನ್ನು ಕಾಣಬಹುದು. ಉದ್ಯೋಗಿ ಮತ್ತು ಉದ್ಯೋಗದಾತರು ನೀಡಿದ ಕೊಡುಗೆಯ ಪಾಲಿನಲ್ಲಿ ಬದಲಾವಣೆಗಳನ್ನು ಕಾಣುವ ಸಾಧ್ಯತೆಯೂ ಇದೆ.