Pension Rule: ಪಿಂಚಣಿ ಪಡೆಯುವ 60 ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೆ ನಿಯಮ, ಪಿಂಚಣಿ ನಿಯಮ ಬದಲಾವಣೆ.
ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ, ಸರ್ಕಾರಿ ವಲಯದ ಪಿಂಚಣಿದಾರರಿಗೆ ಪ್ರತ್ಯೇಕವಾಗಿ NPS ಶ್ರೇಣಿ II ಡೀಫಾಲ್ಟ್ ಯೋಜನೆ ಜಾರಿ.
New Pension Rule: ಜನಸಾಮಾನ್ಯರಿಗಾಗಿ ಸಾಕಷ್ಟು ಹೂಡಿಕೆಯ ಆಯ್ಕೆಗಳು ಲಭ್ಯವಿದೆ. ಜನರು ತಮ್ಮ ಭವಿಷ್ಯಕ್ಕಾಗಿ ವಿವಿಧ ಹೂಡಿಕೆಯ ಯೋಜನೆಗಳಲ್ಲಿ ಉಳಿತಾಯವನ್ನು ಪ್ರಾರಂಭಿಸಲು ಸರ್ಕಾರ ಅವಕಾಶವನ್ನು ಮಾಡಿಕೊಟ್ಟಿದೆ. ಇನ್ನು ಜೀವದ ಭದ್ರತೆಗಾಗಿ ಜೀವ ವಿಮಾ ಯೋಜನೆಗಳಿಂದ ಹಿಡಿದು ಹಿಡಿದು ನಿವೃತ್ತಿಯ ನಂತರ ಪಡೆಯುವ ಪಿಂಚಣಿಯ ಯೋಜನೆಗಳು ಸಾಕಷ್ಟಿವೆ.
ಉದ್ಯೋಗಿಗಳು ತಮ್ಮ ನಿವೃತ್ತಿಯ ನಂತರ ಆರಾಮದಾಯಕ ಜೀವನ ನಿರ್ವಹಿಸಲು ಸರ್ಕಾರ ಪಿಂಚಣಿ ಯೋಜನೆಗಳು (Pension Scheme) ಸಹಾಯವಾಗುತ್ತದೆ. ದುಡಿಯುವ ವಯಸ್ಸಿನಲ್ಲಿ ನಾವು ಹಣವನ್ನು ಪಿಂಚಣಿ ಯೋಜನೆಗಳಲ್ಲಿ ಉಳಿತಾಯ ಮಾಡಿದರೆ ದುಡಿಯುವ ಸಾಮರ್ಥ್ಯ ಕಳೆದುಕೊಂಡಾಗ ಪಿಂಚಣಿಯ ಲಾಭವನ್ನು ಪಡೆಯಬಹುದು.
ಪಿಂಚಣಿ ಪಡೆಯುವ 60 ವರ್ಷ ಮೇಲ್ಪಟ್ಟ ಎಲ್ಲಾ ಜನರಿಗೆ ಹೊಸ ನಿಯಮ
ವಯಸ್ಸಾದ ನಂತರ ಹಣಕ್ಕಾಗಿ ಬೇರೆಯವರ ಮೇಲೆ ಅವಲಂಬಿತವಾಗಬೇಕಾಗುತ್ತದೆ. ವೃದ್ದಾಪ್ಯದಲ್ಲಿ ಬೇರೆಯವರಿಗೆ ಹೊರೆ ಆಗದಿರಲು ಪಿಂಚಣಿಯಲ್ಲಿನ ಹೂಡಿಕೆ ಉತ್ತಮ ಆಯ್ಕೆಯಾಗುತ್ತದೆ. ಇನ್ನು ಇದೀಗ ಕೇಂದ್ರ ಸರ್ಕಾರ ಪಿಂಚಣಿಯ ನಿಯಮದಲ್ಲಿ ಮಹತ್ವದ ಬದಲಾವಣೆಯನ್ನು ತಂದಿದೆ. ಪ್ರತಿ ತಿಂಗಳು ಮಾಸಿಕ ಪಿಂಚಣಿ ಪಡೆಯುವ ನಿಯಮದಲ್ಲಿ ಇನ್ನುಮುಂದೆ ಬದಲಾವಣೆ ಆಗಲಿದೆ. ನೀವು ಮಾಸಿಕ ಪಿಂಚಣಿ ಪಡೆಯುವವರಾಗಿದ್ದರೆ ಈ ಬದಲಾಗಿರುವ ಪಿಂಚಣಿಯ ನಿಯಮದ ಬಗ್ಗೆ ತಿಳಿದುಕೊಳ್ಳಿ.
ಪಿಂಚಣಿ ನಿಯಮದಲ್ಲಿ ಮಹತ್ವದ ಬದಲಾವಣೆ
Pension Fund Regulatory and Development Authority (PFRDA) ಸರ್ಕಾರಿ ನೌಕರರಿಗೆ ಪಿಂಚಣಿ ನಿಯಮಗಳನ್ನು ಬದಲಾಯಿಸಿದೆ. ಈಗ ಉದ್ಯೋಗಿಗಳ NPS ಶ್ರೇಣಿ II ಖಾತೆಗಳಲ್ಲಿ Default Scheme ಆಯ್ಕೆಯನ್ನು ಪರಿಚಯಿಸಲಾಗಿದೆ. ಇದರೊಂದಿಗೆ ಅವರು ತಮ್ಮ PF ಹೂಡಿಕೆಗಾಗಿ ಪಿಂಚಣಿ ನಿಧಿ ವ್ಯವಸ್ಥಾಪಕ (PFM) ಮತ್ತು ಶೇಕಡಾವಾರು ಆದಾಯದ ಶ್ರೇಣಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. ಖಾತೆದಾರರು ಆಯ್ಕೆ ಮಾಡಿದ ಆಯ್ಕೆಗಳ ಪ್ರಕಾರ PFM ತಮ್ಮ ಹಣವನ್ನು ಹೂಡಿಕೆ ಮಾಡುತ್ತದೆ.
NPS ಶ್ರೇಣಿ II ಡೀಫಾಲ್ಟ್ ಯೋಜನೆ
PF ಫಂಡ್ ಗಳ ಹೂಡಿಕೆಯಲ್ಲಿ ಹೂಡಿಕೆದಾರರಿಗೆ ನಮ್ಯತೆಯನ್ನು ಒದಗಿಸಲು ವಿನ್ಯಾಸಗೊಳಿಸಲಾದ ಡೀಫಾಲ್ಟ್ ಸ್ಕೀಮ್ ಆಯ್ಕೆಯು ಇಲ್ಲಿಯವರೆಗೆ NPS ಶ್ರೇಣಿ I ಖಾತೆಯ ಗ್ರಾಹಕರಿಗೆ ಮಾತ್ರ ಲಭ್ಯವಿತ್ತು. PFRDA ಸೆಪ್ಟೆಂಬರ್ 22, 2023 ರಂದು ಈ ಸಂಬಂಧ ಸುತ್ತೋಲೆಯನ್ನು ಹೊರಡಿಸಿದೆ. “ಸರ್ಕಾರಿ ವಲಯದ ಚಂದಾದಾರರಿಗೆ ಪ್ರತ್ಯೇಕವಾಗಿ NPS ಶ್ರೇಣಿ II ಡೀಫಾಲ್ಟ್ ಯೋಜನೆಯನ್ನು ಪ್ರಾರಂಭಿಸಲು ನಿರ್ಧರಿಸಲಾಗಿದೆ” ಎಂದು PFRDA ಸುತ್ತೋಲೆಯಲ್ಲಿ ತಿಳಿಸಿದೆ.