Employees Leave: ದೇಶದಲ್ಲಿ ಜಾರಿಗೆ ಬಂತು ಹೊಸ ರಜಾ ನೀತಿ, ಸರ್ಕಾರೀ ನೌಕರರಿಗೆ ಬಂಪರ್ ಗುಡ್ ನ್ಯೂಸ್ ಕೊಟ್ಟ ಕೇಂದ್ರ.

ಕೇಂದ್ರ ಸರ್ಕಾರೀ ನೌಕರರಿಗಾಗಿ ಹೊಸ ರಜಾ ನೀತಿಯನ್ನು ಅನುಷ್ಠಾನಗೊಳಿಸಿದ ಕೇಂದ್ರ ಸರ್ಕಾರ.

Government Employees New Leave Policy: ಕೇಂದ್ರದ ಸರ್ಕಾರೀ ನೌಕರರಿಗೆ (Government Employees) ಹೊಸ ರಜಾ ನೀತಿ ಜಾರಿಗೆ ( New Leave Policy) ತರುವ ಬಗ್ಗೆ ಸರ್ಕಾರ ಈಗಾಗಲೇ ಘೋಷಣೆ ಹೊರಡಿಸಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ಸರ್ಕಾರೀ ನೌಕರರಿಗೆ ಸಿಹಿ ಸುದ್ದಿ ನೀಡುತ್ತಲೇ ಇದೆ.

ಇನ್ನು ಸರ್ಕಾರ ಈಗಾಗಲೇ ಹಳೆಯ ಪಿಂಚಣಿ ಜಾರಿ ತುಟ್ಟಿಭತ್ಯೆ ಹೆಚ್ಚಳ ಮಾಡುವುದಾಗಿ ಘೋಷಣೆ ಹೊರಡಿಸಿತ್ತು. ಇದೀಗ ಕೇಂದ್ರದಿಂದ ಹೊಸ ರಜಾ ನೀತಿ ಜಾರಿಯಾಗಿದೆ. ಕೇಂದ್ರ ಸರ್ಕಾರೀ ನೌಕರರು ಇನ್ನುಮುಂದೆ ಹೆಚ್ಚಿನ ರಜೆಯನ್ನು ಪಡೆಯಬಹುದಾಗಿದೆ. ಇನ್ನು ರಜಾ ನೀತಿ ಜಾರಿ ಮಾಡುದರ ಜೊತೆ ಕೆಲವು ಷರತ್ತುಗಳನ್ನು ವಿಧಿಸಲಾಗಿದೆ.

Central Government has implemented a new leave policy for central government employees.
Image Credit: Informalnewz

ಕೇಂದ್ರ ನೌಕರರಿಗಾಗಿ ಹೊಸ ರಜಾ ನೀತಿ ಜಾರಿ ( New Leave Policy) 
ಕೇಂದ್ರ ನೌಕರರಿಗಾಗಿ ಸರ್ಕಾರ ಹೊಸ ರಜೆ ನೀತಿಯನ್ನು ಅನುಷ್ಠಾನಗೊಳಿಸಿದೆ. ಈ ಮೂಲಕ ಕೇಂದ್ರ ಉದ್ಯೋಗಿಗಳಿಗೆ ಸಿಹಿ ಸುದ್ದಿ ನೀಡಿದೆ. ಸರ್ಕಾರೀ ನೌಕರರು ಹೆಚ್ಚಿನ ರಜೆಯನ್ನು ಪಡೆಯುತ್ತಾರೆ. ಇದೀಗ ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದ್ದು, ಹೊಸ ನಿಯಮದ ಅಡಿಯಲ್ಲಿ ಸರ್ಕಾರೀ ನೌಕರರ ರಜಾ ದಿನವನ್ನು ಹೆಚ್ಚಿಸಲಾಗಿದೆ. ಕೇಂದ್ರ ಸರ್ಕಾರ ಹೊಸ ರಜೆ ನೀತಿಯನ್ನು ಪ್ರಕಟಿಸಿದ್ದು ಅದರಲ್ಲಿ ಕೆಲವು ಷರತ್ತುಗಳನ್ನು ಅಳವಡಿಸಲಾಗಿದೆ.

ಕೇಂದ್ರ ನೌಕರರಿಗೆ 42 ದಿನ ವಿಶೇಷ ರಜೆ ಲಭ್ಯ
ಕೇಂದ್ರ ಸರ್ಕಾರ ಹೊಸ ರಜಾ ನೀತಿಯನ್ನು ಪ್ರಕಟಿಸಿದ್ದು ಈ ನಿಯಮದ ಅಡಿಯಲ್ಲಿ ಕೆಲಸ ಮಾಡುವ ಸರ್ಕಾರೀ ಉದ್ಯೋಗಿ ಅಂಗಾಂಗ ದಾನ ಮಾಡಿದರೆ 42 ದಿನಗಳ ವಿಶೇಷ ತುರ್ತು ರಜೆಯನ್ನು ನೀಡುವುದಾಗಿ ಘೋಷಿಸಲಾಗಿದೆ. ಇನ್ನು ಡಿಒಪಿಟಿ ಈ ಹೊಸ ರಜಾ ನೀತಿಯ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ.

ಉದ್ಯೋಗಿಯೂ ತನ್ನ ದೇಹದ ಯಾವುದೇ ಭಾಗವನ್ನು ದಾನ ಮಾಡಿದರು ಕೂಡ ಅದನ್ನು ಶಸ್ತ್ರ ಚಿಕೆತ್ಸೆಯೆಂದು ಪರಿಗಣಿಸಿ ಉದ್ಯೋಗಿ ಬೇಗ ಗುಣಮುಖವಾಗಲಿ ಎನ್ನುವ ಕಾರಣಕ್ಕೆ 42 ದಿನಗಳ ರಜೆಯನ್ನು ನೀಡಲಾಗುತ್ತದೆ.

Join Nadunudi News WhatsApp Group

Central Government has implemented a new leave policy for central government employees.
Image Credit: Krishijagran

ಹೊಸ ರಜಾ ನೀತಿ ಯಾರಿಗೆ ಲಭ್ಯವಿಲ್ಲ
ಇನ್ನು ಒಂದು ವರ್ಷದಲ್ಲಿ ಉದ್ಯೋಗಿಯೂ 30 ದಿನಗಳ ತುರ್ತು ರಜೆಯನ್ನು ನೀಡಲಾಗಿದ್ದು ಪ್ರಸ್ತುತ ರಜೆ ದಿನವನ್ನು 42 ಕ್ಕೆ ಹೆಚ್ಚಿಸಲಾಗಿದೆ. ಇನ್ನು ಕೆಲವು ಸರ್ಕಾರೀ ಉದ್ಯೋಗಿಗಳಿಗೆ ಈ ಹೊಸ ರಜಾ ನೀತಿ ಅನ್ವಯವಾಗುವುದಿಲ್ಲ.

ರೈಲ್ವೆ ಮತ್ತು ಅಖಿಲ ಭಾರತ ಸೇವೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ಕೇಂದ್ರದ ಈ ಹೊಸ ರಜೆ ನೀತಿ ಅರ್ಹರಾಗಿರುವುದಿಲ್ಲ. ಏಪ್ರಿಲ್ ತಿಂಗಳಿನಿಂದ ಈ ಹೊಸ ರಜಾ ನೀತಿಯನ್ನು ಜಾರಿಗೊಳಿಸಲಾಗಿದೆ.

Join Nadunudi News WhatsApp Group