Neco E ev: ಸಿಂಗಲ್ ಚಾರ್ಜ್ ನಲ್ಲಿ 60 Km ರೇಂಜ್, ಮಾರುಕಟ್ಟೆಗೆ ಸೈಕಲ್ ನಂತೆ ಕಾಣುವ ಅಗ್ಗದ ಸಣ್ಣ Ev ಸ್ಕೂಟರ್.
60km ರೇಂಜ್ ನೊಂದಿಗೆ ಮಾರುಕಟ್ಟೆಗೆ ಬಿಡಿಗಡೆಯಾಗಿದೆ Neco E -Pop ಎಲೆಕ್ಟ್ರಿಕ್ ಸ್ಕೂಟರ್.
Neco E -Pop Electric Scooter: ಸದ್ಯ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಮಾದರಿಯ Electric ವಾಹನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತಿದೆ ಎನ್ನಬಹುದು. ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ವಿವಿಧ ಎಲೆಕ್ಟ್ರಿಕ್ ಮಾದರಿಯ ಆಯ್ಕೆಗಳು ಸಿಗುತ್ತವೆ.
ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಸದ್ಯ ಭಾರತೀಯ ಆಟೋ ವಲಯದಲ್ಲಿ ಗ್ರಾಹಕರಿಗೆ ಆಯ್ಕೆಯ ಕೊರತೆ ಇಲ್ಲ ಎನ್ನಬಹುದು. ಈಗಾಗಲೇ ಮಾರುಕಟ್ಟೆಯಲ್ಲಿ ಹಲವಾರು ವಿಭಿನ್ನ ವಿನ್ಯಾಸದ ಎಲೆಕ್ಟ್ರಿಕ್ ವಾಹನಗಳು ಎಂಟ್ರಿ ಕೊಟ್ಟಿದ್ದು ಸದ್ಯ ಬಿಡುಗಡೆಗೊಂಡಿರುವ ಈ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಎನ್ನಬಹುದು.
Neco E -Pop Electric Scooter
ಇ ಮೊಬಿಲಿಟಿ ಮಾದರಿಯ ವಿನ್ಯಾಸಕ್ಕೆ ಹೋಲುವಂತೆ ನೂತನ Neco E -Pop Electric Scooter ಅನ್ನು ಸಿದ್ದಪಡಿಸಲಾಗಿದೆ. ಇ-ಪಾಪ್ US ನಲ್ಲಿ ವಿಶಿಷ್ಟವಾದ ಇ-ಬೈಕ್ ಅಥವಾ ಮೊಪೆಡ್ ನಂತೆಯೇ ಕಾರ್ಯಕ್ಷಮತೆಯ ರೇಟಿಂಗ್ ಅನ್ನು ಹೊಂದಿದ್ದು, ಹೋಂಡಾ ರಕ್ಕಸ್ ನಂತೆಯೇ ವಿನ್ಯಾಸವನ್ನು ಹೊಂದಿದೆ ಎನ್ನಲಾಗುತ್ತಿದೆ. Neco E-Pop Ruckus ನ ಕಾಂಪ್ಯಾಕ್ಟ್ ಆವೃತ್ತಿಯಂತೆ ಕಾಣುತ್ತದೆ.
ಸಿಂಗಲ್ ಚಾರ್ಜ್ ನಲ್ಲಿ 60km ರೇಂಜ್
E-Pop 1.2kW ಹಿಂಭಾಗದ ಹಬ್ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿದ್ದು, Neco E -Pop Electric Scooter ಗಂಟೆಗೆ 45km ವೇಗವನ್ನು ನೀಡುತ್ತದೆ. ಇದರ 48V 28Ah ಬ್ಯಾಟರಿ ಒಂದೇ ಚಾರ್ಜ್‌ನಲ್ಲಿ ಬೈಕ್ ಗೆ ಸುಮಾರು 60 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಇ-ಪಾಪ್ ಡಬಲ್ ರಿಯರ್ ಶಾಕ್ ಸಿಸ್ಟಮ್ ಮತ್ತು ಫ್ರಂಟ್ ಟೆಲಿಸ್ಕೋಪಿಕ್ ಫೋರ್ಕ್ ಅನ್ನು ಹೊಂದಿದೆ. ಇದು 10- ಇಂಚಿನ ಚಕ್ರಗಳು ಮತ್ತು ಮುಂಭಾಗ ಮತ್ತು ಹಿಂಭಾಗದಲ್ಲಿ ಡಿಸ್ಕ್ ಬ್ರೇಕ್ ಗಳನ್ನೂ ಬಳಸುತ್ತದೆ.
E -Pop ಎಲೆಕ್ಟ್ರಿಕ್ ಸ್ಕೂರ್ಟರ್ ನ ಬೆಲೆ ಎಷ್ಟಿದೆ..?
ಇ- ಪಾಪ್ ಪೂರ್ಣ LED lights, keyless start, built-in luggage rack and USB charging port ಅನ್ನು ಹೊಂದಿದೆ. E-Pop ಸುಮಾರು 55kg ತೂಕವನ್ನು ಹೊಂದಿದೆ. Neco E-Pop ಯುರೋಪ್ ನಲ್ಲಿ €1,999 (~$2,120) ಗೆ ಲಭ್ಯವಿದೆ ಅಂದರೆ ಭಾರತೀಯ ರೂ. ಗಳಲ್ಲಿ 1.76,478 ಮೌಲ್ಯವನ್ನು ಹೊಂದಿದೆ. Black, yellow, green and orange ನಾಲ್ಕು ಬಣ್ಣದ ಆಯ್ಕೆಗಳಲ್ಲಿ ಗ್ರಾಹಕರು Neco E -Pop Electric Scooter ಅನ್ನು ಖರೀದಿಸಬಹುದು.