Hero: 63 Km ಮೈಲೇಜ್ ಕೊಡುವ ಇನ್ನೊಂದು ಅಗ್ಗದ ಬೈಕ್ ಲಾಂಚ್ ಮಾಡಿದ ಹೀರೋ, ಮಂಕಾದ ಪಲ್ಸರ್ ಮಾತ್ತು ಅಪಾಚೆ.
ವರಮಹಾಲಕ್ಷ್ಮಿ ಹಬ್ಬಕ್ಕೆ ನವೀಕರಿಸಿದ ಗ್ಲಾಮರ್ ಬೈಕ್ ಅನ್ನು ಬಿಡುಗಡೆಗೊಳಿಸಲು ಕಂಪನಿಯು ನಿರ್ಧರಿಸಿದೆ.
Hero New Mileage Bike: ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಬೈಕ್ ಗಳು ಅಗ್ಗದ ಬೆಲೆಯಲ್ಲಿ ಸಿಗಲಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ದ್ವಿಚಕ್ರ ವಾಹನ ತಯಾರಕ ಕಂಪನಿಗಳು ದುಬಾರಿ ಮೌಲ್ಯದ ಬೈಕ್ ಗಳನ್ನು ಬಿಡುಗಡೆ ಮಾಡಿವೆ. ಸಾಮಾನ್ಯವಾಗಿ ಯುವಕರು ಬೈಕ್ ಖರೀದಿಸಲು ಇಷ್ಟ ಪಡುತ್ತಾರೆ. ದುಬಾರಿ ವೆಚ್ಚದ ಬೈಕ್ ಗಳ ಖರೀದಿಯು ಕೆಲವರಿಗೆ ಅಸಾಧ್ಯವಾಗುತ್ತದೆ.
ಇನ್ನು ಮಾರುಕಟ್ಟೆಯಲ್ಲಿ ಕೆಲವು ಕಂಪನಿಗಳು ಕಡಿಮೆ ಬೆಲೆಯ ಬೈಕ್ ಗಳನ್ನೂ ಕೂಡ ಪರಿಚಯಿಸಿವೆ. ಇನ್ನು ಕೆಲವು ಕಂಪನಿಗಳು ಬೈಕ್ ಖರೀದಿಯ ಮೇಲೆ ಗ್ರಾಹಕರಿಗೆ ಅನುಕೂಲವಾಗಲು ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿವೆ. ಇದೀಗ ನೀವು ಬೈಕ್ ಖರೀದಿಸುವ ಯೋಜನೆಯಲ್ಲಿದ್ದರೆ ಹೀರೋ ಮೋಟೊಕಾರ್ಪ್ (Hero) ಕಂಪನಿಯು ನಿಮಗೆ ವರಮಹಾಲಕ್ಷ್ಮಿ ಹಬ್ಬದ ಕೊಡುಗೆಯನ್ನು ನೀಡಲಿದೆ.
ನವೀಕರಿಸಿದ ವಿನ್ಯಾಸದಲ್ಲಿ ಮಾರುಕಟ್ಟೆಯಲ್ಲಿ ಹೀರೋ ಗ್ಲಾಮರ್ ಲಾಂಚ್
ಇದಿಹ ಹೀರೋ ಕಂಪನಿಯು ನವೀಕರಿಸಿದ ಮಾದರಿಯ ಹೀರೋ ಗ್ಲಾಮರ್ ಬೈಕ್ ಅನ್ನು ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಹೀರೋ ಗ್ಲಾಮರ್ ಡ್ರಮ್ ಮತ್ತು ಡಿಸ್ಕ್ ರೂಪಾಂತರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಕ್ಯಾಂಡಿ ಬ್ಲೇಜಿಂಗ್ ರೆಡ್, ಟೆಕ್ನೋ ಬ್ಲೂ-ಬ್ಲಾಕ್ ಮತ್ತು ಸ್ಪೋರ್ಟ್ಸ್ ರೆಡ್-ಬ್ಲಾಕ್ ನ ಮೂರು ಬಣ್ಣಗಳ ಆಯ್ಕೆಯಲ್ಲಿ ಈ ನವೀಕರಿಸಿದ ವಿನ್ಯಾಸದ ಬೈಕ್ ಲಭ್ಯವಾಗಲಿದೆ.
ಹೀರೋ ಗ್ಲಾಮರ್ ಬೈಕ್ (Hero Glamour Bike) ಬೆಲೆ
ಹೀರೋ ಗ್ಲಾಮರ್ ಡ್ರಮ್ ಮತ್ತು ಡಿಸ್ಕ್ ರೂಪಾಂತರದ ಬೆಲೆ 82,348 ಹಾಗೂ 86,348 ರೂ. ಆಗಿದೆ. ಇನ್ನು ಈ ಬೈಕ್ ನಲ್ಲಿ ನವೀಕರಿಸಿದ ಎಂಜಿನ್ ಅನ್ನು ನೀಡಲಾಗಿದೆ. 125 ಸಿಸಿ ಸಿಂಗಲ್ ಸಿಲಿಂಡರ್ ಏರ್ ಕೂಲ್ಡ್ ಹೊಂದಿದ್ದು, 7500 rpm ನಲ್ಲಿ 10 .68 bhp ನ ಗರಿಷ್ಟ ಪವರ್ ಹಾಗೂ 6000 rmp ನಲ್ಲಿ 10 .6 Nm ಪಿಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಜೊತೆಗೆ i3S ಐಡಲ್ ಸ್ಟಾಪ್ ಅಥವಾ ಸ್ಟಾರ್ಟ್ ಬಟನ್ ಅನ್ನು ಅಳವಡಿಸಲಾಗಿದೆ.
ಭರ್ಜರಿ 63 ಕಿಲೋಮೀಟರ್ ಮೈಲೇಜ್ ನೀಡಲಿದೆ ಈ ಬೈಕ್
ಇನ್ನು ಮಾರುಕಟ್ಟೆಯಲ್ಲಿ ಲಭ್ಯವಿರುವ ಟಿವಿಎಸ್ ರೈಡರ್ 125 , ಬಜಾಜ್ ಪಲ್ಸರ್ 125 , ಹೋಂಡಾ ಶೈನ್ ಬೈಕ್ ಗಳ ಜೊತೆ ಸ್ಪರ್ದಿಸಲು ಬಾರಿ ಮೈಲೇಜ್ ನಲ್ಲಿಯೇ ಹೀರೋ ಗ್ಲಾಮರ್ ಬೈಕ್ ಬಿಡುಗಡೆಯಾಗಿದೆ. ಈ ಬೈಕ್ ಬರೋಬ್ಬರಿ ಪ್ರತಿ ಲೀಟರ್ ಗೆ 63 ಕಿಲೋಮೀಟರ್ ಮೈಲೇಜ್ ನೀಡಲಿದೆ. ನೂತನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿರುವ ಈ ಬೈಕ್ ಮಾರುಕಟ್ಟೆಯಲ್ಲಿ ಬಾರಿ ಬೇಡಿಕೆ ಕಾಣುವ ಸಾದ್ಯತೆ ಇದೆ.