Divorce Sustenance Law India: ಇತ್ತೀಚಿನ ದಿನಗಳಲ್ಲಿ ವಿಚ್ಛೇದನದ ಸುದ್ದಿಗಳು ಹೆಚ್ಚಾಗಿ ಕೇಳಿಬರುತ್ತಿದೆ. ಗಂಡ ಹೆಂಡತಿ ಇಬ್ಬರು ನ್ಯಾಯಾಲಯದ ಮೂಲಕ ವಿಚ್ಛೇದನ ಪಡೆದುಕೊಂಡ ನಂತರ ಗಂಡನಾದವನು ಹೆಂಡತಿಗೆ ಜೀವನಾಂಶವನ್ನು ಕೊಡಬೇಕು. ಆದರೆ ಈಗಿನ ಪತ್ನಿಗೆ ನೀಡುವ ಜೀವನಾಂಶದ ಕುರಿತಾಗಿ ಹೊಸ ನಿಯಮ ಜಾರಿಗೆ ತರುವುದರ ಮೂಲಕ ಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ. ಕೋರ್ಟ್ ಆದೇಶದ ಪ್ರಕಾರ ಇನ್ನುಮುಂದೆ ಇಂತಹ ಮಹಿಳೆಯರು ಗಂಡನಿಂದ ಯಾವುದೇ ಜೀವನಾಂಶ ಪಡೆದುಕೊಳ್ಳಲು ಸಾಧ್ಯವಲ್ಲ. ಲಕ್ನೋದಲ್ಲಿ ನೆಡೆದ ಇಂತಹ ಒಂದು ಕೇಸ್ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಇಲ್ಲಿದೆ.
ಕೋರ್ಟ್ ಆದೇಶದ ಹಿನ್ನಲೆ
ಈ ಪ್ರಕರಣದ ಹಿನ್ನೆಲೆ ಬಗ್ಗೆ ನೋಡುವುದಾದರೆ, ಅಂಕಿತ್ ಸಾಹ ಎಂಬ ವ್ಯಕ್ತಿ ತಮ್ಮ ಪತ್ನಿಗೆ ವಿಚ್ಚೇದನ ನೀಡಿದ್ದು, ಪತ್ನಿ ವಿಚ್ಛೇದನದ ನಂತರ ಪತಿಯಿಂದ ಜೀವನಾಂಶ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಆಕೆ ಸ್ನಾತಕೋತ್ತರ ಪದವೀಧರಳಾಗಿದ್ದು, ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತ ತಿಂಗಳಿಗೆ 36 ಸಾವಿರ ಸಂಬಳವನ್ನು ಪಡೆದುಕೊಳ್ಳುತ್ತಾಳೆ. ಆದರೂ ಕೂಡ ಪತಿಯಿಂದ ಜೀವನ ನಿರ್ವಹಣೆಗೆ ಹಣವನ್ನು ನೀಡಬೇಕು ಎಂದು ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯ ಪತ್ನಿಗೆ ಜೀವನಾಂಶ ನೀಡಬೇಕೆಂದು ಪತಿಗೆ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನೆ ಮಾಡಿ ಪತಿ ಅಲಹಾಬಾದ್ ಹೈ ಕೋರ್ಟ್ ಗೆ ಮೇಲ್ಮನವಿಯನ್ನು ಸಲ್ಲಿಸುತ್ತಾರೆ. ಈ ಮೇಲ್ಮನವಿಯನ್ನು ವಿಚಾರಣೆ ನೆಡೆಸಿದ ಅಲಹಾಬಾದ್ ಹೈ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಕೋರ್ಟ್ ಕೊಟ್ಟ ತೀರ್ಪು
ಇದೀಗ ವಿಚ್ಛೇದನದ ನಂತರ ಜೀವನಾಂಶ ನೀಡುವ ವಿಚಾರದಲ್ಲಿ ಅಲಹಾಬಾದ್ ಹೈ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ. ದುಡಿಯಲು ಶಕ್ತಳಾಗಿರುವ ಮಹಿಳೆ ಹಾಗೆ ಸ್ವಂತ ಜೀವನವನ್ನು ನಿರ್ವಹಿಸಿಕೊಂಡು ಹೋಗುವ ಸಾಮರ್ಥ್ಯ ಇರುವ ಮಹಿಳೆಗೆ ಪತಿಯಿಂದ ಜೀವನಾಂಶ ಪಡೆಯುವ ಅರ್ಹತೆ ಇಲ್ಲ ಎಂದು ತೀರ್ಪನ್ನು ನೀಡಿದೆ. ನ್ಯಾಯಾಲಯದ ತೀರ್ಪಿನ ಪ್ರಕಾರ, ವಿಚ್ಛೇದಿತ ಮಹಿಳೆ ಸ್ವಾವಲಂಬಿ ಆಗಿದ್ದು, ಆಕೆ ತಿಂಗಳಿಗೆ 36 ಸಾವಿರ ರೂಪಾಯಿ ಸಂಬಳವನ್ನು ಪಡೆದುಕೊಳ್ಳುತ್ತಾಳೆ. ಹಾಗೆ ಅವಳಿಗೆ ಮಕ್ಕಳ ಪೋಷಣೆ ಮತ್ತು ಆರ್ಥಿಕ ಹೊಣೆಗಾರಿಕೆ ಇಲ್ಲ. ಈ ಕಾರಣಕ್ಕಾಗಿ ಈಕೆಗೆ ಪತಿಯಿಂದ ಜೀವನಾಂಶ ಪಡೆಯುವ ಅರ್ಹತೆ ಇಲ್ಲ ಎಂದು ಅಲಹಾಬಾದ್ ಹೈ ಕೋರ್ಟ್ ಮಹತ್ವದ ತೀರ್ಪನ್ನು ನೀಡಿದೆ.
ಇದಲ್ಲದೆ ಪತಿಯ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿದ ನ್ಯಾಯಾಲಯ, ಆತನಿಗೆ ವಯಸ್ಸಾದ ತಂದೆ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಇದೆ, ಹೀಗಿರುವಾಗ ಸ್ವಾವಲಂಬಿ ಮಹಿಳೆಗೆ ಜೀವನಾಂಶ ನೀಡುವ ಅಗತ್ಯವಿಲ್ಲ ಎಂದು ಹೈ ಕೋರ್ಟ್ ತೀರ್ಪನ್ನು ನೀಡಿದೆ. ಕೌಟುಂಬಿಕ ನ್ಯಾಯಾಲಯವನ್ನು ಕಟುವಾಗಿ ಟೀಕಿಸಿದ ಅಲಹಾಬಾದ್ ಹೈ ಕೋರ್ಟ್, ಪ್ರತಿಯೊಂದು ಪ್ರಕರಣದಲ್ಲಿ ಮಹಿಳೆಯ ಆರ್ಥಿಕ ಸ್ಥಿತಿ, ಶಿಕ್ಷಣ, ಉದ್ಯೋಗ, ಆದಾಯ ಹಾಗೂ ಪುರುಷನ ಹೊಣೆಗಾರಿಕೆ ಎಲ್ಲವನ್ನು ಪರಿಗಣಿಸಬೇಕು ಎಂದು ಸೂಚನೆ ನೀಡಿದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

