Marriage Rules: ಮದುವೆಯಾಗುವ ಎಲ್ಲಾ ಪುರುಷರಿಗೆ ಕೇಂದ್ರದಿಂದ ಹೊಸ ನಿಯಮ, ಈ ತಪ್ಪು ಮಾಡಿದರೆ 10 ವರ್ಷ ಜೈಲು.
ಈ ಸುಳ್ಳು ಹೇಳಿ ಮದುವೆಯಾದರೆ ಹತ್ತು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.
New Marriage Rules In India: ಮದುವೆ ಅನ್ನುವುದು ಜನರ ಜೀವನದಲ್ಲಿ ನಡೆವ ಅಮೂಲ್ಯವಾದ ಕ್ಷಣ ಎಂದು ಹೇಳಬಹುದು. ಹಿಂದಿನ ಕಾಲದಲ್ಲಿ ತಂದೆ ತಾಯಿ ತೋರಿಸಿದ ಹುಡುಗ ಹುಡುಗಿಯನ್ನ ಮಕ್ಕಳು ಮದುವೆ ಮಾಗುತ್ತಿದ್ದರು, ಆದರೆ ಈಗಿನ ಕಾಲದಲ್ಲಿ ತನ್ನ ಸಂಗತಿಯನ್ನ ತಾವೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಹೌದು ದೇಶದಲ್ಲಿ ಮದುವೆಗೆ ಸಂಬಂಧಿಸಿದಂತೆ ಅನೇಕ ಪ್ರಕರಣಗಳು ದಾಖಲಾಗಿರುವುದನ್ನ ನಾವು ಗಮನಿಸಬಹುದು.
ಸದ್ಯ ದೇಶದಲ್ಲಿ ಮದುವೆಗೆ ಸಂಬಂಧಿಸಿದಂತೆ ಹಲವು ತಕರಾರುಗಳು ಮತ್ತು ವಂಚನೆಗಳ ಪ್ರಕರಣ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈಗ ಮಹತ್ವದ ತೀರ್ಮಾನವನ್ನ ಕೈಗೊಂಡಿದ್ದು ಈ ನಿಯಮ ಸಾಕಷ್ಟು ಹೆಣ್ಣು ಮಕ್ಕಳಿಗೆ ವರದಾನವಾಗಲಿದೆ ಎಂದು ಹೇಳಬಹುದು.
ಮದುವೆಗೆ ಸಂಬಂಧಿಸಿದಂತೆ ಹೊಸ ಮಸೂದೆ ಜಾರಿಗೆ
ಹೌದು ಇತ್ತೀಚಿನ ದಿನಗಳಲ್ಲಿ ಯುವಕರು ಯುವತಿಯರನ್ನ ವಂಚಿಸಿ ಮದುವೆ ಆಗುತ್ತಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಲೋಕ ಸಭೆಯಲ್ಲಿ ಮಹತ್ವದ ಮಸೂದೆಯನ್ನ ಜಾರಿಗೆ ತರಲಾಗಿದೆ. ಸದ್ಯ ಈ ಮಸೂದೆ ಎಲ್ಲಾ ಯುವಕರಿಗೆ ಅನ್ವಯ ಆಗಲಿದೆ ಕೇಂದ್ರ ಸರ್ಕಾರ ತನ್ನ ಪ್ರಸ್ತಾವನೆಯಲ್ಲಿ ಕೇಂದ್ರ ಸರ್ಕಾರ ತಿಳಿಸಿದೆ.
ವಂಚಿಸಿ ಮದುವೆಗುವ ಯುವಕರಿಗೆ ಹತ್ತು ವರ್ಷ ಜೈಲು ಶಿಕ್ಷೆ
ಯುವಕ ತನ್ನ ಅಸಲಿ ಗುರುತನ್ನ ಮರೆಮಾಚಿ ಅಥವಾ ತನ್ನ ಕೆಲಸದ ಬಗ್ಗೆ ಅಥವಾ ತಮ್ಮ ಕುಟುಂಬದ ಬಗ್ಗೆ ಸುಳ್ಳು ಮಾಹಿತಿಯನ್ನ ನೀಡಿ ಯುವತಿಗೆ ವಂಚಿಸಿ ಆಕೆಯನ್ನ ಮದುವೆ ಮಾಡಿಕೊಂಡರೆ ಆತನಿಗೆ ಹತ್ತು ವರ್ಷಗಳ ಕಾಲ ಜೈಲು ಶಿಕ್ಷೆಯನ್ನ ವಿಧಿಸುವ ಕಠಿಣ ನಿಯಮವನ್ನ ಜಾರಿಗೆ ತಂದಿದೆ.
ದೇಶದಲ್ಲಿ ಮಹಿಳೆಯರಿಗೆ ಆಗುತ್ತಿರುವ ಮೋಸ ಮತ್ತು ವಂಚನೆಯನ್ನ ಲೋಕ ಸಭೆಯಲ್ಲಿ ಎತ್ತಿ ಹಿಡಿಯಲಾಗಿದು ಇನ್ನುಮುಂದೆ ಮಹಿಳೆಯರು ಮದುವೆಯ ವಿಷಯದಲ್ಲಿ ವಂಚನೆಗೆ ಒಳಗಾಗಬಾರದು ಅನ್ನುವ ಉದ್ದೇಶದಿಂದ ಈ ಮಸೂದೆಯನ್ನು ಲೋಕ ಸಭೆಯಲ್ಲಿ ಅಂಗೀಕಾರ ಮಾಡಲಾಗಿದೆ.
ಸಂಬಳ, ಗುರುತು ಮರೆಮಾಚುವುದು, ಕುಟುಂಬದ ಸುಳ್ಳು ಮಾಹಿತಿ, ಸುಳ್ಳು ಮಾಹಿತಿ ನೀಡಿ ದೈಹಿಕ ಸಂಪರ್ಕ ಮಾಡಿ ಯುವತಿಗೆ ವಂಚನೆಯನ್ನ ಮಾಡುವ ಪುರುಷರಿಗೆ ಹತ್ತು ವರ್ಷ ಕಠಿಣ ಜೈಲು ಶಿಕ್ಷೆಯನ್ನ ವಿಧಿಸಲು ಲೋಕ ಸಭೆಯಲ್ಲಿ ಮಸೂದೆಯನ್ನ ಮಂಡಿಸಲಾಗಿದೆ.