NSC: ಪೋಸ್ಟ್ ಆಫೀಸ್ ನ ಈ ಯೋಜನೆಯಲ್ಲಿ 100 ರೂ ಹೂಡಿಕೆ ಮಾಡಿದರೆ ಸಿಗಲಿದೆ ಲಕ್ಷಕ್ಕೂ ಅಧಿಕ ಲಾಭ, ಬೆಸ್ಟ್ ಸ್ಕೀಮ್.
ಈ ಯೋಜನೆಯಲ್ಲಿ 100 ರೂಪಾಯಿ ಹೂಡಿಕೆ ಮಾಡಿದರೆ ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯಬಹುದು.
Post Office National Saving Certificate: ಸದ್ಯ ದೇಶದಲ್ಲಿ ಉಳಿತಾಯ ಮಾಡಲು ವಿವಿಧ ಹೂಡಿಕೆಯ ಯೋಜನೆಗಳು ಜಾರಿಯಾಗಿವೆ. ಜನರು ಹೆಚ್ಚಾಗಿ ಸುರಕ್ಷಿತ ಹಾಗೂ ಲಾಭದಾಯಕ ಯೋಜನೆಗಳನ್ನು ಹುಡುಕುತ್ತಾರೆ. ಇನ್ನು Post office Investment ಒಂದು ರೀತಿಯಲ್ಲಿ ಉತ್ತಮ ಆದಾಯವನ್ನು ನೀಡುವ ಹೂಡಿಕೆಯ ವಿಧಾನವಾಗಿದೆ ಎನ್ನಬಹುದು. ನೀವು ಅಂಚೆ ಕಚೇರಿಯಲ್ಲಿ (Post Office) ಹೂಡಿಕೆ ಮಾಡುವ ಯೋಜನೆಯಲ್ಲಿದ್ದರೆ ನಿಮಗಿದು ಹೊಸ ಯೋಜನೆಯ ಬಗ್ಗೆ ಮಾಹಿತಿ ಹೇಳಲಿದ್ದೇವೆ.
ಪೋಸ್ಟ್ ಆಫೀಸ್ ನಿಮಗಾಗಿ ಪರಿಚಯಿಸಿದೆ ಹೊಸ ಯೋಜನೆ
ಅಂಚೆ ಕಚೇರಿ ನಿಮಗೆ ಈಗಾಗಲೇ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಬೇರೆ ಬೇರೆ ರೀತಿಯ ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕಿಂದ ಅಂಚೆ ಕಚೇರಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭವನ್ನು ಪಡೆಯಬಹುದು. ಹೌದು, ಇದೀಗ ಅಂಚೆ ಕಚೇರಿ ನಿಮಗೆ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ನೀಡುವ ಹೊಸ ಯೋಜನೆಯನ್ನು ಪರಿಚಯಿಸಿದೆ. ಅಂಚೆ ಕಚೇರಿಯ ಈ ಹೊಸ ಯೋಜನೆಯ ಹೆಸರು ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ.
Post Office National Saving Certificate
ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯು ಸಣ್ಣ ಉಳಿತಾಯ ಯೋಜನೆಯಾಗಿದೆ. ಈ ಯೋಜನೆಯಲ್ಲಿ ಕೇವಲ 100 ರೂಪಾಯಿಗಳೊಂದಿಗೆ ನಿಮ್ಮ ಹೂಡಿಕೆಯನ್ನು ಪ್ರಾರಂಭಿಸಬಹುದು. 100 ರೂಪಾಯಿ ಹೂಡಿಕೆ ಮಾಡಿದರೆ ನೀವು ಲಕ್ಷಕ್ಕೂ ಅಧಿಕ ಲಾಭವನ್ನು ಪಡೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುದರಿಂದ ಹೂಡಿಕೆದಾರರು ವರ್ಷಕ್ಕೆ 7.7 ಪ್ರತಿಶತ ಬಡ್ಡಿ ಪಡೆಯುತ್ತಾರೆ.
ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಮುಕ್ತಾಯ ಅವಧಿಯು 5 ವರ್ಷಗಳಾಗಿರುತ್ತದೆ. ಹೂಡಿಕೆದಾರರರು ಷರತ್ತುಗಳ ಆಧಾರದ ಮೇಲೆ 1 ವರ್ಷದ ನಂತರ ಖಾತೆಯಿಂದ ಹಣವನ್ನು ತೆಗೆಯಬಹುದು. ಹಣಕಾಸು ವರ್ಷದ ಪ್ರತಿ 3 ತಿಂಗಳ ಆರಂಭದಲ್ಲಿ ಸರ್ಕಾರವು ಬಡ್ಡಿ ದರವನ್ನು ನಿಗದಿಪಡಿಸುತ್ತದೆ.
10000 ಹೂಡಿಕೆಯ ಮೇಲೆ ಪಡೆಯಿರಿ 4490 ರೂ. ರಿಟರ್ನ್
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯಲ್ಲಿ ಒಬ್ಬರು, ಇಬ್ಬರು ಅಥವಾ ಮೂವರು ಕೂಡ ಖಾತೆಯನ್ನು ತೆರೆಯಬಹುದು. ಇನ್ನು ಪೋಸ್ಟ್ ಆಫೀಸ್ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆಯ ಅಡಿಯಲ್ಲಿ ನೀವು 10000 ರೂ. ಹೂಡಿಕೆ ಮಾಡಿದರೆ ವಾರ್ಷಿಕ ಆಧಾರದ ಮೇಲೆ 4490 ರೂ. ರಿಟರ್ನ್ ಪಡೆಯಲು ಸಾಧ್ಯವಾಗುತ್ತದೆ. NSC ನಲ್ಲಿ ನೀವು ಹೂಡಿಕೆಯ ಆಧಾರದ ಮೇಲೆ ತೆರಿಗೆ ವಿನಾಯಿತಿಯನ್ನು ಪಡೆಯುತ್ತೀರಿ. ಇನ್ನು ಈ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಇಂದೇ ಹತ್ತಿರದ ಪೋಸ್ಟ್ ಆಫೀಸ್ ಗೆ ಭೇಟಿ ನೀಡಬಹುದು.