Bharat Rice New Rule: ಭಾರತ್ ಅಕ್ಕಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ, ಕೇಂದ್ರದ ಹೊಸ ನೀತಿ ಜಾರಿ.

ಭಾರತ್ ಅಕ್ಕಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ

New Policy In Bharat Rice: ದೇಶದಲ್ಲಿ ಹೆಚ್ಚುತ್ತಿರುವ ಅಕ್ಕಿಯ ಬೆಲೆಯ ನಿಯಂತ್ರಣಕ್ಕಾಗಿ ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಮಾರಾಟ ಮಾಡಲು ಸರ್ಕಾರ ಅನುಮತಿ ನೀಡಿತ್ತು. ಈ ಮೂಲಕ ಒಂದು ರೀತಿಯಲ್ಲಿ ಜನಸಾಮಾನ್ಯರಿಗೆ ಅಕ್ಕಿಯ ಬೆಲೆಯ ವಿಚಾರವಾಗಿ ಸರ್ಕಾರ ಬಿಗ್ ರಿಲೀಫ್ ನೀಡಿತ್ತು ಎನ್ನಬಹುದು. ಜನರು ಭಾರತ್ ರೈಸ್ ಅನ್ನು ಅಗ್ಗದ ದರದಲ್ಲಿ ಖರೀದಿಸುತ್ತಿದ್ದರು.

ಭಾರತ್ ಬ್ರಾಂಡ್ ನ ಮೂಲಕ ಭಾರತ್ ರೈಸ್, ಭಾರತ್ ಹಿಟ್ಟು ಮತ್ತು ಭಾರತ್ ಬೆಳೆಗಳನ್ನು ಮಾರುಕಟ್ಟೆಯಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದಾಗಿತ್ತು. ಚಿಲ್ಲರೆ ಮಾರುಕಟ್ಟೆಯಲ್ಲಿ ಭಾರತ್ ರೈಸ್ ಅನ್ನು ಕೇವಲ ರೂ. 29 ಕ್ಕೆ ಮಾರಾಟ ಮಾಡಲಾಗುತ್ತಿತ್ತು. ಆದರೆ ಇದೀಗ ಕೇಂದ್ರ ಸರ್ಕಾರ ಭಾರತ್ ರೈಸ್ ಯೋಜನೆಯಲ್ಲಿ ಹೊಸ ನೀತಿ ಜಾರಿಗೆ ಮುಂದಾಗಿದೆ. 

New Policy In Bharat Rice
Image Credit: Oneindia

ಭಾರತ್ ಅಕ್ಕಿ ನಿಯಮದಲ್ಲಿ ಬಹುದೊಡ್ಡ ಬದಲಾವಣೆ
ಮಹತ್ವಾಕಾಂಶೆಯ ಭರತ್ ಅಕ್ಕಿ ಯೋಜನೆಗೆ ಹೊಸ ಪಾಲಿಸಿ ತರಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂಬಂಧಪಟ್ಟ ಪ್ರಕ್ರಿಯೆಗಳು ಶುರುವಾಗಿದ್ದು, ಶೀಘ್ರದಲ್ಲೇ ಪಾಲಿಸಿ ಅನುಷ್ಠಾನಕ್ಕೆ ಬರುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಗೂ ಮುನ್ನ ಆರಂಭಿಸಿದ್ದ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಭಾರತ್ ಅಕ್ಕಿ ಯೋಜನೆ ಜುಲೈನಿಂದ ಸ್ಥಗಿತಗೊಂಡಿದೆ. ಎಪಿಎಲ್ ಮತ್ತು ಬಿಪಿಎಲ್ ಕಾರ್ಡ್ ರಹಿತ ಜನಸಾಮಾನ್ಯರಿಗೆ ಅನುಕೂಲಕರವಾದ ಪಡಿತರ ವ್ಯವಸ್ಥೆಯಿಂದಾಗಿ  ಅನ್ನು ಅಮಾನತುಗೊಳಿಸಲಾಗಿದೆ. ಇನ್ನುಮುಂದೆ ಜನಸಾಮಾನ್ಯರು ಕಡಿಮೆ ದರದಲ್ಲಿ ಭಾರತ್ ಅಕ್ಕಿಯನ್ನು ಪಡೆಯಲು ಸಾಧ್ಯವಾಗುವುದಿಲ್ಲ.

Bharat Rice Latest News
Image Credit: Oneindia

ಕೇಂದ್ರದ ಹೊಸ ನೀತಿ ಜಾರಿ
ಭಾರತ್ ಅಕ್ಕಿ ಯೋಜನೆಯಡಿ ಪ್ರತಿ ಕೆಜಿ ಅಕ್ಕಿಗೆ 29 ರೂ. 27.50 ರೂ. ಗೆ ಗೋಧಿ ಹಿಟ್ಟು, ಕಡೆಲೆಕಾಯಿಗೆ 60 ರೂಪಾಯಿಗೆ ವಿತರಿಸಲಾಯಿತು. ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಆಹಾರವನ್ನು ವಿತರಿಸುವ ಯೋಜನೆ ಇದಾಗಿತ್ತು. ಭಾರತ್ ಅಕ್ಕಿಗೂ ಗ್ರಾಹಕರಿಂದ ಹೆಚ್ಚಿನ ಬೇಡಿಕೆ ಬಂದಿದೆ.

ಆದರೆ, ಇದ್ದಕ್ಕಿದ್ದಂತೆ ಯೋಜನೆ ರದ್ದಾಗಿದೆ. ಕೇಂದ್ರದ ಆದೇಶದಂತೆ ಜೂ.10 ರವರೆಗೆ ಸಾಮಗ್ರಿ ಪೂರೈಕೆಯಾಗಿದ್ದು, ನಂತರ ಸಾಮಗ್ರಿ ಪೂರೈಕೆಯಾಗದ ಕಾರಣ ವಿತರಣೆ ಸ್ಥಗಿತಗೊಳಿಸಲಾಗಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಹೊಸ ನೀತಿಯನ್ನು ತರಲು ಕೇಂದ್ರ ಸರ್ಕಾರ ಯೋಜನೆ ಸಿದ್ಧಪಡಿಸುತ್ತಿದೆ. ಡಿ & ಮಾರ್ಟ್ ಸೇರಿದಂತೆ ಸೂಪರ್ ಮಾರ್ಕೆಟ್ ಗಳಲ್ಲಿ ಮಾರಾಟ ಸೇರಿದಂತೆ ಇತರೆ ಅಂಶಗಳನ್ನು ಪಾಲಿಸಿಯಲ್ಲಿ ಸೇರಿಸಲಾಗಿದೆ ಎನ್ನಲಾಗಿದೆ. ಶೀಘ್ರದಲ್ಲೇ ಭಾರತ್ ಅಕ್ಕಿ ನಿಯಮದಲ್ಲಿ ಹೊಸ ಪಾಲಿಸಿ ಜಾರಿಯಾಗಲಿದೆ.

Join Nadunudi News WhatsApp Group

Bharat Rice New Update
Image Credit: Varthabharati

Join Nadunudi News WhatsApp Group