LIC Facility: LIC ಏಜೆಂಟ್ ಮತ್ತು ಉದ್ಯೋಗಿಗಳಿಗೆ ಕೇಂದ್ರದಿಂದ ಭರ್ಜರಿ ಗುಡ್ ನ್ಯೂಸ್, ಸಿಗಲಿದೆ ಈ ಎಲ್ಲಾ ಸೌಲಭ್ಯ.
ದೇಶದ LIC ಏಜೆಂಟ್ ಹಾಗೂ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಸಿಹಿಸುದ್ದಿ.
New Facility For LIC Agent: ಕೇಂದ್ರ ಸರ್ಕಾರ ದೇಶದಲ್ಲಿನ ಉದ್ಯೋಗಿಗಳಿಗೆ ಹೆಚ್ಚಿನ ಸೌಲಭ್ಯವನ್ನು ನೀಡುತ್ತಿದೆ. ಇದೀಗ ಕೇಂದ್ರ ಮೋದಿ ಸರ್ಕಾರದ ದೇಶದ LIC Agent ಹಾಗು ಉದ್ಯೋಗಿಗಳಿಗೆ ಗಣೇಶ ಹಬ್ಬದ ಉಡುಗೊರೆಯನ್ನು ನೀಡಲು ಮುಂದಾಗಿದೆ.
ಇದೀಗ ಮೋದಿ ಸರ್ಕಾರ LIC ಏಜೆಂಟ್ ಹಾಗೂ LIC ಉದ್ಯೋಗಿಗಳ ಬಹು ದಿನದ ಬೇಡಿಕೆಯನ್ನು ಈಡೇರಿಸಲು ನಿರ್ಧರಿಸಿದೆ. ಈ ಮೂಲಕ LIC ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ನೀವು LIC ಉದ್ಯೋಗಿಗಳಾಗಿದ್ದರೆ ಈ ಮಾಹಿತಿ ನಿಮಗೆ ಉಪಯುಕ್ತವಾಗಲಿದೆ.
ದೇಶದ LIC ಏಜೆಂಟ್ ಹಾಗೂ ಉದ್ಯೋಗಿಗಳಿಗೆ ಕೇಂದ್ರ ಸರ್ಕಾರದ ಸಿಹಿ ಸುದ್ದಿ
ದೇಶದ ಲಕ್ಷಾಂತರ LIC ಏಜೆಂಟ್ ಹಾಗೂ LIC ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಬಹುದೊಡ್ಡ ಸುದ್ದಿಯನ್ನು ನೀಡಿದೆ. ಇಂದು ಹಣಕಾಸು ಸಚಿವಾಲಯವು Life Insurance Corporation Of India ಉದ್ಯೋಗಿಗಳು ಮತ್ತು LIC Agent ಗಳಿಗೆ ಕೆಲವು ಪ್ರಯೋಜನಗಳಿಗೆ ಅನುಮೋದನೆ ನೀಡಲು ಮುಂದಾಗಿದೆ.
LIC ಉದ್ಯೋಗಿಗಳು ಹಾಗೂ ಏಜೆಂಟ್ ಗಳು ಇನ್ನುಮುಂದೆ ಹೊಸ ಸೌಲಭ್ಯವನ್ನು ಪಡೆಯಬಹುದು. Limitation of gratuity, Renewable commission entitlement, term insurance and family pension ಏಕರೂಪದ ದರಕ್ಕೆ ಅನುಮೋದನೆ ರಕ್ಷಣೆ ನೀಡಲಾಗಿದೆ. LIC ಏಜೆಂಟ್ ಗಳ ಕೆಲಸದ ಪರಿಸ್ಥಿಯನ್ನು ಸುಧಾರಿಸಲು ಹಾಗೂ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ಸರ್ಕಾರ ಮುಂದಾಗಿದೆ.
LIC ಏಜೆಂಟ್ ಹಾಗೂ ಉದ್ಯೋಗಿಗಳಿಗೆ ಇನ್ನುಮುಂದೆ ಸಿಗಲಿದೆ ಈ ಎಲ್ಲ ಸೌಲಭ್ಯ
*LIC Agent ಗಳಿಗೆ ಗ್ರಾಚುವಿಟಿ ಮಿತಿಯನ್ನು 3 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಲಾಗಿದೆ.
*ಇನ್ನು ಮರು ನೇಮಕಾತಿಯ ನಂತರ ಬರುವ LIC Agent ಗಳನ್ನೂ ರಿನ್ಯೂಬಲ್ ಕಮಿಷನ್ ಗೆ ಅರ್ಹತೆ ಮಾಡಲು ಹಣಕಾಸು ಸಚಿವಾಲಯವು ಅನುಮೋದಿಸಿದೆ.
*LIC ಉದ್ಯೋಗಿಗಳ ಕಲ್ಯಾಣಕ್ಕಾಗಿ ಅವರ ಕುಟುಂಬ ಪಿಂಚಣಿಯ ಲಾಭವನ್ನು ಏಕರೂಪದ ಶೇ. 30 ರಷ್ಟು ಪಡೆಯಲು ಸಾಧ್ಯವಾಗುತ್ತದೆ.
*ಕೇಂದ್ರದ ಈ ಹೊಸ ಸೇವೆಯನ್ನು ದೇಶದಲ್ಲಿನ 13 ಲಕ್ಷಕ್ಕೂ ಹೆಚ್ಚು LIC Agent ಗಳು ಹಾಗೂ 1 ಲಕ್ಷಕ್ಕೂ ಹೆಚ್ಚು ಸಾಮಾನ್ಯ ಉದ್ಯೋಗಿಗಳು ಪಡೆಯಲಿದ್ದಾರೆ.