Bank Accounts: ಖಾಸಗಿ ಬ್ಯಾಂಕ್ ನಲ್ಲಿ ಹಣ ಇಟ್ಟವರಿಗೆ ಹೊಸ ಸೂಚನೆ
ಬ್ಯಾಂಕ್ ನಲ್ಲಿ ಬಡ್ಡಿ ಹೆಚ್ಚಿದೆ ಎಂದು ಹೂಡಿಕೆ ಮಾಡುವ ಮೊದಲು ಆ ಬ್ಯಾಂಕ್ ಬಗ್ಗೆ ಆ ಬ್ಯಾಂಕ್(Bank) ಭದ್ರವಾಗಿದೆಯೇ ಎಂದು ತಿಳಿದುಕೊಳ್ಳಬೇಕಾಗುತ್ತದೆ.
Bank Accounts Rules; ಜನರು ತಾವು ಕಷ್ಟ ಪಟ್ಟು ಸಂಪಾದಿಸಿದ ಹಣವನ್ನು ಬ್ಯಾಂಕ್ ನಲ್ಲಿ ಇಡುತ್ತಾರೆ. ಬ್ಯಾಂಕ್ ನಲ್ಲಿನ ಅವರ ಹಣ ಭದ್ರವಾಗಿರುತ್ತದೆ ಎಂದು ಅವರು ಅಂದುಕೊಳ್ಳುತ್ತಾರೆ.ಆದರೆ ನಮ್ಮ ನಡುವೆ ಅನೇಕ ಖಾಸಗಿ ಬ್ಯಾಂಕ್ ಗಳು ತಲೆ ಎತ್ತಿ ನಿಂತಿವೆ. ಹಾಗಾಗಿ ಜನರು ಅಧಿಕ ಬಡ್ಡಿಯ ಆಸೆಯಿಂದ ಇಂಥ ಬ್ಯಾಂಕ್ ಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗುತ್ತಾರೆ.ಇಂತಹ ಅದೆಷ್ಟೋ ಬ್ಯಾಂಕ್ ಗಳು ಈಗಾಗಾಲೇ ದಿವಾಳಿ ಆಗಿದೆ. ಇನ್ನು ಕೆಲವು ನಷ್ಟ ದಲ್ಲಿ ನಡೆಯುತ್ತಿದೆ.ಅದಕ್ಕಾಗಿ ಗ್ರಾಹಕರು ಎಚ್ಚರ ವಹಿಸುವುದು ಅತೀ ಅಗತ್ಯ.
ಬ್ಯಾಂಕ್ ನಲ್ಲಿ ಬಡ್ಡಿ ಹೆಚ್ಚಿದೆ ಎಂದು ಹೂಡಿಕೆ ಮಾಡುವ ಮೊದಲು ಆ ಬ್ಯಾಂಕ್ ಬಗ್ಗೆ ಆ ಬ್ಯಾಂಕ್(Bank) ಭದ್ರವಾಗಿದೆಯೇ ಎಂದು ತಿಳಿದುಕೊಳ್ಳಬೇಕಾಗುತ್ತದೆ. ದೇಶದ ಆರ್ಥಿಕ ವ್ಯವಹಾರಗಳ ಭದ್ರಬುನಾದಿ ಎಂದರೆ ಅದು ಬ್ಯಾಂಕುಗಳು. ದೇಶದೆಲ್ಲೆಡೆ ಇರು ಜನವ ಬ್ಯಾಂಕುಗಳು RBI ನ ನೀತಿ ನಿರ್ಬಂಧನೆಗೆ ಸರಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದು ಗ್ರಾಹಕರ ಆರ್ಥಿಕ ಚಟುವಟಿಕೆ ಕಾಯ್ದುಕೊಂಡು ದೇಶದ ಆರ್ಥಿಕ ವ್ಯವಸ್ಥೆ ಉನ್ನತ ಆಗಿರಬೇಕೆಂಬ ಕಾರಣಕ್ಕೆ ಉತ್ತಮ ಆಡಳಿತ ವ್ಯವಸ್ಥೆಯನ್ನೇ ನೀಡಿರುತ್ತಾರೆ ಈ ಮೂಲಕ ಗ್ರಾಹಕರ ಹಿತರಕ್ಷಣೆ ಸಹ ಕಾಯ್ದುಕೊಳ್ಳಲಾಗುತ್ತದೆ.
ಬ್ಯಾಂಕ್ ವ್ಯವಹಾರಗಳ ಸಾಲಿನಲ್ಲಿ ಅಧಿಕ ಮಾನ್ಯತೆ ಪಡೆದ ಬಹುತೇಕ ಬ್ಯಾಂಕ್ ಗಳಲ್ಲಿ ಖಾಸಗಿ ಪಾಲು ಕೂಡಾ ಅಷ್ಟೇ ಇದೆ. ಹಾಗಾದರೆ ದೇಶದ ಆರ್ಥಿಕ ವ್ಯವಹಾರದಲ್ಲಿ ಉತ್ತಮ ಸಾಧನೆ ಮಾಡಿದ್ದ ಖಾಸಗಿ ಬ್ಯಾಂಕಿನ ಸಾಲಿನಲ್ಲಿ ಈ ಕೆಳಗಿನವು ದೇಶದಲ್ಲೆ ನಂಬಲಾರ್ಹವಾಗಿದೆ.
ಮೊದಲನೆಯಾದಾಗಿ ಹೆಚ್ ಡಿ ಎಫ್ ಸಿ
ಇದು ಭಾರತದ ಅತ್ಯುತ್ತಮ ಖಾಸಗಿ ಬ್ಯಾಂಕಿನಲ್ಲಿ ಒಂದಾಗಿದ್ದು ಡಿಜಿಟಲ್ ಹಾಗೂ ಬ್ಯಾಂಕಿಂಗ್ ಸೇವೆಯನ್ನು ಉತ್ತಮ ಮಟ್ಟದಲ್ಲಿ ನೀಡುತ್ತಿದೆ. 6342ಬ್ರ್ಯಾಂಚ್ ಹಾಗೂ 18,130ATM ಅನ್ನು ಹೊಂದಿದೆ. 98,061ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 105,161ಕೋಟಿ ರೂ., ನಿವ್ವಳ ಆದಾಯ 38,151ಕೋಟಿ ರೂ. ವ್ಯವಹಾರ ಇದೆ. ಶಿಕ್ಷಣ, ವಿಮೆ,ಮ್ಯೂಚುವಲ್ ಫಂಡ್, ಇತರ ಸಾಲ ಹಾಗೂ ಆನ್ಲೈನ್ ಬ್ಯಾಂಕಿಂಗ್ ಸೇವೆ ಸಹ ಇದೆ.
ಆಕ್ಸಿಸ್ ಬ್ಯಾಂಕ್
ದೇಶಿಯ ಮತ್ತು ಅಂತರಾಷ್ಟ್ರೀಯ ಬ್ಯಾಂಕ್ ಸೇವೆ ನೀಡಲು ಈ ವ್ಯವಹಾರ ನೆಲೆಯಲ್ಲಿ ಉತ್ತಮವಾಗಿದೆ. ಕ್ರೆಡಿಟ್ ಕಾರ್ಡ್, ಸಾಲಗಳು, ಉಳಿತಾಯಗಳು, ಹೂಡಿಕೆ ಅವಕಾಶ ಇತ್ಯಾದಿ ಇರುವುದು. 4,758ಬ್ರ್ಯಾಂಚ್ ಹಾಗೂ 10,990ATM ಅನ್ನು ಹೊಂದಿದೆ. 85,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 56,044ಕೋಟಿ ರೂ., ನಿವ್ವಳ ಆದಾಯ 14, 162 ಕೋಟಿ ರೂ. ವ್ಯವಹಾರ ಇದೆ. ಶಿಕ್ಷಣ, ತೆರಿಗೆ ಪರಿಹಾರ, ಕೃಷಿ ಮತ್ತು ಗ್ರಾಮೀಣ ಹಣಕಾಸು, ಆನ್ಲೈನ್ ಬ್ಯಾಂಕಿಂಗ್ ಸೇವೆ ಸಹ ಇದೆ.
ಐಸಿಐಸಿ ಬ್ಯಾಂಕ್
ಅತ್ಯಾಧುನಿಕ ಡಿಜಿಟಲ್ ಸೌಲಭ್ಯ ಈ ಬ್ಯಾಂಕಿನಲ್ಲಿ ಇದೆ. ಚಿಲ್ಲರೆ, ಕಾಪೋರೇಟ್ ಬ್ಯಾಂಕಿಂಗ್ ಹಾಗೂ ಸಾಲ ವ್ಯವಹಾರದಲ್ಲಿ ಹೆಸರುವಾಸಿಯಾಗಿದೆ. 5275ಬ್ರ್ಯಾಂಚ್ ಹಾಗೂ 15,589ATM ಅನ್ನು ಹೊಂದಿದೆ. 85,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 84,353ಕೋಟಿ ರೂ., ನಿವ್ವಳ ಆದಾಯ 25,783ಕೋಟಿ ರೂ. ವ್ಯವಹಾರ ಇದೆ. ಉಳಿತಾಯ , ಚಾಲ್ತಿ ಖಾತೆ ತೆರೆಯುವುದು, ಫಾಸ್ಟ್ಯಾಗ್, ಠೇವಣಿ ಬ್ಯಾಂಕಿಂಗ್ ಸೇವೆ ಸಹ ಇದೆ.
Indusind Bank:
ದೇಶದಲ್ಲಿ ಸಣ್ಣ ವ್ಯಾಪಾರ ವ್ಯವಹಾರ ಉತ್ತೇಜಿಸುವ ಪ್ರಮುಖ ಬ್ಯಾಂಕ್ ಸಾಲಿನಲ್ಲಿ ಇದು ಒಂದು. 2,015 ಬ್ರ್ಯಾಂಚ್ ಹಾಗೂ 2,886ATM ಅನ್ನು ಹೊಂದಿದೆ. 25,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 24,154ಕೋಟಿ ರೂ., ನಿವ್ವಳ ಆದಾಯ ವ್ಯವಹಾರ ಇದೆ. ಶಿಕ್ಷಣ, ತೆರಿಗೆ ಪರಿಹಾರ, ಕೃಷಿ ಮತ್ತು ಗ್ರಾಮೀಣ ಹಣಕಾಸು, ಆನ್ಲೈನ್ ಬ್ಯಾಂಕಿಂಗ್ ಸೇವೆ ಸಹ ಇದೆ.
ಕೋಟಕ್ ಮಹೀಂದ್ರಾ ಬ್ಯಾಂಕ್
ದೇಶಿಯ ಮತ್ತು ಅಂತಾರಾಷ್ಟ್ರೀಯ ವ್ಯವಹಾರದಲ್ಲಿ ಇದೊಂದು ಅತ್ಯುತ್ತಮ ಬ್ಯಾಂಕ್ ಆಗಿದೆ. ಕ್ರೆಡಿಟ್ ಕಾರ್ಡ್, ಸಾಲ ಮತ್ತು ಉಳಿತಾಯ ಖಾತೆ ವಿಚಾರದಿಂದ ಈ ಬ್ಯಾಂಕ್ ಮಾನ್ಯತೆ ಪಡೆದಿದೆ. 1,600 ಬ್ರ್ಯಾಂಚ್ ಹಾಗೂ 2,519 ATM ಅನ್ನು ಹೊಂದಿದೆ. 71,000+ ಉದ್ಯೋಗಸ್ಥರು ಈ ಬ್ಯಾಂಕಿನಲ್ಲಿ ಇದ್ದಾರೆ. ಒಟ್ಟು ರಾಷ್ಟ್ರೀಯ ಆದಾಯ 31,346ಕೋಟಿ ರೂ., ನಿವ್ವಳ ಆದಾಯ ವ್ಯವಹಾರ ಇದೆ.
ಇನ್ನು ಮುಂದೆ ನೀವು ಖಾಸಗಿ ಬ್ಯಾಂಕ್ ನಲ್ಲಿ ಹೂಡಿಕೆ ಮಾಡಬೇಕಾಗದರೆ ಈ ಬ್ಯಾಂಕ್ ಗಳ್ಲಲಿ ನಿರ್ಭೀತಿಯಿಂದ ಹೂಡಿಕೆ ಮಾಡಬಹುದಾಗಿದೆ.