RBI Update: 2000 ರೂ ಮೇಲೆ ಇನ್ನೊಂದು ಆದೇಶ ನೀಡಿದ ರಿಸರ್ವ್ ಬ್ಯಾಂಕ್, ಇದು ಕೊನೆಯ ಆದೇಶ.
2000 ರೂಪಾಯಿ ನೋಟುಗಳ ಮೇಲೆ RBI ಇನ್ನೊಂದು ಆದೇಶವನ್ನ ಹೊರಡಿಸಿದೆ.
2000 Rs Latest Update: ಭಾರತೀಯ ರಿಸರ್ವ್ ಬ್ಯಾಂಕ್ (RBI) ಜನಸಾಮಾನ್ಯರಿಗೆ 2000 ರೂ. ನೋಟಿನ ವಿನಿಮಯ ಹಾಗೂ ಠೇವಣಿಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡುತ್ತಿದೆ. ಈಗಾಗಲೇ ನೋಟಿನ ವಿಚಾರವಾಗಿ ಸಾಕಷ್ಟು ನಕಲಿ ಸುದ್ದಿಗಳು ಹರಡಿವೆ.
ಸೋಶಿಯಲ್ ಮೀಡಿಯಾದಲ್ಲಿ ಬ್ಯಾನ್ ಆಗಿರುವ 2000 ರೂ. ನೋಟುಗಳ ಬಗ್ಗೆ ನಾನಾ ರೀತಿಯಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಇದೀಗ ಭಾರತೀಯ ರಿಸರ್ವ್ ಬ್ಯಾಂಕ್ 2000 ನೋಟುಗಳ ವಿಚಾರವಾಗಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ.
ಆರ್ ಬಿಐ ಹೊಸ ಮಾರ್ಗಸೂಚಿ ಬಿಡುಗಡೆ
ಇದೀಗ 2023 ರ ಮೇ 19 ರಂದು ಮತ್ತೆ ಆರ್ ಬಿಐ ನೋಟ್ ಬ್ಯಾನ್ ಮಾಡಿದೆ. ಈಗಾಗಲೇ ಆರ್ ಬಿಐ ಹೊಸ 2000 ರೂ ನೋಟುಗಳ ರದ್ದತಿಯ ಬಗ್ಗೆ ಘೋಷಣೆ ಹೊರಡಿಸಿದೆ. 2000 ರೂ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲು ಆದೇಶವನ್ನು ನೀಡಲಾಗಿದೆ. ಇದೀಗ ಆರ್ ಬಿಐ 2000 ರೂ ನೋಟುಗಳಿಗೆ ಸಂಬಂಧಿಸಿದಂತೆ ಮಹತ್ವದ ಮಾಹಿತಿಯನ್ನು ನೀಡಿದೆ. ನೀವು ಇನ್ನು ಕೂಡ ನಿಮ್ಮ ಬಳಿ 2000 ರೂ. ನೋಟುಗಳನ್ನು ಇಟ್ಟುಕೊಂಡಿದೆ ಆರ್ ಬಿಐ ಈ ಹೊಸ ನಿಯಮದ ಬಗ್ಗೆ ಮಾಹಿತಿ ತಿಳಿಯಿರಿ.
ನೋಟು ವಿನಿಮಯಕ್ಕೆ ಕೊನೆಯ ದಿನಾಂಕ ಹತ್ತಿರವಾಗುತ್ತಿದೆ.
ದೇಶದಲ್ಲಿ ರದ್ದಾಗಿರುವ 2000 ರೂ. ನೋಟುಗಳ ವಿನಿಮಯ ಹಾಗೂ ಠೇವಣಿಗೆ ಆರ್ ಬಿಐ ಸೆಪ್ಟೆಂಬರ್ ನ ವರೆಗೂ ಕಾಲಾವಕಾಶವನ್ನು ನೀಡಿದೆ. ಮೇ ತಿಂಗಳಿನಿಂದ ಸೆಪ್ಟೆಂಬರ್ ವರೆಗೆ ಕಾಲಾವಕಾಶವನ್ನು ನೀಡಿದ್ದು ಸೆಪ್ಟೆಂಬರ್ 30 ನೋಟು ವಿನಿಮಯ ಅಥವಾ ಠೇವಣಿಗೆ ಕೊನೆಯ ದಿನಾಂಕವಾಗಿದೆ.
2000 ರೂ ಮೇಲೆ ಇನ್ನೊಂದು ಆದೇಶ ನೀಡಿದ ರಿಸರ್ವ್ ಬ್ಯಾಂಕ್
ಈ ಹಿಂದೆ ನೋಟು ವಿನಿಮಯ ಹಾಗೂ ಠೇವಣಿಗೆ ನಿಗಧಿಪಡಿಸಿದ ದಿನಾಂಕವನ್ನು ಮುಂದೂಡಲಾಗಿದೆ ಎನ್ನುವ ಬಗ್ಗೆ ಸುದ್ದಿಗಳು ಹರಿದಾಡಿದ್ದವು. ಆರ್ ಬಿಐ ಕೊನೆಯ ದಿನಾಂಕದ ಮುಂದೂಡಿಕೆಯ ಬಗ್ಗೆ ಸ್ಪಷ್ಟನೆ ನೀಡಿತು. ಜನರು ಕೊನೆಯ ದಿನಾಂಕದ ವಿಸ್ತರಣೆಯ ನಿರೀಕ್ಷೆಯಲ್ಲಿದ್ದರು. ಆದರೆ ಆರ್ ಬಿಐ ಇದೀಗ ಸೆಪ್ಟೆಂಬರ್ 30, 2000 ರೂ ನೋಟಿನ ವಿನಿಮಯಕ್ಕೆ ಕೊನೆಯ ದಿನಾಂಕ ಎಂದು ಖಚಿತಪಡಿಸಿದೆ.
ಈ ರೀತಿಯಾಗಿ ನಿಮ್ಮ ಹಣವನ್ನು ಬ್ಯಾಂಕ್ ನಲ್ಲಿ ಜಮಾ ಮಾಡಿಕೊಳ್ಳಿ
ಇನ್ನೂ ನಿಮ್ಮ ಬಳಿ 2000 ರೂಪಾಯಿಯ ನೋಟು ಇದ್ದರೆ ಹತ್ತಿರದ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ನೋಟು ವಿನಿಮಯ ಅಥವಾ ಠೇವಣಿ ಮಾಡಿಕೊಳ್ಳಬಹುದು. ನೋಟುಗಳನ್ನು ಬ್ಯಾಂಕ್‌ನಲ್ಲಿ ಠೇವಣಿ ಮಾಡಲು ಚೀಟಿಯನ್ನು ಪಡೆದು, ಸ್ಲಿಪ್‌ನಲ್ಲಿ ಎಷ್ಟು ನೋಟುಗಳಿವೆ ಎಂಬ ಸಂಪೂರ್ಣ ಮಾಹಿತಿಯನ್ನು ಭರ್ತಿ ಮಾಡಿ. ನಂತರ ಗೊತ್ತುಪಡಿಸಿದ ಕೌಂಟರ್‌ಗೆ ಹೋಗಿ ಮತ್ತು ಸ್ಲಿಪ್‌ನೊಂದಿಗೆ ನಿಮ್ಮ 2000 ರೂಪಾಯಿ ನೋಟುಗಳನ್ನು ಜಮಾ ಮಾಡಬಹುದಾಗಿದೆ.