Ads By Google

Mahindra Thar Roxx: ಬಂತು ಮಹಿಂದ್ರಾ 5 ಡೋರ್ ಥಾರ್ Roxx, ಫೀಚರ್ ಕಂಡು ಯುವಕರು ಫುಲ್ ಫಿದಾ

new mahindra thar roxx

Image Credit: Original Source

Ads By Google

Mahindra Thar Roxx Price And Feature: ಪ್ರಸ್ತುತ ಮಾರುಕಟ್ಟೆಯಲ್ಲಿ ಟಾಪ್ ಸ್ಥಾನದಲ್ಲಿರುವ Mahindra ನವೀಕರಿಸಿದ ವಿನ್ಯಾಸದ SUV ಯನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಮಹಿಂದ್ರಾ ಕಂಪನಿಯ 3 Door Thar ಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು.

ಸದ್ಯ ಮಾರುಕಟ್ಟೆಯಲ್ಲಿ 3 ಡೋರ್ ಥಾರ್ ನ ಮಾದರಿಯ ಬೆನ್ನಲ್ಲೇ ಕಂಪನಿಯು ಇನ್ನೊಂದು ಅತ್ಯಾಕರ್ಷಕ ಥಾರ್ ಮಾದರಿಯನ್ನು ಪರಿಚಯಿಸಲು ಮುಂದಾಗಿದೆ. ಸದ್ಯ ನಾವೀಗ ಈ ಲೇಖನದಲ್ಲಿ ಮಹಿಂದ್ರಾ ಹೊಸ ಮಾದರಿಯ SUV ಬಗ್ಗೆ ಮಾಹಿತಿ ನೀಡಲಿದ್ದೇವೆ. ನೀವು ಹೊಸ ಥಾರ್ ನ ಖರೀದಿಗಾಗಿ ಯೋಜನೆ ಹಾಕಿಕೊಂಡಿದ್ದಾರೆ, ಥಾರ್ ನ ಬಗ್ಗೆ ಒಂಧಿಷ್ಟು ಮಾಹಿತಿ ತಿಳಿದುಕೊಳ್ಳಿ.

Image Credit: Original Source

ಥಾರ್ ಪ್ರಿಯರಿಯಾಗಿ ಹೊಸ ಆಯ್ಕೆ
ಮಾರುಕಟ್ಟೆಯಲ್ಲಿ Mahindra Thar Roxx ಶೀಘ್ರದಲ್ಲೇ ಭಾರತೀಯ ಮಾರುಕಟ್ಟೆಯನ್ನು ಪ್ರವೇಶಿಸಲಿದೆ. ಕಂಪನಿಯು ಈ ಮಾದರಿಯ ಲಾಂಚ್ ದಿನಾಂಕವನ್ನು ಸಹ ಅಧಿಕೃತವಾಗಿ ನಿರ್ಧರಿಸಲಾಗಿದೆ. ಮಹೀಂದ್ರ ಥಾರ್ ರೋಕ್ಸ್ ಕಾರು ಮಾರುಕಟ್ಟೆಯಲ್ಲಿ ಸದ್ದು ಮಾಡಲು ಸಿದ್ಧವಾಗಿದ್ದು, ಎಲ್ಲಾ ಷರತ್ತುಗಳೊಂದಿಗೆ ಬಿಡುಗಡೆ ದಿನಾಂಕವನ್ನು ಸಹ ನಿಗದಿಪಡಿಸಲಾಗಿದೆ. ಮಹೀಂದ್ರ ಥಾರ್ ರೋಕ್ಸ್ ವಾಹನವನ್ನು 15 ಆಗಸ್ಟ್ 2024 ರಂದು ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಅಧಿಕೃತವಾಗಿ ಘೋಷಿಸಿದೆ. ಮಾರುಕಟ್ಟೆಯಲ್ಲಿ ಥಾರ್ ರಾಕ್ಸ್ ಆಗಿ ಮಹೀಂದ್ರ ಥಾರ್ ಐದು-ಬಾಗಿಲಿನ ಕಾರ್ ಲಾಂಚ್ ಆಗಲಿದೆ.

ನೂತನ ಥಾರ್ ರಾಕ್ಸ್ ನಲ್ಲಿ ಏನೆಲ್ಲಾ ಫೀಚರ್ ಇದೆ ಗೊತ್ತಾ…?
ಮಹೀಂದ್ರ ಥಾರ್ 5 ಡೋರ್ ನಲ್ಲಿ ಹೊಸ ಮಿಶ್ರಲೋಹದ ಚಕ್ರಗಳನ್ನು ನೀಡಲಾಗಿದೆ. 10-ಇಂಚಿನ ಡಿಜಿಟಲ್ ಡ್ರೈವರ್ ಡಿಸ್‌ ಪ್ಲೇ, ದೊಡ್ಡ ಟಚ್ ಸ್ಕ್ರೀನ್ ಇನ್ಫೋಟೈನ್‌ ಮೆಂಟ್ ಸಿಸ್ಟಮ್, ಸಿಂಗಲ್ ಪೇನ್ ಸನ್‌ ರೂಫ್, ಎಸಿ ವೆಂಟ್, ಇನ್ಸೈಡ್ ರಿಯರ್ ವ್ಯೂ ಮಿರರ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ಇದರಲ್ಲಿ ಕಾಣಬಹುದು. ಕಂಪನಿಯು ತನ್ನ 5 ಡೋರ್ ಥಾರ್ ನಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ನೀಡುತ್ತಿದೆ.

ಇದರಿಂದಾಗಿ ಅದರ ಮಾರಾಟವು ಉತ್ತಮವಾಗಿರುತ್ತದೆ. ಬಿಡುಗಡೆಗೂ ಮುನ್ನ ಥಾರ್ ನ 5 ಡೋರ್ ಮಾದರಿಯು ಮಾರುಕಟ್ಟೆಯಲ್ಲಿ ಬಾರಿ ಕ್ರೇಜ್ ಹುಟ್ಟಿಸುತ್ತಿದೆ. ಇನ್ನು Mahindra Thar 5-Door ಮಾದರಿಯಲ್ಲಿ ಪನೋರಮಿಕ್ ಸನ್‌ ರೂಫ್ ಅನ್ನು ಒದಗಿಸಲಾಗುವುದಿಲ್ಲ. ಬದಲಿಗೆ ಕಂಪನಿಯು ತನ್ನ ಉನ್ನತ ರೂಪಾಂತರದಲ್ಲಿ ಸಿಂಗಲ್-ಪೇನ್ ಸನ್‌ ರೂಫ್ ಅನ್ನು ನೀಡಬಹುದು. ಇನ್ನು ಮಾರುಕಟ್ಟೆಯಲ್ಲಿ Mahindra Thar 2024 ಸರಿಸುಮಾರು 16 ರಿಂದ 20 ಲಕ್ಷ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

Image Credit: Original Source
Ads By Google
Sujatha Poojari: Sujatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in