Ads By Google

Ola EV Bike: 280 Km ಮೈಲೇಜ್ ಮತ್ತು ಕಡಿಮೆ ಬೆಲೆ, ಲಾಂಚ್ ಆಯಿತು ಅಗ್ಗದ ಓಲಾ ಎಲೆಕ್ಟ್ರಿಕ್ ಬೈಕ್

ola ev bike launched in india

Image Credit: Original Source

Ads By Google

New Ola EV Bike Launch: ಪ್ರಸ್ತುತ ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಹೆಚ್ಚಾಗಿ Electric scooter ಮತ್ತು Bike ಗಳಿಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು. ದೇಶದ ವಿವಿಧ ಜನಪ್ರಿಯ ಕಂಪನಿಗಳು ಹಲವು ಮಾದರಿಯ Electric Bike ಗಳನ್ನೂ ಲಾಂಚ್ ಮಾಡುತ್ತಿದೆ. ಸದ್ಯ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ Ola ಕಂಪನಿ ಇದೀಗ ತನ್ನ ಮೊತ್ತ ಮೊದಲ Electric Bike ಅನ್ನು ಲಾಂಚ್ ಮಾಡಲು ಮುಂದಾಗಿದೆ.

ಮಾರುಕಟ್ಟೆಯಲ್ಲಿ ಈವರೆಗೆ ಒಳ ಕಂಪನಿ ಸ್ಕೂಟರ್ ಗಳನ್ನೂ ಲಾಂಚ್ ಮಾಡುತ್ತಿದ್ದು, ಇದೀಗ ಬೈಕ್ ವಿಭಾಗದಲ್ಲಿ ಕೂಡ ಸಂಚಲನ ಸೃಷ್ಟಿಸಲು ತಯಾರಿ ನಡೆಸುತ್ತಿದೆ. ಮುಂಬರಲಿರುವ Ola Electric bike ನ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಈ ಲೇಖನವನ್ನು ಸಂಪೂರ್ಣವಾಗಿ ಓದಿ.

Image Credit: India Today

ಮೊದಲ EV Bike ಲಾಂಚ್ ಮಾಡಲು ಮುಂದಾದ Ola
ದೇಶದ ಅತಿ ದೊಡ್ಡ ಎಲೆಕ್ಟ್ರಿಕ್ ಸ್ಕೂಟರ್ ಉತ್ಪಾದನಾ ಕಂಪನಿಯಾಗಿ ಗುರುತಿಸಿಕೊಂಡಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಇದೀಗ ತನ್ನ ಮೊದಲ ಇವಿ ಬೈಕ್ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಹೊಸ ಇವಿ ಬೈಕ್ ಮಾದರಿಯೊಂದಿಗೆ ಭಾರಿ ಬೇಡಿಕೆಯನ್ನು ಪಡೆಯುವ ನಿರೀಕ್ಷೆಯಲ್ಲಿದೆ. ಇದಕ್ಕಾಗಿ ಅಂತಿಮ ಹಂತದ ಸಿದ್ಧತೆ ನಡೆಯುತ್ತಿದ್ದು, ಬರುವ ದಸರಾ ಅಥವಾ ದೀಪಾವಳಿ ವೇಳೆಗೆ ಮಾರುಕಟ್ಟೆ ಪ್ರವೇಶಿಸುವುದು ಬಹುತೇಕ ಖಚಿತವಾಗಿದೆ.

ಭರ್ಜರಿ ಮೈಲೇಜ್ ನೀಡಲಿದೆ ನೂತನ EV ಬೈಕ್
ಹಲವಾರು ವೈಶಿಷ್ಟ್ಯಗಳೊಂದಿಗೆ ಮಾರುಕಟ್ಟೆಗೆ ಪ್ರವೇಶಿಸುತ್ತಿರುವ ಹೊಸ ಕಮ್ಯೂಟ್ ಎಲೆಕ್ಟ್ರಿಕ್ ಬೈಕ್ ಕುರಿತು ಕಂಪನಿಯ ಸಿಇಒ ಭವೇಶ್ ಅಗರ್ವಾಲ್ ಟೀಸರ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಕಂಪನಿಯು 150 ಸಿಸಿ ವಿಭಾಗದ ಬೈಕ್ ಮಾದರಿಗಳನ್ನು ಗುರಿಯಾಗಿಸಿಕೊಂಡು ಹೊಸ ಇವಿ ಮಾದರಿಯನ್ನು ಬಿಡುಗಡೆ ಮಾಡುತ್ತಿದ್ದು, ಮೈಲೇಜ್ ಹಾಗೂ ಬೆಲೆಯ ದೃಷ್ಟಿಯಿಂದಲೂ ಆಕರ್ಷಕವಾಗಿರಲಿದೆ.

ಹೊಸ EV ಬೈಕ್ ಮಾದರಿಯು ಸ್ಪೋರ್ಟಿ ವಿನ್ಯಾಸದೊಂದಿಗೆ ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಸಸ್ಪೆನ್ಷನ್‌ ಮತ್ತು ಹಿಂಭಾಗದಲ್ಲಿ ಮೊನೊ ಶಾಕ್ ಸಸ್ಪೆನ್ಷನ್‌ ನೊಂದಿಗೆ ಬರುತ್ತದೆ. ಅಲ್ಲದೆ, ಹೊಸ ಬೈಕ್ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಎಲ್ಲಾ ಎಲ್ಇಡಿ ಲೈಟಿಂಗ್ಸ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.

Image Credit: olaelectric

Ola ಹೊಸ EV ಬೈಕ್ 4 KWh ಅಥವಾ ಅದಕ್ಕಿಂತ ಹೆಚ್ಚಿನ ಮೈಲೇಜ್‌ ಗಾಗಿ 6 ​​KWh ಬ್ಯಾಟರಿ ಪ್ಯಾಕ್‌ ಗಳ ಆಯ್ಕೆಯನ್ನು ನೀಡುತ್ತದೆ. S1 ಸರಣಿಯ ಸ್ಕೂಟರ್‌ ನಂತೆ, ಇದು ಟಾಪ್-ಎಂಡ್ ಮಾಡೆಲ್‌ ಗೆ ಪ್ರತಿ ಚಾರ್ಜ್‌ಗೆ 180 ಕಿಮೀ ನಿಂದ 280 ಕಿಮೀವರೆಗೆ ಮೈಲೇಜ್ ಅನ್ನು ನೀಡುತ್ತದೆ. ಹಲವು ರೂಪಾಂತರಗಳನ್ನು ಹೊಂದಿದ್ದು, ಬೆಲೆಗೆ ಅನುಗುಣವಾಗಿ ವೈಶಿಷ್ಟ್ಯಗಳು ಲಭ್ಯವಿರುತ್ತವೆ. ಹೊಸ Ola EV ಬೈಕ್ ಮಾದರಿ, ಎಕ್ಸ್ ಶೋ ರೂಂ ದೆಹಲಿಯ ಬೆಲೆ ರೂ. 1.60 ಲಕ್ಷದಿಂದ ರೂ. 2 ಲಕ್ಷ ಆಗಿದೆ. ಇನ್ನು 150 ಸಿಸಿ ಮತ್ತು 160 ಸಿಸಿ ವಿಭಾಗದಲ್ಲಿ ಈ ಬೈಕ್ ಹೆಚ್ಚಿನ ಕ್ರೇಜ್ ಸೃಷ್ಟಿಸಲಿದೆ.

Image Credit: News 18
Ads By Google
Nagarathna Santhosh: Nagarathna Santhosh has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in