Maruti: ಟಾಟಾ ಕಾರಿಗೆ ಠಕ್ಕರ್ ಕೊಟ್ಟ ಮಾರುತಿ, 40 Km ಮೈಲೇಜ್ ಕೊಡುವ ಕಾರ್ ಕಡಿಮೆ ಬೆಲೆಗೆ ಲಾಂಚ್.

ಮಾರುತಿ ಸ್ವಿಫ್ಟ್ ನ ಹೈಬ್ರಿಡ್ ಮಾದರಿ ಶೀಘ್ರದಲ್ಲೇ ಬಿಡುಗಡೆ.

New Maruti Swift Hybrid: ದೇಶಿಯ ಮಾರುಕಟ್ಟೆಯಲ್ಲಿ ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಹೊಸ ಹೊಸ ಕಾರ್ ಗಳು ಬಿಡುಗಡೆಗೊಳ್ಳುತ್ತಿರುತ್ತವೆ. ಕಡಿಮೆ ಬೆಲೆಯಲ್ಲಿ ಹೆಚ್ಚಿನ ಮೈಲೇಜ್ ನೀಡುವ ಕಾರ್ ಗಳ ಕಂಪೆನಿಗಳಲ್ಲಿ ಮಾರುತಿ ಸುಜುಕಿ (Maruti Suzuki) ಮೊದಲನೇ ಸ್ಥಾನವನ್ನು ಪಡೆದಿದೆ. ಇದೀಗ ಮಾರುತಿ ಕಂಪನಿ ತನ್ನ ಸ್ವಿಫ್ಟ್ (Swift)ಕಾರ್ ಅನ್ನು ಹೈಬ್ರಿಡ್ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡಲು ಮುಂದಾಗಿದೆ ಎಂದು ವರದಿಗಳ ಮೂಲಕ ತಿಳಿದುಬಂದಿದೆ.

New maruti swift hybrid car price
Image Credit: Indianauto

ಹೊಸ ಮಾರುತಿ ಸ್ವಿಫ್ಟ್ ಹೈಬ್ರಿಡ್
ಶೀಘ್ರದಲ್ಲೆ ಮಾರುತಿ ಸ್ವಿಫ್ಟ್ ನ ಹೈಬ್ರಿಡ್ ಮಾದರಿಯನ್ನು ಬಿಡುಗಡೆ ಮಾಡಲಿದೆ. ಮಾರುತಿ ಸ್ವಿಫ್ಟ್ ಹೈಬ್ರಿಡ್ (Maruti Swift Hybrid)ಹೆಚ್ಚು ಆಕರ್ಷಣೀಯ ನೋಟವನ್ನು ಹೊಂದಿರುತ್ತದೆ. ಪ್ರಸ್ತುತ ಇರುವ ಕಾರ್ ಗಿಂತ ಸಾಕಷ್ಟು ವಿಭಿನ್ನವಾಗಿರುತ್ತದೆ ಎಂದು ಹೇಳಲಾಗುತ್ತಿದೆ. ಹಾಗೆ ಇದರ ಲುಕ್ ನಲ್ಲಿ ಬದಲಾವಣೆಗಳನ್ನು ಕಾಣಬಹುದಾಗಿದೆ.

ಹೊಸ ಮಾರುತಿ ಸ್ವಿಫ್ಟ್ ಹೈಬ್ರಿಡ್ ಎಂಜಿನ್ ಸಾಮರ್ಥ್ಯ
ಮಾರುತಿ ಸ್ವಿಫ್ಟ್ ಹೈಬ್ರಿಡ್ ಪೆಟ್ರೋಲ್ ಇಂಜಿನ್ ಜೊತೆಗೆ CNG ಅನ್ನು ಸಹ ಕಾಣಬಹುದಾಗಿದೆ. ಇದು 2024 ಸೌಮ್ಯ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 1 .4LK14D ಟರ್ಬೊ ಪೆಟ್ರೋಲ್ ಎಂಜಿನ್ ಪಡೆಯುವ ನಿರೀಕ್ಷೆಯಿದೆ. ಹೊಸ ಮಾರುತಿ ಸ್ವಿಫ್ಟ್ ಹೈಬ್ರಿಡ್ ಲೀಟರ್ ಗೆ ಸುಮಾರು 35 -40 ಕಿಲೋಮೀಟರ್ ಮೈಲೇಜ್ ಪಡೆಯುತ್ತದೆ ಎನ್ನಲಾಗಿದೆ. ಯಾವುದೇ ಕಂಪನಿಯು ಇಷ್ಟು ಮೈಲೇಜ್ ನೀಡುವುದಿಲ್ಲ ಎಂದು ಹೇಳಿಕೊಂಡಿದೆ.

ಹಾಗೆ ಮಾರುತಿ ಸ್ವಿಫ್ಟ್ ಹೈಬ್ರಿಡ್ ನಲ್ಲಿ ಅನೇಕ ಗುಣಮಟ್ಟದ ವೈಶಿಷ್ಟ್ಯಗಳನ್ನೂ ನೋಡಬಹುದಾಗಿದೆ. ವೈರಲೆಸ್ಸ್ ಸ್ಮಾರ್ಟ್ ಫೋನ್ ಸಂಪರ್ಕ, ಸುಜುಕಿ ವಾಯ್ಸ್ ಕಂಟ್ರೋಲ್, ಮತ್ತು ಓವರ್-ದಿ-ಏರ್ ಅಪ್ಡೇಟ್ ಗಳೊಂದಿಗೆ ನೋಡಬಹುದಾಗಿದೆ.

New Maruti Swift Hybrid Engine Power
Image Credit: Hindustantimes

ಹೊಸ ಮಾರುತಿ ಸ್ವಿಫ್ಟ್ ಹೈಬ್ರಿಡ್ ಬೆಲೆ
ಈ ಕಾರ್ ನ ಮೊದಲ ಆವೃತ್ತಿಗೆ ಹೋಲಿಸಿದರೆ ದುಬಾರಿಯಾಗಿದೆ. ಹೈಬ್ರಿಡ್ ಮತ್ತು ಹೈಬ್ರಿಡ್ ಅಲ್ಲದ ಕಾರ್ ಗಳಿಗೆ ಸುಮಾರು 1 .50 ಲಕ್ಷದಿಂದ 2 ಲಕ್ಷದವರೆಗೆ ವ್ಯತ್ಯಾಸವಿರುತ್ತದೆ. ಹೊಸ ಮಾರುತಿ ಸ್ವಿಫ್ಟ್ ಹೈಬ್ರಿಡ್ ಬಿಡುಗಡೆ ಬಗ್ಗೆ ಯಾವುದೇ ನಿರ್ಧಾರವನ್ನು ಕಂಪನಿ ಕೈಗೊಂಡಿಲ್ಲ.

Join Nadunudi News WhatsApp Group

Join Nadunudi News WhatsApp Group