Ration Facility: ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್, ಫೆ. 1 ರಿಂದ ಹೊಸ ಸೇವೆ ಆರಂಭ

ಪಡಿತರ ಚೀಟಿ ಫಲಾನುಭವಿಗಳಿಗೆ ವಿಶೇಷ ಸೌಲಭ್ಯ, ಮುಂದಿನ ತಿಂಗಳಿಂದ ಜಾರಿ

New Ration Facility: ಸಧ್ಯ ರಾಜ್ಯ ಸರ್ಕಾರ Ration Card ಹೊಂದಿರುವವರಿಗೆ ಉಚಿತ ಪಡಿತರನ್ನು ನೀಡುತ್ತಿದೆ. ಜನರು ರೇಷನ್ ಕಾರ್ಡ್ ನ ಮೂಲಕ ಸರ್ಕಾರದಿಂದ ವಿವಿಧ ಸೌಲಭ್ಯವನ್ನು ಪಡೆಯುತ್ತಿದ್ದಾರೆ. ರೇಷನ್ ಕಾರ್ಡ್ ನಿಂದಾಗಿ ಬಡ ಜನತೆಗೆ ಸರ್ಕಾರದ ಎಲ್ಲ ಯೋಜನೆಗಳು ಲಭ್ಯವಾಗುತ್ತಿದೆ. ಇದೀಗ ಪಡಿತರ ಚೀಟಿ ಫಲಾನುಭವಿಗಳಿಗೆ ಸಿಹಿಸುದ್ದಿಯೊಂದು ಹೊರಬಿದ್ದಿದೆ.

New Ration Facility
Image Credit: Thestatesman

ಪಡಿತರ ಚೀಟಿ ಹೊಂದಿದವರಿಗೆ ಗುಡ್ ನ್ಯೂಸ್
ಇನ್ನು ಕೇಂದ್ರ ಸರ್ಕಾರ ರೇಷನ್ ಕಾರ್ಡ್ ಹೊಂದಿರುವವರಿಗೆ PM ಗರೀಬ್ ಕಲ್ಯಾಣ್ ಯೋಜನೆಯ ಅಡಿಯಲ್ಲಿ 5KG ಅಕ್ಕಿಯನ್ನು ಘೋಷಿಸಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕಾರಣ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿರುವ ಹಾಗೆಯೇ 5KG ಅಕ್ಕಿ ಹಾಗೂ 5KG ಅಕ್ಕಿಯ ಬದಲಾಗಿ ಹಣವನ್ನು ನೀಡುತ್ತಿದೆ. ಇದೀಗ ಪಡಿತರ ಚೀಟಿದಾರರಿಗೆ ಸರ್ಕಾರ ಹೊಸ ಸೌಲಭ್ಯವನ್ನು ನೀಡಲು ಸರ್ಕಾರ ಮುಂದಾಗಿದೆ. ಮುಂದಿನ ತಿಂಗಳಿಂದ ಪಡಿತರ ಚೀಟಿ ಹೊಂದಿರುವವರು ವಿಶೇಷ ಸೌಲಭ್ಯವನ್ನು ಪಡೆಯಲಿದ್ದಾರೆ.

ಮುಂದಿನ ತಿಂಗಳಿನಿಂದ ವಿಶೇಷ ಸೌಲಭ್ಯ
ಬಡವರಿಗಾಗಿ ಪರಿಚಯಿಸಿರುವ ಅನ್ನ ಭಾಗ್ಯ ಯೋಜನೆಯಡಿ ಸರ್ಕಾರ ಇದೀಗ “ಸಿರಿಧಾನ್ಯ” ವಿತರಣೆಗೆ ಮುಂದಾಗಿದೆ. ಹೌದು ಇನ್ನುಮುಂದೆ ಉಚಿತ ಪಡಿತರ ಫಲಾನುಭವಿಗಳು ಅಕ್ಕಿಯ ಜೊತೆಗೆ ಸಿರಿಧಾನ್ಯವನ್ನು ಪಡೆಯಬಹುದಾಗಿದೆ. ಫೆಬ್ರವರಿ ತಿಂಗಳಿನಿಂದ ಪಡಿತ್ರನ್ನು ಪಡೆಯುವವರು ಸಿರಿಧಾನ್ಯವನ್ನು ಪಡೆಯಬಹುದು. ಗೋಧಿ ಮತ್ತು ಅಕ್ಕಿಯ ಜೊತೆ ಸಿರಿಧಾನ್ಯ ಲಭ್ಯವಾಗಲಿದೆ.

Ration Card Latest News Update
Image Credit: Thestatesman

ಈ ಹಿಂದೆ ಅಂತ್ಯೋದಯ ಕಾರ್ಡ್ ಹೊಂದಿರುವವರಿಗೆ 21 ಕೆಜಿ ಅಕ್ಕಿ ಮತ್ತು 14 ಕೆಜಿ ಗೋಧಿ ನೀಡಲಾಗಿತ್ತು ಆದರೆ ಇನ್ನುಮುಂದೆ ಇದರ ಬದಲಾಗಿ 9 ಕೆಜಿ ಗೋಧಿ ಮತ್ತು 5 ಕೆಜಿ ಸಿರಿಧಾನ್ಯ ನೀಡಲಾಗುತ್ತದೆ. ಈ ಹೊಸ ಯೋಜನೆಯಡಿ ಪಡಿತರ ಫಲಾನುಭವಿಗಳಿಗೆ ನೀಡುವ ಅಕ್ಕಿಯ ಪ್ರಮಾಣವನ್ನು ಕಡಿಮೆ ಮಾಡಲಾಗಿದೆ. ಅಕ್ಕಿಯ ಬದಲು ಸಿರಿಧಾನ್ಯವನ್ನು ವಿತರಿಸಲು ನಿರ್ಧರಿಸಲಾಗಿದೆ. ಆಹಾರದಲ್ಲಿ ಸಿರಿಧಾನ್ಯವನ್ನು ಸೇರಿಸಲು ಸರ್ಕಾರ ಒತ್ತು ನೀಡುತ್ತಿದೆ.

Join Nadunudi News WhatsApp Group

Join Nadunudi News WhatsApp Group