Bajaj CNG: ಬಡವರಿಗಾಗಿ ಬಂತು ಬಜಾಜ್ CNG ಬೈಕ್, ಕಡಿಮೆ ಬೆಲೆ ಮತ್ತು 110 ಕಿಲೋಮೀಟರ್ ಮೈಲೇಜ್

ಬಡವರ ಪಾಲಿಗೆ ವರದಾನವಾಗಲಿದೆ ಬಜಾಜ್ CNG ಬೈಕ್, ಕಡಿಮೆ ಬೆಲೆ ಮತ್ತು ಆಕರ್ಷಕ ಮೈಲೇಜ್

New Bajaj CNG Bike: ದೇಶಿಯ ಮಾರುಕಟ್ಟೆಯಲ್ಲಿ Electric ವಾಹನಗಳ ಜೊತೆ CNG ಚಾಲಿತ ವಾಹನಗಳು ಭಾರೀ ಬೇಡಿಕೆಯನ್ನು ಪಡೆಯುತ್ತಿವೆ. ಪೆಟ್ರೋಲ್ ಹಾಗೂ ಡಿಸೇಲ್ ಗೆ ಹೋಲಿಸಿದರೆ CNG ಅಗ್ಗವಾಗಿ ಸಿಗುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ ಕಾರ್, ಆಟೋ, ಬ್ರಹತ್ ವಾಹನಗಳು CNG ಆಯ್ಕೆಯೊಂದಿಗೆ ಸಿಗುತ್ತಿದೆ ಆದರೆ ಇದುವರೆಗೆ ದ್ವಿಚಕ್ರ ವಾಹನಗಳಿಗೆ CNG ಆಯ್ಕೆ ನೀಡಿರಲಿಲ್ಲ. ಇದೀಗ ಭಾರತದ ಜನಪ್ರಿಯ ದ್ವಿಚಕ್ರ ವಾಹನ ತಯಾರಕ ಕಂಪನಿಯಾದ ಬಜಾಜ್ ವಿಶ್ವದ ಮೊದಲ CNG ದ್ವಿಚಕ್ರ ವಾಹನವನ್ನು ಶೀಘ್ರದಲ್ಲೇ ಪರಿಚಯಿಸಲಿದೆ.

New Bajaj CNG Bike Feature
Image Credit: Carandbikemarathi

ಇನ್ನುಮುಂದೆ ಬೈಕ್ ಓಡಿಸಲು ಪೆಟ್ರೋಲ್ ಅಗತ್ಯವಿಲ್ಲ
ಬಜಾಜ್ ನಿರ್ದೇಶಕ ರಾಜೀವ್ ಅವರು ಕಂಪನಿಯು ಶೀಘ್ರದಲ್ಲೇ ಅಗ್ಗದ CNG ಚಾಲಿತ ಮೋಟಾರ್‌ ಸೈಕಲ್ ಅನ್ನು ಬಿಡುಗಡೆ ಮಾಡಲಿದೆ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. ಬಜಾಜ್ ಬಿಡುಗಡೆ ಮಾಡಲು ನಿರ್ಧರಿಸಿರುವ CNG ಬೈಕ್ ಬಿಡುಗಡೆ ಯಶಸ್ವಿಯಾದರೆ ಜಗತ್ತಿನಲ್ಲೇ ಮೊದಲ CNG ಚಾಲಿತ ಬೈಕ್ ಬಿಡುಗಡೆ ಮಾಡಿದ ಹೆಗ್ಗಳಿಕೆಯನ್ನು BAJAJ ಪಡೆಯಲಿದೆ. ಕಂಪನಿ ಈ ಬೈಕ್ ಅನ್ನು 2024 ರ ದೀಪಾವಳಿ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆ ಇಟ್ಟುಕೊಂಡಿದೆ.

Bajaj CNG Bike
Image Credit: Carandbikemarathi

New Bajaj Bruiser 125 CNG Bike
ಇದೀಗ ಬಜಾಜ್ ಕಂಪನಿ ಬಿಡುಗಡೆ ಮಾಡಲು ಹೊರಟಿರುವ ಈ ಹೊಸ ಬೈಕ್‌ ಗೆ ಬಜಾಜ್ ಬ್ರೂಜರ್ ಎಂದು ಹೆಸರಿಡಲಾಗಿದೆ. ಈ ಬೈಕ್ ಉತ್ತಮ ಮೈಲೇಜ್ ನಿಡುದಲ್ಲದೆ, ಆಕರ್ಷಕ ಫೀಚರ್ ಗಳನ್ನ ಪಡೆದುಕೊಂಡಿದೆ. ಹೊಸ ಬಜಾಜ್ ಬ್ರೂಜರ್ 125 ಬೈಕ್ ಅನ್ನು ಕಂಪನಿ ಸುಮಾರು 80 ರಿಂದ 85 ಸಾವಿರದ ಒಳಗೆ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇದರ ಮೈಲೇಜ್ ಕುರಿತು ಯಾವುದೇ ಮಾಹಿತಿ ಹೊರಬಿದ್ದಿಲ್ಲವಾದರೂ ಈಗಿರುವ ಪೆಟ್ರೋಲ್ ಚಾಲಿತ ಬೈಕ್‌ ಗಳಿಗಿಂತ ದುಪ್ಪಟ್ಟು ಮೈಲೇಜ್ ನೀಡಲಿದೆ. ಮೂಲಗಳಿಂದ ತಿಳಿದಿಬಂದಿರುವ ಮಾಹಿತಿಯ ಪ್ರಕಾರ ಬಜಾಜ್ CNG ಬೈಕ್ ಸುಮಾರು 110 Km ಮೈಲೇಜ್ ಕೊಡಲಿದೆ ಎಂದು ಅಂದಾಜಿಸಲಾಗಿದೆ.

Join Nadunudi News WhatsApp Group

Join Nadunudi News WhatsApp Group