New Loan Scheme: ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್, ಈ ಯೋಜನೆಯಡಿ ಸಿಗಲಿದೆ 65000 ಸಾಲ.
ರಾಜ್ಯದ ಮಹಿಳೆಯರಿಗೆ ಈ ಯೋಜನೆಯಡಿ ಸಿಗಲಿದೆ 65000 ಸಾಲ.
New Loan Scheme For Women’s: ಸದ್ಯ ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಯೋಜನೆಯನ್ನು ಜಾರಿಗೊಳಿಸುತ್ತಿದೆ. ರಾಜ್ಯದ ಜನತೆ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದಾರೆ ಎನ್ನಬಹುದು. ಇನ್ನು ರಾಜ್ಯ ಸರ್ಕಾರ ಹೆಚ್ಚಾಗಿ ರೈತರ ಏಳಿಗೆಗಾಗಿ ಶ್ರಮಿಸುತ್ತಿದೆ. ರೈತರಿಗಾಗಿ ಈಗಾಗಲೇ ಅನೇಕ ಯೋಜನೆಯನ್ನು ಪರಿಚಯಿಸಿರುವ ರಾಜ್ಯ ಸರ್ಕಾರ, 2024 -25 ರ ಬಜೆಟ್ ನಲ್ಲಿ ರೈತ ಮಹಿಳೆಯರಿಗೆ ವಿಶೇಷ ಸೌಲಭ್ಯವನ್ನು ನೀಡುವ ಬಗ್ಗೆ ನಿರ್ಧಾರವನ್ನು ಕೈಗೊಂಡಿದೆ.
ರಾಜ್ಯದ ಮಹಿಳೆಯರಿಗೆ ಭರ್ಜರಿ ಗುಡ್ ನ್ಯೂಸ್
ಸದ್ಯ ರಾಜ್ಯ ಸರ್ಕಾರ ಮಹಿಳೆಯರಲ್ಲಿ ಹೈನುಗಾರಿಕೆಯನ್ನು ಪ್ರೋತ್ಸಾಹಿಸಲು ಮಹತ್ವದ ಹೆಜ್ಜೆಯನ್ನು ಇಡಲು ಮುಂದಾಗಿದೆ. ರಾಜ್ಯದ ರೈತ ಮಹಿಳೆಯರು ಸರ್ಕಾರ ಹೊಸ ಯೋಜನೆಯನ್ನು ರೂಪಿಸಿದೆ. ಈ ನೂತನ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಬಡ್ಡಿ ಸಹಾಯಧನವನ್ನು ನೀಡಿ, ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ರಾಜ್ಯ ಸರಕಾರ ಹಾಕಿಕೊಂಡಿದೆ ಎನ್ನಬಹುದು. ಈ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ಈ ಯೋಜನೆಯಡಿ ಸಿಗಲಿದೆ 65000 ಸಾಲ
2024-25 ನೇ ಸಾಲಿನ ಬಜೆಟ್ ಭಾಷಣದಲ್ಲಿ ಘೋಷಿಸಿದಂತೆ, ಮಹಿಳಾ ರೈತರಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು, ಹಸು ಮತ್ತು ಎಮ್ಮೆಗಳನ್ನು ಖರೀದಿಸಲು ಸಮಯಕ್ಕೆ ಸಾಲವನ್ನು ಮರುಪಾವತಿ ಮಾಡುವ ಮಹಿಳೆಯರಿಗೆ 6% ಬಡ್ಡಿ ಸಹಾಯಧನ ನೀಡುವ ಯೋಜನೆ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಸರ್ಕಾರದ ಅನುಮೋದನೆಯಂತೆ, ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಕಾರ್ಯಕ್ರಮವನ್ನು ನಡೆಸಲಾಗಿದೆ ಮತ್ತು ತಾಲೂಕುವಾರು ಗುರಿ ನಿಗದಿಪಡಿಸಲಾಗಿದೆ.
ಪ್ರಸಕ್ತ ವರ್ಷದಲ್ಲಿ ಹೈನುಗಾರಿಕೆಗಾಗಿ ವಿವಿಧ ಬ್ಯಾಂಕ್ ಗಳಲ್ಲಿ ಸಾಲ ಪಡೆಯುವ ಪ್ರತಿಯೊಬ್ಬ ಫಲಾನುಭವಿಗೆ ಗರಿಷ್ಠ ರೂ. 65 ಸಾವಿರಗಳವರೆಗೆ ಶೇ.6 ಬಡ್ಡಿ ಸಹಾಯಧನ ನೀಡಲಾಗುವುದು. ಪ್ರತಿ ಹಸು/ಎಮ್ಮೆ ಘಟಕಕ್ಕೆ ರೂ. 65000 ಮೊತ್ತ, ಪ್ರತಿ ಫಲಾನುಭವಿಗೆ 6% ವಾರ್ಷಿಕ ಬಡ್ಡಿ ಸಬ್ಸಿಡಿ ಗರಿಷ್ಠ ರೂ.3624.50 ಪಡೆಯಬಹುದು. ಈ ಯೋಜನೆಯ ಅನುಷ್ಠಾನಕ್ಕಾಗಿ ಸಾಲವನ್ನು ಪಡೆದ ಅರ್ಹ ಫಲಾನುಭವಿಗಳು ಅಗತ್ಯ ಮತ್ತು ಸೂಕ್ತ ದಾಖಲೆಗಳೊಂದಿಗೆ ತಮ್ಮ ವ್ಯಾಪ್ತಿಯ ಸ್ಥಳೀಯ ಪಶು ವೈದ್ಯಕೀಯ ಚಿಕಿತ್ಸಾಲಯದ ಪಶು ವೈದ್ಯಾಧಿಕಾರಿಯನ್ನು ಸಂಪರ್ಕಿಸಬಹುದು. ಈ ಮೂಲಕ ಯೋಜನೆಯ ಲಾಭವನ್ನು ಪಡೆದುಕೊಳ್ಳಬಹುದು.