Neha Gowda Photos: ದೆಹಲಿಯಲ್ಲಿ ಸುತ್ತಾಟ ಮಾಡಿ ಅಭಿಮಾನಿಗಳ ಬೇಸರಕ್ಕೆ ಕಾರಣದ ನಟಿ ನೇಹಾ ಗೌಡ.
Actress Neha Gowda Instagram Photos: ಸದಾ ಟ್ರಾವೆಲ್ ಮಾಡುತ್ತಿರುವ ನಟಿ ನೇಹಾ ಗೌಡ (Neha Gowda)ಇದೀಗ ದೆಹಲಿಯಲ್ಲಿ ಎಂಜಾಯ್ ಮಾಡುತ್ತಾ ಇದ್ದಾರೆ. ಲಕ್ಷ್ಮಿ ಬಾರಮ್ಮ ಸೀರಿಯಲ್ ನಟಿಸಿ ಜನಪ್ರಿಯತೆ ಪಡೆದ ನಟಿ ನೇಹಾ ಗೌಡ ತಮ್ಮ ನಟನೆಯ ಮೂಲಕ ಯಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.
ಲಕ್ಷ್ಮಿ ಬಾರಮ್ಮ ಧಾರವಾಹಿಯಲ್ಲಿ ಗೊಂಬೆ ಎನ್ನು ಪಾತ್ರದ ಮೂಲಕ ಜನರ ಮನ ಗೆದ್ದ ನಟಿ ನೇಹಾ ಗೌಡ ಈಗ ನಮ್ಮ ಲಚ್ಚಿ ಧಾರಾವಾಹಿಯಲ್ಲಿ ಮತ್ತೆ ಅಭಿಮಾನಿಗಳ ಎದುರು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ನಟಿ ದೆಹಲಿಯಲ್ಲಿ ಇದ್ದಾರೆ ಎಂಬ ಮಾತು ಕೇಳಿಬಂದಿದೆ. ಅಲ್ಲದೆ ಫೋಟೋವನ್ನು ಸಹ ನೇಹಾ ಗೌಡ ಹಂಚಿಕೊಂಡಿದ್ದಾರೆ.
ಅಕ್ಕನ ಜೊತೆ ದೆಹಲಿಯಲ್ಲಿ ಕಾಣಿಸಿಕೊಂಡ ನಟಿ ನೇಹಾ ಗೌಡ
ನಟಿ ನೇಹ ಗೌಡ ದೆಹಲಿಯ ಬೀದಿಗಳಲ್ಲಿ ಎಂಜಾಯ್ ಮಾಡುತ್ತಿರುವ ಆರೇಳು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ನೇಹಾ ಹೆಚ್ಚಾಗಿ ಟ್ರಾವೆಲ್ ಮಾಡುತ್ತಲೇ ಇರುತ್ತಾರೆ. ತಮ್ಮ ಸಹೋದರಿ ಸೋನು ಗೌಡ ಜೊತೆ ಅವರು ಈ ವರ್ಷ, ಗೋವಾ, ಪಟ್ಟಾಯಂ, ಋಷಿಕೇಶ ಮೊದಲಾದ ಕಡೆಗಳಿಗೆ ಟ್ರಾವೆಲ್ ಮಾಡಿದ್ದು, ಇದೀಗ ಸೋನು ಜೊತೆ ದೆಹಲಿ ಬೀದಿ ಬೀದಿ ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದು ಆ ಫೋಟೋಗಳನ್ನು ಶೇರ್ ಮಾಡಿದ್ದಾರೆ.
View this post on Instagram
ನಟಿ ನೇಹಾ ಗೌಡ ಫೋಟೋ ನೋಡಿ ಬೇಸರ ವ್ಯಕ್ತಪಡಿಸಿದ ಅಭಿಮಾನಿಗಳು
ದೆಹಲಿಯಲ್ಲಿರುವ ಫೋಟೋಗಳನ್ನು ನೋಡುತ್ತಿದ್ದಂತೆ ಅಭಿಮಾನಿಗಳು, ನೀವಿನ್ನು ಸೀರಿಯಲ್ ನಲ್ಲಿ ಕಾಣಿಸಿಕೊಳ್ಳುವುದಿಲ್ಲವಾ, ಇಷ್ಟು ಬೇಗ ಪಾತ್ರ ಮುಗಿದು ಹೋಯಿತಾ, ಇನ್ನು ಯಾವ ಸೀರಿಯಲ್ ನಲ್ಲಿ ನಟಿಸುತ್ತಿದಿರಾ ಎಂದು ಪ್ರಶ್ನೆಗಳನ್ನು ಸಾಲು ಸಾಲಾಗಿ ಕೇಳುತ್ತಿದ್ದಾರೆ.
ನೇಹಾ ಗೌಡ ಅವರು ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ನಮ್ಮ ಲಚ್ಚಿ ಸೀರಿಯಲ್ ನಲ್ಲಿ ನಟ ವಿಜಯ್ ಸೂರ್ಯ ಜೊತೆ ತೆರೆ ಹಂಚಿಕೊಂಡಿದ್ದರು.
ಈ ಸೀರಿಯಲ್ ಚೆನ್ನಾಗಿಯೇ ಮೂಡಿಬರುತ್ತಿತ್ತು. ಆದರೆ ನೇಹಾ ಗೌಡ ಪಾತ್ರವನ್ನು ಸಾಯಿಸುವ ಮೂಲಕ ಕೊನೆಗೊಳಿಸಲಾಯಿತು. ಇಷ್ಟು ಒಳ್ಳೆ ನಟಿಯ ಪಾತ್ರವನ್ನು ಇಷ್ಟು ಬೇಗ ಕೊನೆಗೊಳಿಸಿದ್ದಕ್ಕೆ, ಇದೀಗ ಪ್ರೇಕ್ಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.