Best Pension: 60 ವರ್ಷದ ನಂತರ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂ ಪಿಂಚಣಿ, ಈ ಪಿಂಚಣಿಗೆ ಇಂದೇ ಸೇರಿಕೊಳ್ಳಿ.
ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 1 ಲಕ್ಷ ಪಿಂಚಣಿಯನ್ನು ಪಡೆಯಬಹುದಾಗಿದೆ.
National Pension Scheme: ವೃದ್ದಾಪ್ಯದಲ್ಲಿ ಖರ್ಚನ್ನು ನಿಭಾಯಿಸಲು ಕಷ್ಟವಾಗುತ್ತದೆ ಎನ್ನಬಹುದು. ಹೀಗಾಗಿ ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ. ಪಿಂಚಣಿ ಯೋಜನೆಯಲ್ಲಿನ (Pension Scheme) ಹೂಡಿಕೆಯು ನಿವೃತ್ತಿಯ ನಂತರದ ಬದುಕನ್ನು ಯಾವುದೇ ಆರ್ಥಿಕ ಸಮಸ್ಯೆ ಇಲ್ಲದೆ ಕಳೆಯಲು ಸಹಾಯ ಮಾಡುತ್ತದೆ ಎಂದರೆ ತಪ್ಪಾಗಲಾರದು.
ನೀವು ದುಡಿಯಲು ಅಶಕ್ತರಾದಾಗ ನಿಮ್ಮ ಮಾಸಿಕ ಪಿಂಚಣಿಯಲ್ಲಿನ ಹೂಡಿಕೆ ನಿಮಗೆ ಸಹಾಯವಾಗುತ್ತದೆ. ಕೇಂದ್ರ ಸರ್ಕಾರ (Central Government) ಈಗಾಗಲೇ ವಿವಿಧ ಪಿಂಚಣಿ ಯೋಜನೆಗಳನ್ನು ಜನರಿಗಾಗಿ ಪರಿಚಯಿಸಿದೆ. ಇದೀಗ ಮಾಸಿಕವಾಗಿ 1 ಲಕ್ಷ ಪಿಂಚಣಿಯನ್ನು ಪಡೆಯುವ ಹೂಡಿಕೆಯ ವಿಧಾನದ ಬಗ್ಗೆ ವಿವರ ತಿಳಿಯೋಣ.
National Pension Scheme
National Pension Scheme ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಈ ದಿರ್ಘವದಿಯ ಹೂಡಿಕೆಯ ಲಾಭ ಪಡೆಯಲು ಜನರು ತನ್ನ 40 ನೇ ವಯಸ್ಸಿನಲ್ಲಿ ಹೂಡಿಕೆಯನ್ನು ಪ್ರಾರಂಭಿಸಬೇಕಾಗುತ್ತದೆ. ನಿಮ್ಮ ವಯಸ್ಸು ಹೆಚ್ಚಾದಂತೆ ಹೂಡಿಕೆಯ ಮೊತ್ತವು ಕೂಡ ಹೆಚ್ಚಾಗುತ್ತದೆ. ನೀವು ಯಾವ ವಯಸ್ಸಿನ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಆರಂಭಿಸುತ್ತಿರೋ ಆ ವಯಸ್ಸಿನ ಆಧಾರದ ಮೇಲೆ ಹೂಡಿಕೆಯ ಮೊತ್ತ ಶುರುವಾಗುತ್ತದೆ.
ಪಿಂಚಣಿಯ ಯೋಜನೆಯ ಬಗ್ಗೆ ವಿವರ
ರಾಷ್ಟ್ರೀಯ ಪಿಂಚಣಿ ಯೋಜನೆಯು ಸ್ವಯಂಪ್ರೇರಿತ ಮತ್ತು ದೀರ್ಘಾವಧಿಯ ಹೂಡಿಕೆ ಯೋಜನೆಯಾಗಿದೆ. ಇದು ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಉಪಕ್ರಮವಾಗಿದೆ. ಅನಿವಾಸಿ ಭಾರತೀಯರು ಕೂಡ ಈ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಖಾತೆಯನ್ನು ತೆರೆದ ಸಮಯದಿಂದ ಒಬ್ಬರು 60 ವರ್ಷಗಳವರೆಗೆ ಅಥವಾ 20 ವರ್ಷಗಳ ಮೆಚ್ಯೂರಿಟಿ ಅವಧಿಯವರೆಗೆ ಹೂಡಿಕೆ ಮಾಡಬೇಕಾಗುತ್ತದೆ. ಈ ಯೋಜನೆಯಲ್ಲಿ ಸರಾಸರಿ ಆದಾಯವು 9 ಪ್ರತಿಶತದಿಂದ 12 ಪ್ರತಿಶತದವರೆಗೆ ಇರುತ್ತದೆ.
60 ವರ್ಷದ ನಂತರ ಪ್ರತಿ ತಿಂಗಳು ಸಿಗಲಿದೆ 1 ಲಕ್ಷ ರೂ ಪಿಂಚಣಿ
ನೀವು 30 ವರ್ಷಗಳವರೆಗೆ ಪ್ರತಿ ತಿಂಗಳು 10,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಮಾಸಿಕ ಪಿಂಚಣಿ 1 ಲಕ್ಷ ರೂ. ಪಿಂಚಣಿ ಪಡೆಯಲು ಸಾಧ್ಯವಾಗುತ್ತದೆ. ನಿವೃತ್ತಿಯ ನಂತರ ನೀವು ಸುಮಾರು 1 ಕೋಟಿ ರೂಪಾಯಿಗಳ ಒಟ್ಟು ಮೊತ್ತವನ್ನು ಪಡೆಯುತ್ತೀರಿ.
ಈ ಯೋಜನೆಯಲ್ಲಿ ಇಕ್ವಿಟಿ ಮಾನ್ಯತೆ 50 ರಿಂದ 75 ಪ್ರತಿಶತ ಆಗಿದೆ. ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಜಿಸಿದರೆ ನೀವು ತೆರಿಗೆ ಉಳಿತಾಯದ ಪ್ರಯೋಜನವನ್ನು ಸಹ ಪಡೆಯುತ್ತೀರಿ. ನೀವು ಸೆಕ್ಷನ್ 80ಸಿಸಿಡಿ (1) ಅಡಿಯಲ್ಲಿ ರೂ 50 ಸಾವಿರ ಮತ್ತು ಸೆಕ್ಷನ್ 80 ಸಿ ಅಡಿಯಲ್ಲಿ ರೂ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿಯನ್ನು ಪಡೆಯಬಹುದಾಗಿದೆ.