ಚಿನ್ನ ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಹುಟ್ಟಿದ ಪ್ರತಿಯೊಬ್ಬ ಮಾನವ ಕೂಡ ಚಿನ್ನವನ್ನ ಇಷ್ಟಪಡುತ್ತಾನೆ, ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಗಣನೀಯ ಪ್ರಮಾಣದಲ್ಲಿ ಏರಿಕೆಯನ್ನ ಕಾಣುತ್ತಿದ್ದು ಇದು ಜನರ ಶಾಕ್ ಗೆ ಕಾರಣವಾಗುತ್ತಿದೆ ಎಂದು ಹೇಳಬಹುದು. ದಿನದಿಂದ ದಿನಕ್ಕೆ ಚಿನ್ನದ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬರುತ್ತಿದ್ದು ಒಂದೇ ವಾರದಲ್ಲಿ ಚಿನ್ನದ ಬೆಲೆ ಸುಮಾರು 170 ರೂಪಾಯಿ ಏರಿಕೆ ಕಂಡಿದೆ. ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಭಾರಿ ಪ್ರಮಾಣದಲ್ಲಿ ಇಳಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಅಕ್ಟೋಬರ್ ತಿಂಗಳ ಆರಂಭದಿಂದ ಭಾರಿ ಪ್ರಮಾಣದಲ್ಲಿ ಏರಿಕೆಯ ಹಾದಿಯನ್ನ ಹಿಡಿದಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ಹಬ್ಬದ ದಿನವೇ ಚಿನ್ನದ ಬೆಲೆ ಏರಿಕೆ ಆಗಿದ್ದು ಇದು ಬಡಜನರ ಬೇಸರಕ್ಕೆ ಕಾರಣವಾಗಿದೆ.
ಹಾಗಾದರೆ ಇಂದಿನ ಚಿನ್ನದ ಬೆಲೆ ಎಷ್ಟು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಚಿನ್ನದ ಬೆಲೆಯಲ್ಲಿನ ಈ ಬಾರಿ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ 4300 ರೂಪಾಯಿ ಇದ್ದ ಚಿನ್ನದ ಬೆಲೆ ಅಕ್ಟೋಬರ್ ತಿಂಗಳ ಆರಂಭದಲ್ಲೇ ಭಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದ್ದು ಇಂದು ಚಿನ್ನದ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4470 ರೂಪಾಯಿ ಆಗಿದೆ ಮತ್ತು ಕೆಲವ ಹತ್ತು ದಿನಗಳಲ್ಲಿ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 170 ರೂಪಾಯಿ ಏರಿಕೆ ಆಗಿದೆ.
ಇಂದು ದೇಶದ ಎಲ್ಲಾ ಕಡೆ ಹಬ್ಬವನ್ನ ಆಚರಣೆ ಮಾಡುತ್ತಿದ್ದರೆ ಇಂದು ಚಿನ್ನದ ಬೆಲೆಯಲ್ಲಿ ಬರೋಬ್ಬರಿ 55 ರೂಪಾಯಿ ಏರಿಕೆ ಆಗಿದ್ದು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ ಇಂದು 550 ರೂಪಾಯಿ ಏರಿಕೆ ಆಗಿದೆ. ಕಳೆದ ಹತ್ತು ದಿನಗಳಲ್ಲಿ ನೂರು ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 17000 ರೂಪಾಯಿ ಏರಿಕೆ ಆಗಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ. ತಜ್ಞರ ಅಭಿಪ್ರಾಯದ ಪ್ರಕಾರ ದೇಶದಲ್ಲಿ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಏರಿಕೆ ಆಗುವ ಸಾಧ್ಯತೆ ಇದ್ದು ಅಕ್ಟೋಬರ್ ತಿಂಗಳ ಅಂತ್ಯದಲ್ಲಿ ಚಿನ್ನದ ಬೆಲೆ ಚಿನ್ನದ ಬೆಲೆ 4550 ರೂಪಾಯಿ ಆಗುವ ಸಾಧ್ಯತೆ ಇದೆ ಎಂದು ಚಿನ್ನದ ತಜ್ಞರು ತಮ್ಮ ಅಭಿಪ್ರಾಯವನ್ನ ಹಂಚಿಕೊಂಡಿದರೆ.
ಹಬ್ಬದ ಸಮಯದಲ್ಲಿ ಚಿನ್ನವನ್ನ ಖರೀದಿ ಮಾಡಬೇಕು ಅಂದುಕೊಂಡವರಿಗೆ ಇದೊಂದು ಶಾಕಿಂಗ್ ಸುದ್ದಿಯಾಗಿದೆ. ಇಂದು ಚಿನ್ನದ ಮಾರುಕಟ್ಟೆಯಲ್ಲಿ ಹತ್ತು ಗ್ರಾಂ ಚಿನ್ನದ ಬೆಲೆ 44700 ರೂಪಾಯಿ ಆಗಿದೆ ಮತ್ತು ಒಂದು ಪವನ್ ಚಿನ್ನದ ಬೆಲೆ 35760 ರೂಪಾಯಿ ಆಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಆದಕಾರಣ ಮತ್ತು ಷೇರು ಮಾರುಕಟ್ಟೆಯಲ್ಲಿ ಆದ ದಿಡೀರ್ ಬದಲಾವಣೆ ಚಿನ್ನದ ಬೆಲೆಯಲ್ಲಿನ ಏರಿಕೆಗೆ ಪ್ರಮುಖವಾದ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ. ಏನೇ ಆಗಲಿ ಚಿನ್ನದ ಬೆಲೆ ಬಡಜನರ ನಿದ್ದೆ ಕೆಡಿಸಿದೆ ಎಂದು ಹೇಳಬಹುದು. ಸ್ನೇಹಿತರೆ ಚಿನ್ನದ ಬೆಲೆಯಲ್ಲಿ ಈ ಭಾರಿ ಏರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.