BPL Card: ಅನ್ನಭಾಗ್ಯ ಯೋಜನೆಯ ಬೆನ್ನಲ್ಲೇ ಹೊಸ BPL ಕಾರ್ಡಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್, ಸರ್ಕಾರದ ನಿರ್ಧಾರ.

ಹೊಸ ರೇಷನ್ ಕಾರ್ಡುಗಳಿಗೆ ಅರ್ಜಿ ಸಲ್ಲಿಸಿದ ಜನರಿಗೆ ಈಗ ರಾಜ್ಯ ಸರ್ಕಾರ ಸಿಹಿ ಸುದ್ದಿಯನ್ನ ನೀಡಿದೆ.

BPL Ration Card Update: ಇದೀಗ ರಾಜ್ಯದಲ್ಲಿ ಪ್ರಸ್ತುತ ಕಾಂಗ್ರೆಸ್ (Congress) ಗ್ಯಾರಂಟಿಯ ಯೋಜನೆಗಳ ಅನುಷ್ಠಾನದ ಬಗ್ಗೆ ಸುದ್ದಿ ಹರಿದಾಡುತ್ತಿದೆ. ಇನ್ನು ಈ ತಿಂಗಳಿನಲ್ಲಿ ಗೃಹ ಲಕ್ಷ್ಮಿ ಹಾಗೂ ಅನ್ನಭಾಗ್ಯ ಯೋಜನೆಯ ಅನುಷ್ಠಾನದ ಸಿದ್ದತೆಯಲ್ಲಿ ಸರ್ಕಾರ ಬ್ಯುಸಿ ಆಗಿದೆ. ಇನ್ನು ಅನ್ನಭಾಗ್ಯ ಯೋಜನೆಯ ಲಾಭವನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಅನ್ನು ಹೊಂದಿರಬೇಕಾಗುತ್ತದೆ.

Now the state government has decided to issue new ration cards soon.
Image Credit: businesstoday

ಬಿಪಿಎಲ್ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಕೆ
ಬಿಪಿಎಲ್ ರೇಷನ್ ಕಾರ್ಡುದಾರರು ಹಾಗೂ ಅಂತ್ಯೋದಯ ಹೊಂದಿದವರು ಅನ್ನಭಾಗ್ಯ ಯೋಜನೆಯ ಲಾಭವನ್ನು ಪಡೆಯಬಹುದು. ಇನ್ನು ಕಾಂಗ್ರೆಸ್ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯಲು ಬಿಪಿಎಲ್ ರೇಷನ್ ಕಾರ್ಡ್ ಅತಿ ಮುಖ್ಯವಾಗಿದೆ.

ಈ ಕಾರಣದಿಂದ ರಾಜ್ಯದಲ್ಲಿ ಸಾಕಷ್ಟು ಮಂದಿ ಹೊಸ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಅರ್ಜಿದಾರರ ಅರ್ಜಿಯನ್ನು ಪರಿಶೀಲಿಸಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ. ಇದೀಗ ರಾಜ್ಯ ಸರ್ಕಾರ ಹೊಸ ಪಡಿತರ ಚೀಟಿ ಅರ್ಜಿದಾರರಿಗೆ ಸಿಹಿ ಸುದ್ದಿ ನೀಡಿದೆ.

ಬಿಪಿಎಲ್ ರೇಷನ್ ಕಾರ್ಡ್ ಅರ್ಜಿದಾರರಿಗೆ ಸಿಹಿ ಸುದ್ದಿ
ಇದೀಗ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಬಿಪಿಎಲ್ ರೇಷನ್ ಕಾರ್ಡ್ ಅರ್ಜಿದಾರರಿಗೆ ಸಿಹಿ ಸುದ್ದಿ ನೀಡಿದ್ದಾರೆ. ವಿಧಾನಸಭೆಯಲ್ಲಿ ಬಿಪಿಎಲ್ ರೇಷನ್ ಕಾರ್ಡ್ ಅರ್ಜಿದಾರರಿಗೆ ಕಾರ್ಡ್ ಅನ್ನು ನೀಡುವ ಬಗ್ಗೆ ಚರ್ಚಿಸಲಾಗಿದೆ. ಹೊಸ ಪಡಿತರ ಚೀಟಿ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

Now the state government has decided to issue new ration cards to the people who have applied.
Image Credit: businessleague

“ಕೇಂದ್ರ ಸರ್ಕಾರ ನೀಡಿದ ಶೇ. 60 ರಷ್ಟು ಮೀರಿ ರಾಜ್ಯದಲ್ಲಿ 80 ರಷ್ಟು ಬಿಪಿಎಲ್ ಕಾರ್ಡ್ ವಿತರಿಸಲಾಗಿದೆ. ಕೆಲವು ನಿರ್ಧಿಷ್ಟ ಸೂಚನೆ ಮೀರಲಾಗಿದೆ. ಆರೋಗ್ಯ ವಿಚಾರಕ್ಕೆ ಬಂದಾಗ ಎಲ್ಲರಿಂದಲೂ ಬಿಪಿಎಲ್ ಕಾರ್ಡ್ ಗೆ ಹೆಚ್ಚಿನ ಬೇಡಿಕೆ ಕೇಳಿಬಂದಿದೆ. ಹೀಗಾಗಿ ಅರ್ಜಿದಾರರಿಗೆ ಬಿಪಿಎಲ್ ಕಾರ್ಡ್ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಆದಷ್ಟು ಬೇಗ ತೀರ್ಮಾನ ಕೈಗೊಳ್ಳಲಾಗುವುದು” ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group