New Ration Card: ಹೊಸ BPL ಕಾರ್ಡಿಗೆ ಅರ್ಜಿ ಸಲ್ಲಿಸಿದವರಿಗೆ ಗುಡ್ ನ್ಯೂಸ್, ಸರ್ಕಾರದ ಇನ್ನೊಂದು ಘೋಷಣೆ.

ಹೊಸ BPL ಕಾರ್ಡ್ ಕುರಿತಂತೆ ಗುಡ್ ನ್ಯೂಸ್ ನೀಡಿದ ಸರ್ಕಾರ.

New BPL Ration Card: ಪಡಿತರ ಚೀಟಿ ವಿತರಣೆಯ ಬಗ್ಗೆ ಈಗಾಗಲೇ ಹಲವು ಚರ್ಚೆಗಳು ನಡೆಯುತ್ತಿದೆ ಯಾಕೆಂದರೆ ಒಂದು ವರ್ಷಗಳಿಂದ ಅರ್ಜಿ ನೀಡಿದ ಯಾವ ಕುಟುಂಬಕ್ಕೂ ಪಡಿತರ ಚೀಟಿ ವಿತರಣೆ ಮಾಡಿರಲಿಲ್ಲ. ಈಗಾಗಲೇ ರಾಜ್ಯದಲ್ಲಿ ಹಲವು ಗ್ಯಾರೆಂಟಿ ಯೋಜನಗೆಳು ಜಾರಿಗೆ ಬಂದಿದ್ದು, ಹಲವು ಕುಟುಂಬಗಳು ಪಡಿತರ ಚೀಟಿ ಇಲ್ಲದೆ ಈ ಯೋಜನೆಗಳಿಂದ ಹೊರಗುಳಿದಿದ್ದಾರೆ.

ಅಷ್ಟೇ ಅಲ್ಲದೆ ಸರ್ಕಾರವು ಕೂಡ ಎಷ್ಟಾಗತ್ತೋ ಅಷ್ಟು ಯೋಜನೆಗಳ ಹಣವನ್ನು ಉಳಿಸುವ ನಿಟ್ಟಿನಿಂದ ಎಲ್ಲಾ ಪಡಿತರ ಚೀಟಿ ವಿತರಣೆಯನ್ನು ಸ್ಥಗಿತಗೊಳಿಸಿತು. ಆದರೆ ಈಗ ವಿಧಾನಸಭಾ ಚುನಾವಣೆಗೂ ಮುನ್ನ BPL ಕಾರ್ಡ್‌ಗೆ ಅರ್ಜಿ ಸಲ್ಲಿಸಿದವರಿಗೆ ಶೀಘ್ರದಲ್ಲಿ ಹೊಸ ಕಾರ್ಡ್‌ ವಿತರಣೆ ನಡೆಸಲಾಗುವುದು ಅಂತ ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

New BPL Ration Card
Image Credit: Informal Newz

ಪಡಿತರ ಚೀಟಿ ಇಲ್ಲದೇ ಹಲವು ಯೋಜನೆಯಿಂದ ಹೊರಗುಳಿದ ಕುಟುಂಬಗಳು

ಪಡಿತರ ಚೀಟಿ ಇಲ್ಲದವರಿಗೆ ಸರಕಾರ ಯಾವುದೇ ಯೋಜನೆಯ ಸೌಲಭ್ಯಗಳನ್ನು ನೀಡುವುದಿಲ್ಲ. ಗ್ಯಾರಂಟಿ ಯೋಜನೆಗಳಿಗೆ ಕಾರ್ಡ್‌ ಬೇಕಾಗಿದ್ದು, ಈ ನಿಟ್ಟಿನಲ್ಲಿ ಅಳೆದು ತೂಗಿ ಕಾರ್ಡ್‌ ನೀಡುವುದಕ್ಕೆ ಮುಂದಾಗಿದ್ದು, ಚುನಾವಣೆಗೂ ಮುನ್ನ ಸರಿ ಸುಮಾರು ಮೂರು ಲಕ್ಷ ಅರ್ಜಿಯನ್ನು ಸಲ್ಲಿಸಿದ್ದರು, ಸದ್ಯ ಅರ್ಜಿಗಳನ್ನು ಪರಿಶೀಲನೆ ನಡೆಸಿ ಏಳು ಸಾವಿರ ಮಂದಿಗೆ ಕಾರ್ಡ್‌ಗಳನ್ನು ನೀಡುವುದಕ್ಕೆ ಇಲಾಖೆ ಮುಂದಾಗಿದೆ. ಹಾಗಾಗಿ ಈ ಭಾರಿ ಎಷ್ಟು ಜನ ಪಡಿತರ ಚೀಟಿ ಪಡೆದುಕೊಳ್ಳುತಾರೋ ನೋಡಬೇಕಿದೆ.

New Ration Card
Image Credit: Original Source

ಹೊಸ ಅರ್ಜಿಗೆ ಅವಕಾಶ ಇರುವುದಿಲ್ಲ

Join Nadunudi News WhatsApp Group

ಪಡಿತರ ಚೀಟಿ ವಿತರಣೆ ಮಾಡುವುದಾಗಿ ನವೆಂಬರ್‌ನಿಂದ ಸರಕಾರ ಆದೇಶ ಜಾರಿಗೆ ತಂದಿದೆ . ಈ ಅರ್ಜಿ ವಿಲೇವಾರಿ ಆಗೋ ತನಕ ಹೊಸ ಅರ್ಜಿಗಳಿಗೆ ಅವಕಾಶವಿರುವುದಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲವೂ ಕಾನೂನು ಪ್ರಕಾರ ಹಂಚಿಕೆಯಾಗಲಿದೆ, ಫುಡ್‌ ಇನ್ಸ್‌ಪೆಕ್ಟರ್‌ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ ಬಳಿಕ ಕಾರ್ಡ್‌ ನೀಡಲಾಗುವುದು ಅಂತ ತಿಳಿಸಿದ್ದಾರೆ. ಹಾಗಾಗಿ ಬಹಳ ಪರೀಕ್ಷಿಸಿ ಪಡಿತರ ಚೀಟಿಯನ್ನು ವಿತರಣೆ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಸೂಚಿಸಿದ್ದಾರೆ.

Join Nadunudi News WhatsApp Group