Renault Duster: ಹೊಸ ಲುಕ್ ನಲ್ಲಿ ಮತ್ತೆ ಬಂತು ಅಗ್ಗದ Duster ಕಾರ್, ಮಧ್ಯಮ ವರ್ಗದ ಜನರಿಗೆ ಹೇಳಿಮಾಡಿಸಿದ ಕಾರ್.
ನೂತನ ವಿನ್ಯಾಸದ ಕಾರ್ ಪರಿಚಯಿಸಲು ಹೊರಟ Renault.
New Renault Duster SUV: ಭಾರತೀಯ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳು ಖರೀದಿಗೆ ಲಭ್ಯವಿದೆ. ಗ್ರಾಹಕರು ಕಾರ್ ಖರೀದಿಯ ಬಗ್ಗೆ ಯೋಚಿಸಿದಾಗ ಮೊದಲನೆಯದಾಗಿ ಕಾರ್ ನ Mileage ಬಗ್ಗೆ ಗಮನ ಹರಿಸುತ್ತಾರೆ.
ಹೆಚ್ಚಿನ ಮೈಲೇಜ್ ನೀಡುವ Car ಗೆ ಗ್ರಾಹಕರು ಹೆಚ್ಚಿನ ಆದ್ಯತೆ ನೀಡುತ್ತಾರೆ. ಇನ್ನು ಇತ್ತೀಚಿಗೆ Renault ಕಂಪನಿ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸಿದೆ. ಇದೀಗ Renault ಮಾರುಕಟ್ಟೆಯಲ್ಲಿ ನೂತನ ವಿನ್ಯಾಸದ ಕಾರ್ ಅನ್ನು ಪರಿಚಯಿಸಿದೆ.
New Renault Duster
ದೇಶಿಯ ಮಾರುಕಟ್ಟೆಯಲ್ಲಿ SUV ಕಾರ್ ಗಳ ಮೇಲಿನ ಬೇಡಿಕೆ ಹೆಚ್ಚುತ್ತಿದೆ. ಇದೀಗ ಭಾರತೀಯ ಮಾರುಕಟ್ಟೆಯಲ್ಲಿ Renault Duster ಬಿಡುಗಡೆಗೆ ಸಜ್ಜಾಗಿದೆ. ರೆನಾಲ್ಟ್ ಅಂತಿಮವಾಗಿ ಡಸ್ಟರ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಇದೀಗ ರೆನಾಲ್ಟ್ ಡಸ್ಟರ್ ಕಾರ್ ಮಾರುಕಟ್ಟೆಯಲ್ಲಿ ಯಾವ ಯಾವ ಫೀಚರ್ ಗಳ ಮೂಲಕ ಪರಿಚಯವಾಗಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.
Renault Duster SUV ವಿಶೇಷತೆ
ರೆನಾಲ್ಟ್ ಡಸ್ಟರ್ ಕಾರ್ ಮುಂದಿನ ದಿನಗಳಲ್ಲಿ ಬಿಡುಗಡೆಗೊಳ್ಳಲಿರುವ CMF -B ಫ್ಲಾಟ್ ಫಾರ್ಮ್ ಅನ್ನು ಒಳಗೊಂಡಿದೆ. ರೆನಾಲ್ಟ್ ಡಸ್ಟರ್ ಕಾರ್ ನ ವಿನ್ಯಾಸವು ಇನ್ನಿತರ SUV ಗಳಿಗಿಂತ ಭಿನ್ನವಾಗಿದೆ. Renault ತನ್ನ ಹೊಸ ಡಸ್ಟರ್ ಅನ್ನು ಜಪಾನ್ ನ ಪ್ರಮುಖ ವಾಹನ ತಯಾರಕ ನಿಸ್ಸಾನ್ ಸಹಯೋಗದೊಂದಿಗೆ ಸಿದ್ಧಪಡಿಸುತ್ತಿದೆ. ಇನ್ನು ರೆನಾಲ್ಟ್ ಡಸ್ಟರ್ ಕಾರ್ ನಲ್ಲಿ ಮೂರು ಸಾಲುಗಳ ಆಸನವನ್ನು ಸಿದ್ದಪಡಿಸಲಾಗಿದೆ.
Renault Duster SUV ಬೆಲೆ
ರೆನಾಲ್ಟ್ ಡಸ್ಟರ್ ತನ್ನ ವಿಭಾಗದಲ್ಲಿ ಮೂರು ಅತ್ಯಂತ ಜನಪ್ರಿಯ ಎಸ್ ಯುವಿ ಕಾರುಗಳಿಗೆ ಪೈಪೋಟಿ ನೀಡಲಿದೆ. ಹ್ಯುಂಡೈ ಕ್ರೇಟಾ, ಕೀಯ ಸೇಲ್ಟೋಸ್ ಮತ್ತು ಮಾರುತಿ ಸುಜುಕಿ ಗ್ರ್ಯಾನ್ಡ್ ನೊಂದಿಗೆ ಈ ರೆನಾಲ್ಟ್ ಡಸ್ಟರ್ ಕಾರ್ ಸ್ಪರ್ದಿಸಲಿದೆ. ಎಲ್ಲಾ ಮೂರು ಎಸ್ ಯುವಿಗಳು ವಿಶಿಷ್ಟ ವಿನ್ಯಾಸ, ತಂತ್ರಜ್ಞಾನ ಮತ್ತು ಎಂಜಿನ್ ವಿಶೇಷಣಗಳನ್ನು ಹೊಂದಿದೆ. ಇನ್ನು ವಿಶೇಷ ಫೀಚರ್ ನೊಂದಿಗೆ ಬಿಡುಗಡೆಗೊಳ್ಳುತ್ತಿರುವ Renault Duster SUV ಮಾರುಕಟ್ಟೆಯಲ್ಲಿ 8.59 ರಿಂದ 12 .65 ಲಕ್ಷ ಬೆಲೆಯಲ್ಲಿ ಪರಿಚಯವಾಗಲಿದೆ ಎಂದು ಅಂದಾಜಿಸಲಾಗಿದೆ.
ಸದ್ಯದಲ್ಲೇ ರೆನಾಲ್ಟ್ ಡಸ್ಟರ್ ಕಾರ್ ಬಿಡುಗಡೆ
ಹೊಸ ಡಸ್ಟರ್ ಮೂರು ಪೆಟ್ರೋಲ್ ಎಂಜಿನ್ ಆಯ್ಕೆಗಳನ್ನು ಪಡೆಯುತ್ತದೆ – ಪ್ರವೇಶ ಮಟ್ಟದ 120hp, 1.0-ಲೀಟರ್ ಟರ್ಬೊ-ಪೆಟ್ರೋಲ್; 140hp, 1.2-ಲೀಟರ್ ಪೆಟ್ರೋಲ್ ಹೈಬ್ರಿಡ್; ಮತ್ತು 170hp, 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಉನ್ನತ ರೂಪಾಂತರಗಳಲ್ಲಿ ಫ್ಲೆಕ್ಸ್-ಇಂಧನ ಕಂಪ್ಲೈಂಟ್ ಆಗಿದೆ. ರೆನಾಲ್ಟ್ ಡಸ್ಟರ್ ಕಾರ್ 2024 ರಲ್ಲಿ ಅಂತ್ಯರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಲಿದ್ದು, 2025 ರಲ್ಲಿ ಭಾರತೀಯ ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ.