Mahindra SUV: ಟೆಸ್ಲಾ ಕಾರಿಗೆ ಪೈಪೋಟಿ ಕೊಡಲು ಬಂತು ಅಗ್ಗದ ಮಹಿಂದ್ರಾ SUV ಕಾರ್, 17 km ಮೈಲೇಜ್.
ಇನ್ನೊಂದು ಅಗ್ಗದ ಕಾರನ್ನ ಮಾರುಕಟ್ಟೆಗೆ ಪರಿಚಯಿಸಲು ಮುಂದಾದ ಮಹಿಂದ್ರಾ.
New Mahindra X: ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಎಸ್ ಯೂವಿಗಳು(SUV) ಲಗ್ಗೆ ಇಡುತ್ತಿವೆ. ಎಸ್ ಯುವಿ ವಿಭಾಗದ ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚಿದೆ. ಇನ್ನು ಮಾರುಕಟ್ಟೆಯಲ್ಲಿ ವಿವಿಧ ಕಂಪನಿಗಳು ಹೊಸ ಹೊಸ ಮಾದರಿಯ ಕಾರ್ ಗಳನ್ನೂ ಬಿಡುಗಡೆ ಮಾಡುತ್ತಿವೆ. ಈಗಾಗಲೇ ವಿಭಿನ್ನ ಮಾದರಿಯ ಕಾರ್ ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ.
ಇನ್ನು ದೇಶದ ಪ್ರತಿಷ್ಠಿತ ಕಾರ್ ತಯಾರಕ ಕಂಪನಿಯಾದ ಮಹಿಂದ್ರಾ (Mahindra) ತನ್ನ ಹೊಸ ಹೊಸ ಮಾದರಿಯ ಕಾರ್ ಗಳನ್ನೂ ವಿಭಿನ್ನ ರೂಪಾಂತರದಲ್ಲಿ ಬಿಡುಗಡೆ ಮಾಡುತ್ತಿದೆ. ಮಹಿಂದ್ರಾ ಕಂಪನಿಯ ಕಾರ್ ಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಜೊತೆಗೆ ಬಜೆಟ್ ಬೆಲೆಯಲ್ಲಿ ಲಭ್ಯವಾಗುತ್ತದೆ. ಇದೀಗ ಕಂಪನಿಯು ಹೊಸ ಮಾದರಿಯ ಎಸ್ ಯುವಿಯನ್ನು ಪರಿಚಯಿಸಿದೆ.
ನೂತನ ಮಾದರಿಯ ಮಹಿಂದ್ರಾ X (Mahindra X)
ಎಸ್ ಯೂವಿಗಳಿಗೆ ಮಹಿಂದ್ರಾ ಕಂಪನಿ ಹೆಚ್ಚು ಜನಪ್ರಿಯತೆ ಪಡೆದಿದೆ. ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಒಂದಕ್ಕಿಂತ ಹೆಚ್ಚು SUV ಗಳನ್ನು ಬಿಡುಗಡೆ ಮಾಡಿದೆ. ಈ ಹಿಂದೆ ಕಂಪನಿಯು ಮೊದಲ ಎಲೆಕ್ಟ್ರಿಕ್ SUV XUV 400 ಎಸ್ ಯುವಿಯನ್ನು ಬಿಡುಗಡೆ ಮಾಡಿತ್ತು. ಈ ಮಾದರಿಗಿಂತ ಸಂಪೂರ್ಣ ಭಿನ್ನ ಮಾದರಿಯಲ್ಲಿ ನೂತನ ಮಾದರಿಯ ಮಹಿಂದ್ರಾ X ಅನ್ನು ತಯಾರು ಮಾಡಲಾಗುತ್ತಿದೆ ಎಂದು ಕಂಪನಿಯು ಹೇಳಿಕೊಂಡಿದೆ.
ಮಹಿಂದ್ರಾ X ಫೀಚರ್
ಇನ್ನು ಮಹಿಂದ್ರಾ XUV 700 ಮಾದರಿಯ ಕಾರ್ ನ ವಿನ್ಯಾಸದಲ್ಲಿ ನೂತನ ಮಹಿಂದ್ರಾ X ಬರಲಿದೆ. ಈ ಎಸ್ ಯುವುಗಿಂತ ಹೆಚ್ಚಿನ ಸುಧಾರಿತ ಫೀಚರ್ ಅನ್ನು ಮಹಿಂದ್ರಾ X ನಲ್ಲಿ ಅಳವಡಿಸಲಾಗಿದೆ. ನೂತನ ಮಾದರಿಯ ಮಹಿಂದ್ರಾ X 7 ಆಸನಗಳ ಎಸ್ ಯುವಿ ಆಗಿದೆ. ಹೊಸ ಮಹೀಂದ್ರಾ ಎಕ್ಸ್ 2197 ಸಿಸಿ ಎಂಜಿನ್ ಅನ್ನು ಪಡೆಯಲಿದೆ. ಇದು ಎರಡು ಡ್ರೈವಿಂಗ್ ಮೋಡ್ ಗಳನ್ನು ಪಡೆದಿದ್ದು, ಇದು ದ್ವಿಚಕ್ರ ಮತ್ತು ನಾಲ್ಕು ಚಕ್ರ ಡ್ರೈವ್ ಆಯ್ಕೆಯೊಂದಿಗೆ ಬರಬಹುದು.
ಮಹಿಂದ್ರಾ X ಮೈಲೇಜ್
ನೂತನ ಮಾದರಿಯ ಮಹಿಂದ್ರಾ X ನಲ್ಲಿ 70 ಲೀಟರ್ ಇಂಧನ ಟ್ಯಾಂಕ್ ನೀಡಲಿದ್ದು ಸುಲಭವಾಗಿ ದೂರದ ಪ್ರಯಾಣ ಮಾಡಬಹುದಾಗಿದೆ. ಈ SUV ಆಫ್ ರೋಡಿಂಗ್ SUV ಆಗಿರುತ್ತದೆ, ಆದ್ದರಿಂದ ಅದರ ಶಕ್ತಿಯು ತುಂಬಾ ಪ್ರಬಲವಾಗಿರುತ್ತದೆ. ಇದರಿಂದ ಕಡಿಮೆ ಮೈಲೇಜ್ ಸಿಗಲಿದೆ.
ಈ SUV ನಿಂದ ನೀವು 14 ರಿಂದ 15 kmpl ಮೈಲೇಜ್ ಪಡೆಯುತ್ತೀರಿ. ರೈಡಿಂಗ್ ಮೋಡ್, ಎಂಜಿನ್ ಸ್ಟಾರ್ಟ್ ಸ್ಟಾಪ್ ಬಟನ್, ಪನೋರಮಿಕ್ ಹೊಂದಿದೆ. ಇನ್ನು ಮಹಿಂದ್ರಾ ನ್ಯೂ ಎಕ್ಸ್ ಮಾರುಕಟ್ಟೆಯಲ್ಲಿ ಸುಮಾರು 19 ರಿಂದ 25 ಲಕ್ಷ ಬೆಲೆ ಇರಬಹುದು ಎಂದು ಅಂದಾಜಿಸಲಾಗಿದೆ. ಟಾಟಾ ಸಫಾರಿ ಮತ್ತು ಹ್ಯಾರಿಯರ್ ಎಸ್ ಯೂವಿಗಳಿಗೆ ಮಹಿಂದ್ರಾ ನ್ಯೂ ಪೈಪೋಟಿ ನೀಡಲಿದೆ.