Passport Rule: ಹೊಸ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುವವರಿಗೆ ಇಂದಿನಿಂದ ಹೊಸ ನಿಯಮ, ಕಠಿಣ ನಿಯಮ.
ಹೊಸದಾಗಿ ಪಾಸ್ಪೋರ್ಟ್ ಮಾಡುವವರಿಗೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.
New Rule For Passport Application: ಇತ್ತೀಚೆಗಷ್ಟೇ ಹಲವು ನಿಯಮಗಳು ಬದಲಾಗುತ್ತಿವೆ. ಪ್ರತಿ ತಿಂಗಳ ಆರಂಭದಲ್ಲಿ ಅನೇಕ ಹೊಸ ಹೊಸ ನಿಯಮಗಳು ಜಾರಿಯಾಗುತ್ತಿದೆ. ಬದಲಾಗಿರುವ ನಿಯಮಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳುವುದು ಉತ್ತಮ. ಸಾಮಾನ್ಯವಾಗಿ ವಿದೇಶ ಪ್ರಯಾಣ ಮಾಡುವಾಗ ಪಾಸ್ ಪೋರ್ಟ್ (Passport) ಅಗತ್ಯವಾಗಿದೆ.
ಪಾಸ್ ಪೋರ್ಟ್ ಇಲ್ಲದೆ ವಿದೇಶ ಪ್ರಯಾಣ ಸಾಧ್ಯವಿಲ್ಲ. ಹೀಗಾಗಿ ವಿದೇಶ ಪ್ರಯಾಣ ಮಾಡುವವರು ಪಾಸ್ ಪೋರ್ಟ್ ಅನ್ನು ಹೊಂದಿರುತ್ತಾರೆ. ಇದೀಗ ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ಜಾರಿಗೊಳಿಸಲಾಗಿದೆ. ನೀವು ಪಾಸ್ ಪೋರ್ಟ್ ಗೆ ಅರ್ಜಿ ಸಲ್ಲಿಸುವ ಮುನ್ನಈ ಬದಲಾಗಿರುವ ನಿಯಮದ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.
ಹೊಸ ಪಾಸ್ಪೋರ್ಟ್ ಗೆ ಅರ್ಜಿ ಸಲ್ಲಿಸುಲಿವವರಿಗೆ ಇಂದಿನಿಂದ ಹೊಸ ನಿಯಮ
ಇದೀಗ MEA (ವಿದೇಶಾಂಗ ವ್ಯವಹಾರಗಳ ಸಚಿವಾಲಯ) ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಪಾಸ್ ಪೋರ್ಟ್ ಅರ್ಜಿ ಪ್ರಕ್ರಿಯೆಯಲ್ಲಿ ಆಗಸ್ಟ್ 5 ರಿಂದ ಬದಲಾವಣೆ ಆಗಿದೆ. ಈ ಬಗ್ಗೆ MEA ಅಧಿಕೃತ ಘೋಷಣೆ ಹೊರಡಿಸಿದೆ. ಈ ಹೊಸ ನಿಯಮವು ಪಾಸ್ ಪೋರ್ಟ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತದೆ.
ಪಾಸ್ ಪೋರ್ಟ್ ಅರ್ಜಿ ಪ್ರಕ್ರಿಯೆಯೆಗೆ ಹೊಸ ನಿಯಮ
ಅಂತಾರಾಷ್ಟ್ರೀಯ ಪ್ರಯಾಣಕ್ಕಾಗಿ ಅರ್ಜಿ ಸಲ್ಲಿಸುವ ವ್ಯಕ್ತಿಗಳು www.passportindia.gov.in ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮೊದಲು ಈ ಕೆಲಸ ಮಾಡಬೇಕಾಗುತ್ತದೆ. ಅರ್ಜಿ ಸಲ್ಲಿಕೆಯ ಮೊದಲು ಸರ್ಕಾರ ಒದಗಿಸಿದ ವೇದಿಕೆಯಾದ ಡಿಜಿಲಾಕರ್ ಮೂಲಕ ಅಗತ್ಯ ಪೂರಕ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗಿದೆ.
ವಿವಿಧ ಪ್ರದೇಶಗಳಲ್ಲಿರುವ ಪಾಸ್ ಪೋರ್ಟ್ ಕೇಂದ್ರಗಳು ಮತ್ತು ಪೋಸ್ಟ್ ಆಫೀಸ್ ಪಾಸ್ಟ್ ಪೋರ್ಟ್ ಸೇವಾ ಕೇಂದ್ರಗಳಲ್ಲಿ ಭೌತಿಕ ದಾಖಲೆ ಪರಿಶೀಲನೆಯ ಪ್ರಮಾಣವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇನ್ನು ಅರ್ಜಿದಾರರು ಈಗಾಗಲೇ ಡಿಜಿಲಾಕರ್ ಮೂಲಕ ಅಪ್ಲೋಡ್ ಮಾಡಿದ್ದರೆ ತಮ್ಮ ಮೂಲ ದಾಖಲೆಗಳನ್ನು ನೀಡುವ ಅಗತ್ಯ ಇರುವುದಿಲ್ಲ.
ಡಿಜಿಲಾಕರ್ ಅನ್ನು ಬಳಸಿಕೊಳ್ಳುವ ಮೂಲಕ ಸಲ್ಲಿಸಿದ ದಾಖಲೆಗಳ ಹೆಚ್ಚಿನ ನಿಖರತೆ ಮತ್ತು ಸತ್ಯಾಸತ್ಯತೆಯನ್ನು ಖಚಿತಪಡಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಇನ್ನು ಅರ್ಜಿ ಸಲ್ಲಿಕೆಗೆ ಸಹಾಯವಾಗಲು ಆನ್ಲೈನ್ ಅರ್ಜಿ ಸಲ್ಲಿಕೆಗಳಿಗಾಗಿ ಡಿಜಿಲಾಕರ್ ಮೂಲಕ ಆಧಾರ್ ದಾಖಲೆಗಳ ಸ್ವೀಕಾರವನ್ನು ಸಚಿವಾಲಯ ವಿಸ್ತರಿಸಿದೆ.ಇನ್ನು ಡಿಜಿ ಲಾಕರ್ ಬಳಸಿದರೆ ಪಾಸ್ ಪಾಸ್ ಪೋರ್ಟ್ ಅರ್ಜಿಯ ವೆರಿಫಿಕೇಷನ್ ಪ್ರಕ್ರಿಯೆಯಲ್ಲಿ ಯಾವುದೇ ಕಾರ್ಡ್ ಕಾಪಿ ತರುವ ಅಗತ್ಯ ಇರುವುದಿಲ್ಲ.