Neha And Anjali: ನೇಹಾ ಮತ್ತು ಅಂಜಲಿ ಕೇಸ್ ನಲ್ಲಿ ಬಿಗ್ ಟ್ವಿಸ್ಟ್, ಇಬ್ಬರಿಗೂ ಉಂಟಾ ಲಿಂಕ್.

ನೇಹಾ ಮತ್ತು ಅಂಜಲಿ ಇಬ್ಬರ ಕೊಲೆಗೂ ಉಂಟಾ ಲಿಂಕ್...?

Neha And Anjali Murder Case: ಸದ್ಯ ರಾಜ್ಯದಲ್ಲಿ ಇತ್ತೀಚಿಗೆ ನಡೆದ ಕೊಲೆ ಪ್ರಕರಣಗಳು ಎಲ್ಲರನ್ನು ಬೆಚ್ಚಿಬೀಳಿಸಿದೆ. ನೇಹಾ ಹಾಗು ಅಂಜಲಿ ಕೊಲೆ ಕೇಸ್ ರಾಜ್ಯದಲ್ಲಿ ಬಾರಿ ವಿವಾದವನ್ನು ಉಂತುಂಡಿತ್ತು. ಸದ್ಯ ನೇಹಾ ಹಾಗೂ ಅಂಜಲಿ ಕೊಲೆ ಕೇಸ್ ಎರಡನ್ನು ಕೂಡ CID ತನಿಖೆ ನಡೆಸುತ್ತಿದೆ. ಎರಡು ಕೇಸ್ ಗಳು ಬಹುತೇಕ ಮುಕ್ತಾಯ ಹಣತದಲ್ಲಿದೆ.

ಇಬ್ಬರು ಯುವತಿಯ ಅಕಾಲಿಕ ಮರಣಕ್ಕೆ ನ್ಯಾಯ ಪಡೆಯಲು ಸಾಕಷ್ಟು ಹೋರಾಟ ನಡೆಯುತ್ತಿದೆ. ನೇಹಾ ಹಾಗೂ ಅಂಜಲಿ ಹತ್ಯೆಗೆ ನ್ಯಾಯ ನೀಡಬೇಕೆಂದು ಅದೆಷ್ಟೋ ಪ್ರತಿಭಟನೆಗಳು ನಡೆದಿದ್ದವು. ಸದ್ಯ ನೇಹಾ ಕೊಲೆ ಕೇಸ್ ಗೆ ಸಂಬಂಧಿಸಿದಂತೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ಟ್ವಿಸ್ಟ್ ಇಡೀ ಪ್ರಕಣದ ದಿಕ್ಕನ್ನೇ ಬದಲಿಸುತ್ತಿದೆ ಎನ್ನಬಹುದು.

Neha Caste Certificate
Image Credit: Vistaranews

ನೇಹಾ ಮತ್ತು ಅಂಜಲಿ ಕೇಸ್ ನಲ್ಲಿ ಬಿಗ್ ಟ್ವಿಸ್ಟ್
ಇದೀಗ ನೇಹಾ ಅವರ ಜಾತಿ ಪ್ರಮಾಣ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೇಹಾ ಎಲ್ಲಿದ್ದರು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ನೇಹಾ ಹಿರೇಮಠ್ ಅವರು ಬೆಂಗಳೂರು ವಿಳಾಸ ತೋರಿಸಿ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಸದ್ಯ ಈ ಜಾತಿ ಪ್ರಮಾಣ ಪತ್ರ ವೈರಲ್ ಆಗಿದ್ದು, ನೇಹಾ ಬೆಂಗಳೂರಿನವರೋ…:? ಅಥವಾ ಹುಬ್ಬಳ್ಳಿಯವರೋ..? ಎಂಬ ಅನುಮಾನ ಹುಟ್ಟಿಕೊಂಡಿದೆ. ನೇಹಾ ಹಿರೇಮಠ ಬೇಗೂರ ರಸ್ತೆ ಹೊಂಗಸಂದ್ರ ವಾರ್ಡ್ ಸಂಖ್ಯೆ 135 ಬೇಡ ಜಂಗಮ ಪ್ರಮಾಣ ಪತ್ರ ಪಡೆದಿದ್ದಾರೆ. ಸದ್ಯ ನೇಹಾ ಅವರ ಜಾತಿ ಪ್ರಮಾಣ ಪತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ನೇಹಾ ಮತ್ತು ಅಂಜಲಿ ಇಬ್ಬರ ಕೊಲೆಗೂ ಉಂಟಾ ಲಿಂಕ್
ನೇಹಾ ಕೊಲೆ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು. ಹುಬ್ಬಳ್ಳಿಯ ವೀರಾಪುರದಲ್ಲಿ ಹತ್ಯೆಗೀಡಾದ ಅಂಜಲಿ ಕೊಲೆ ಪ್ರಕರಣ ಇದಕ್ಕೂ ಲಿಂಕ್ ಆಗಿದೆ ಎನ್ನಲಾಗುತ್ತಿದೆ. ಅಂಜಲಿ ಹತ್ಯೆ ಪ್ರಕರಣದಲ್ಲಿ ಕೆಲ ದಲಿತ ಸಂಘಟನೆಗಳು ಸೂಕ್ತ ತನಿಖೆ ನಡೆಸುವಂತೆ ಮನವಿ ಮಾಡಿದ್ದವು. ಅಂಜಲಿ ಹತ್ಯೆ ಹಿಂದೆ ನೇಹಾ ತಂದೆ ನಿರಂಜನ್ ಹಿರೇಮಠ್ ಆಪ್ತ ವಿಜಯ್ ಅಲಿಯಾಸ್ ಈರಣ್ಣ ಕೈವಾಡವಿದೆ ಎಂದು ದಲಿತ ಸಂಘಟನೆಗಳು ಸಿಐಡಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದವು. ಇಷ್ಟೆಲ್ಲಾ ಆದ ಮೇಲೆ ನೇಹಾ ಅವರ ಜಾತಿ ಪ್ರಮಾಣ ಪತ್ರ ವೈರಲ್ ಆಗಿದೆ.

ಇನ್ನು ನೇಹಾ ಹಂತಕ ಫಯಾಜ್ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಾಗುವುದೇ ಎಂಬ ಪ್ರಶ್ನೆಗಳು ಎದ್ದಿದ್ದು, ದಲಿತ ದೌರ್ಜನ್ಯ ಪ್ರಕರಣದಡಿ ದೂರು ದಾಖಲಾದರೆ ಅಟ್ರಾಸಿಟಿ ಪ್ರಕರಣ ದಾಖಲಾಗುವ ಸಾಧ್ಯತೆ ಇದೆ. ಕೊಲೆ ನಡೆದು ಹೆಚ್ಚು ಕಡಿಮೆ ತಿಂಗಳು ಕಳೆದರೂ ನೇಹಾ ಕೊಲೆ ಪ್ರಕರಣ ಇನ್ನೂ ಸದ್ದು ಮಾಡುತ್ತಿದೆ. ಇದರೊಂದಿಗೆ ನೇಹಾ ಮಾದರಿಯಲ್ಲೇ ನಡೆದಿದ್ದ ಅಂಜಲಿ ಕೊಲೆ ಪ್ರಕರಣವೂ ಮುನ್ನೆಲೆಗೆ ಬಂದಿದೆ. ಈ ಎರಡು ಪ್ರಕರಣಗಳು ಸಿಐಡಿ ತನಿಖೆಯಲ್ಲಿವೆ.

Join Nadunudi News WhatsApp Group

Neha And Anjali Murder Case
Image Credit: Kannada News

Join Nadunudi News WhatsApp Group