Enfield 350: ಈಗ ಎಲ್ಲರೂ ಖರೀದಿಸಬಹುದು Royal Enfiled, ಅಗ್ಗದ ಬೆಲೆ ಬುಲೆಟ್ 350 ಬುಕ್ ಮಾಡಲು ಜನಸಂದಣಿ.
Royal Enfield 350 ಬೈಕ್ ಬೆಲೆ ಹಾಗೂ ವಿಶೇಷತೆ ಬಗ್ಗೆ ತಿಳಿದುಕೊಳ್ಳಿ.
New Royal Enfield 350 Bike: ಸದ್ಯ ಮಾರುಕಟ್ಟೆಯಲ್ಲಿ Royal Enfield ಬುಲೆಟ್ ಬೈಕ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಂಡಿದೆ. ರಾಯಲ್ ಏನ್ ಫೀಲ್ಡ್ (Royal Enfield) ಕಂಪನಿಯು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುವ ಮೂಲಕ ಮಾರುಕಟ್ಟೆಯಲ್ಲಿ ತನ್ನ ಮಾರಟನ್ನು ಹೆಚ್ಚಿಸುತ್ತ ಹೋಗುತ್ತಿದೆ. ಇನ್ನು ಯುವಕರು ಬೈಕ್ ಖರೀದಿಯ ಬಗ್ಗೆ ಯೋಚಿಸಿದಾಗ ಅವರ ಮೊದಲ ಆದ್ಯತೆ Royal Enfield ಆಗಿರುತ್ತದೆ ಎನ್ನಬಹುದು.
ಏಕೆಂದರೆ Royal Enfield ಬೈಕ್ ಯುವಕರಿಗೆ ಹೆಚ್ಚು ಆಗುತ್ತದೆ. ಇತ್ತೀಚೆಗಷ್ಟೇ ಕಂಪನಿಯು ರಾಯಲ್ ಏನ್ ಫೀಲ್ಡ್ ಬುಲೆಟ್ ಬ್ಲಸ್ಟ್ , ರಾಯಲ್ ಏನ್ ಫೀಲ್ಡ್ ಹಿಮಾಲಯನ್ 450, ರಾಯಲ್ ಏನ್ ಫೀಲ್ಡ್ ಶಾರ್ಟ್ ಗನ್ 650 ಸೇರಿದಂತೆ ಇನ್ನಿತರ ನೂತನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿದೆ. ಇದೀಗ ಮಾರುಕಟ್ಟೆಯಲ್ಲಿ ರಾಯಲ್ ಎಂಫಿಲ್ಡ್ ಕಂಪನಿ ಹೊಸ ಅಲೆ ಸೃಷ್ಟಿಸಲು ನೂತನ ಮಾದರಿಯ ಬೈಕ್ ಅನ್ನು ಪರಿಚಯಿಸಲಿದೆ.
Royal Enfield 350 Bike Price
ಈ ರಾಯಲ್ ಏನ್ ಫೀಲ್ಡ್ 350 ಬೈಕ್ ಉತ್ತಮ ವೈಶಿಷ್ಟ್ಯತೆಯನ್ನು ಹೊಂದಿದೆ. ಈ ಬೈಕ್ ನ ಎಂಜಿನ್ ಸಾಮರ್ಥ್ಯ 349 ಸಿಸಿ ಆಗಿದೆ. ಇನ್ನು ಈ ಬೈಕ್ ನ ಮೈಲೇಜ್ 38 kmpl ಆಗಿದೆ. ಅಲ್ಲದೆ ಈ ಬೈಕ್ 13.5 ಲೀಟರ್ ಇಂಧನ ಟ್ಯಾಂಕ್ ಸಾಮರ್ಥ್ಯವನ್ನು ಪಡೆದಿದೆ. ಬುಲೆಟ್ 350 ಬೈಕ್ 20bhp ಮತ್ತು 27 ಏನ್ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ರಾಯಲ್ ಏನ್ ಫೀಲ್ಡ್ 350 ಬೈಕ್ ನ ಎಕ್ಸ್ ಶೋ ರೂಮ್ ಬೆಲೆ 1,73,562 ರೂಪಾಯಿ ಆಗಿದೆ.
Royal Enfield 350 Bike Feature
ರಾಯಲ್ ಏನ್ ಫೀಲ್ಡ್ 350 ಬೈಕ್ ಹ್ಯಾಲೋಜೆನ್ ಹೆಡ್ ಲ್ಯಾಂಪ್ ಮತ್ತು ಹೊಸ ವೆಚ್ ಗಿಯರ್ ಅನ್ನು ಒಳಗೊಂಡಿರುತ್ತದೆ. ಹೊಸ ಬುಲೆಟ್ 350 ಬೈಕ್ ಫಿಟ್ ಮತ್ತು ಫಿನಿಷ್ ನಿಂದ ಅದ್ಭುತವಾಗಿ ಕೂಡಿ ಬಂದಿದೆ. ಇನ್ನು ಈ ಬುಲೆಟ್ ಮುಂಭಾಗದಲ್ಲಿ ಟೆಲಿಸ್ಕೊಪಿಕ್ ಸಸ್ಪೆನ್ಕ್ಷನ್ ಇರಲಿದ್ದು ಇದು ಚಲಾಯಿಸುವಾಗ ಒಳ್ಳೆಯ ಫೀಲ್ ಕೊಡುತ್ತದೆ ಎಂದು ಹೇಳಬಹುದು.
ಮುಂಭಾಗದಲ್ಲಿ 300 ಎಂ ಎಂ ಡಿಸ್ಕ್ ಮತ್ತು ಮತ್ತು ಹಿಂಭಾಗದಲ್ಲಿ 270ಎಂಎಂ ಡ್ರಮ್ ಇರಲಿದೆ. ಈ ನೂತನ ವೈಶಿತ್ಯಗಳನ್ನು ರಾಯಲ್ ಎಂಫಿಲ್ಡ್ ಬೈಕ್ ಖರೀದಿಗೆ ಕಂಪನಿಯು ಹಣಕಾಸಿನ ಯೋಜನೆಯನ್ನು ಬಿಡುಗಡೆ ಮಾಡಿದೆ. ನೀವು ಮಾಸಿಕ ಕಡಿಮೆ EMI ಪಾವತಿಸುವ ಮೂಲಕ ಈ ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಸದ್ಯ Royal Enfield 350 ಬೈಕ್ ಮಾರುಕಟ್ಟೆಯಲ್ಲಿ ಐದು ಬಣ್ಣಗಲ್ಲಿ ಲಭ್ಯವಿದೆ.