New information about kantara 2: ಕಾಂತಾರ 2 ಬಗ್ಗೆ ಸಿಗ್ತು ಹೊಸ ಮಾಹಿತಿ, ಸೆಟ್ಟೇರುವುದು ಪಕ್ಕಾ

New Information About Kantara 2 is sure to be revealed: ಸದ್ಯ ತಮ್ಮ ಸಿನಿಮಾ ಕಾಂತಾರ ಯಶಸ್ಸಿನ ಬಳಿಕ ನಟ ರಿಷಬ್ ಶೆಟ್ಟಿ(Rishab Shetty) ಫುಲ್ ಬ್ಯುಸಿಯಾಗಿದ್ದಾರೆ. ಹೌದು ಕೈಗೆ ಸಿಗದಷ್ಟು ಬ್ಯುಸಿಯಾಗಿರುವ ನಟ ಕಾಂತಾರ 2 ಸಿನಿಮಾ ಮಾಡುತ್ತಾರಾ? ಕಾಂತಾರ 2 ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ವಿಪರೀತ ಕುತೂಹಲ ಇದ್ದು ಈ ಸಿನಿಮಾ ಯಾವಾಗ ಬರುತ್ತದೆ? ಕಾಂತಾರ 2 ಸಿನಿಮಾ ಖಂಡಿತಾ ಮಾಡ್ತಾರಾ ಎನ್ನುವ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ.

ಆದರೆ ಮಾತ್ರ ಈ ಯಾವುದರ ಬಗ್ಗೆ ಕೂಡ ಯಾವುದೇ ಹೇಳಿಕೆ ಕೊಟ್ಟಿಲ್ಲ ರಿಷಬ್ ಶೆಟ್ಟಿ. ಸದ್ಯ ಕಾಂತಾರ ತುಳುವಿನಲ್ಲಿ(Tulu) ಬುಡುಗಡೆ ಆಗುತ್ತಿದ್ದು ಕಾಂತಾರದ ಕೆಲಸಗಳು ರಿಷಬ್ ಅವರನ್ನು ಬ್ಯುಸಿಯಾಗಿಸಿದೆ ಎನ್ನಬಹುದು.ಸದ್ಯ ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ ದಿಗಂತ್(Diganth) ರವರ ಹೇಳಿಕೆಯೊಂದು ಇದೀಗ ಕಾಂತಾರ 2 ಬಗ್ಗೆ ಹೊಸ ಹಿಂಟ್ ಕೊಟ್ಟಿದೆ ಎನ್ನಬಹುದು.

New information about Kantara 2 is sure to be revealed
Image Source: India Today

 

ಸದ್ಯ ರಿಷಬ್ ಶೆಟ್ಟಿಯವರು ಕಾಂತಾರ 2 ಚಿತ್ರದಲ್ಲಿ ಬ್ಯುಸಿಯಾಗಿದ್ದು ಈ ಕಾರಣದಿಂದಾಗಿ ಅವರು ಬ್ಯಾಚುರಲ್ ಪಾರ್ಟಿ(Bachelor Party) ಸಿನಿಮಾದಲ್ಲಿ ನಟಿಸುವುದಿಲ್ಲ ಎಂದು ನಟ ದಿಗಂತ್ ರಿವೀಲ್ ಮಾಡಿದ್ದಾರೆ.ಇನ್ನು ಇದೇ ಸಂದರ್ಭ ಕಾಂತಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನಟ ದಿಂಗತ್ ಈ ಸಿನಿಮಾ ನಮಗೆಲ್ಲರಿಗೂ ಹೆಮ್ಮೆ ಎನ್ನುವುದನ್ನೂ ಹೇಳಿದ್ದಾರೆ.

ಇನ್ನು ಕಾಂತಾರ ಸಿನಿಮಾ ಸದ್ಯ ಸಕ್ಸಸ್​ಫುಲ್ ಆಗಿ ಓಡುತ್ತಿದ್ದು 400 ಕೋಟಿಗೂ ಹೆಚ್ಚು ಗಳಿಸಿ ಬಾಕ್ಸ್ ಆಫೀಸ್(Box Office) ಕೊಳ್ಳೆ ಹೊಡೆಯುತ್ತಿದ್ದು ಇನ್ನು ಕಾಂತಾರ ಸಿನಿಮಾ ಹಿಂದಿಯಲ್ಲಿ 75 ಕೋಟಿ ತೆಲುಗಿನಲ್ಲಿ 50 ಕೋಟಿಗೂ ಹೆಚ್ಚು ಗಳಿಸಿದ್ದು ಉತ್ತಮ ಪ್ರತಿಕ್ರಿಯೆ ಕೂಡ ಪಡೆಯುತ್ತಿದೆ ಎನ್ನಬಹುದು.ರಿಷಬ್ ಶೆಟ್ಟಿ ಮತ್ತು ರಕ್ಷಿತ್ ಶೆಟ್ಟಿ ಹಲವು ವರ್ಷಗಳ ಗೆಳೆಯರಾಗಿದ್ದು ಸದ್ಯ ಚಂದನವನದ ಸ್ಟಾರ್ ನಟರಾಗಿ ಹಾಗೂ ಬಹು ಬೇಡಿಕೆಯ ನಿರ್ದೇಶಕರಾಗಿ ದೊಡ್ಡ ಮಟ್ಟದ ಸಾಧನೆ ಮಾಡಿರುವ ಈ ಇಬ್ಬರೂ ಹೆಸರು ಮಾಡುವುದಕ್ಕೂ ಮುಂಚಿನಿಂದಲೂ ಕುಚಿಕುಗಳಾಗಿದ್ದವರು.

Join Nadunudi News WhatsApp Group

New information about Kantara 2 is sure to be revealed
Image Source: India Today

2010ರಲ್ಲಿ ತೆರೆಕಂಡಿದ್ದ ನಮ್ ಏರಿಯಾಲ್ ಒಂದ್ ದಿನನಎಂಬ ಚಿತ್ರದ ಮೂಲಕ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ ಇಬ್ಬರೂ ಸಹ ಚಿತ್ರರಂಗ ಪ್ರವೇಶಿಸಿದ್ದರು. ತದನಂತರ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದಲ್ಲಿ ನಟಿಸಿ ಬ್ರೇಕ್ ಪಡೆದ ರಕ್ಷಿತ್ ಶೆಟ್ಟಿ ತಾವೇ ನಿರ್ದೇಶಿಸಿ ನಟಿಸಿದ್ದ ಉಳಿದವರು ಕಂಡಂತೆ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ನೀಡಿದ್ದರು.

ಇನ್ನು ಇದಾದ ಬಳಿಕ ನಿರ್ದೇಶಕನಾಗಿ ಮೊದಲ ಚಿತ್ರ ಮಾಡಿದ ರಿಷಬ್ ಶೆಟ್ಟಿ ಯವರು ರಿಕ್ಕಿ ಚಿತ್ರದಲ್ಲಿ ರಕ್ಷಿತ್ ಶೆಟ್ಟಿಯನ್ನು ನಾಯಕನ್ನಾಗಿ ಆಯ್ಕೆ ಮಾಡಿಕೊಂಡಿದ್ದು ಅಷ್ಟೇ ಅಲ್ಲದೇ ಇದೇ ಕಾಂಬಿನೇಷನ್‌ನಲ್ಲಿ ಮೂಡಿಬಂದ ಮತ್ತೊಂದು ಚಿತ್ರ ಕಿರಿಕ್ ಪಾರ್ಟಿ ಐವತ್ತು ಕೋಟಿ ಕ್ಲಬ್ ಸೇರಿ ಗಲ್ಲಾಪೆಟ್ಟಿಗೆ ಲೂಟಿ ಮಾಡಿತ್ತು.

New information about Kantara 2 is sure to be revealed
Image Source: India Today

ಹೀಗೆ ತಾವು ಕೆಲಸ ನಿರ್ವಹಿಸಿದ ಬಹುತೇಕ ಎಲ್ಲಾ ಯೋಜನೆಗಳಲ್ಲೂ ಒಬ್ಬರನ್ನೊಬ್ಬರು ಆಯ್ಕೆ ಮಾಡಿಕೊಳ್ಳುತ್ತಿದ್ದ ಈ ಜೋಡಿ ಬ್ಯಾಚುಲರ್ ಪಾರ್ಟಿ ಎಂಬ ಮತ್ತೊಂದು ಸಿನಿಮಾ ಗೆ ಕೂಡ ಕೈ ಜೋಡಿಸಿತ್ತು. ಹೌದು ರಕ್ಷಿತ್ ಶೆಟ್ಟಿ ನಿರ್ಮಾಣದ ಮುಂದಿನ ಚಿತ್ರ ಬ್ಯಾಚುಲರ್ ಪಾರ್ಟಿಯಲ್ಲಿ ರಿಷಬ್ ಶೆಟ್ಟಿ ಅಭಿನಯಿಸಲಿದ್ದಾರೆ ಎಂದು ಚಿತ್ರದ ಪೋಸ್ಟರ್ ಕೂಡ ಘೋಷಣೆಯಾಗಿದ್ದು ಇದೀಗ ರಿಷಬ್ ಶೆಟ್ಟಿ ರಕ್ಷಿತ್ ಶೆಟ್ಟಿ ನಿರ್ಮಾಣದ ಬ್ಯಾಚುಲರ್ ಪಾರ್ಟಿಯಿಂದ ಹೊರನಡೆದಿರುವ ಸುದ್ದಿ ಕೇಳಿ ವೀಕ್ಷಕರು ಗೊಂದಲಕ್ಕೆ ಒಳಗಾಗಿದ್ದಾರೆ.

ರಿಷಬ್ ಶೆಟ್ಟಿ ಕಾಂತಾರ 2 ಚಿತ್ರಕ್ಕಾಗಿ ಕೆಲಸ ಆರಂಭಿಸಿದ್ದಾರೆ ಎಂದು ಖುಷಿ ಪಡಬೇಕಾ ಅಥವಾ ಈ ಚಿತ್ರದಿಂದ ಹೊರನಡೆದು ಬೇಸರ ಮಾಡಿದರು ಎಂದುಕೊಳ್ಳಬೇಕಾ ಎಂದುಕೊಳ್ಳುತ್ತಿದ್ದಾರೆ. ಇದೆಲ್ಲದ್ದರ ನಡುವೆ ರಿಷಬ್ ಅವರ ಈ ನಡೆ ರಕ್ಷಿತ್ ಶೆಟ್ಟಿ ಜತೆಗಿನ ಸ್ನೇಹಕ್ಕೆ ಮುಳುವಾಗದಿರಲಿ ಎಂದು ಕೂಡ ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ.

New information about Kantara 2 is sure to be revealed
Image Source: India Today

Join Nadunudi News WhatsApp Group