New Locker Rules: ಬ್ಯಾಂಕ್ ಲಾಕರ್ ಇದ್ದವರಿಗೆ ಇನ್ನೊಂದು ಹೊಸ ನಿಯಮ, ಇನ್ನುಮುಂದೆ ಈ ವಸ್ತುಗಳನ್ನ ಮಾತ್ರ ಇಡಬಹುದು.

ಇನ್ನುಮುಂದೆ Bank Locker ಬಳಸುವವರು ಇಂತಹ ವಸ್ತುಗಳನ್ನು ಮಾತ್ರ ಇಡಲು ಅವಕಾಶ ಇರುತ್ತದೆ.

RBI New Rule For Bank Locker: ದೇಶದ ಪ್ರತಿಷ್ಠಿತ ಬ್ಯಾಂಕುಗಳು ಗ್ರಾಹಕರಿಗಾಗಿ Bank Locker ಅನ್ನು ನೀಡುತ್ತದೆ. ಗ್ರಾಹಕರು ತಮ್ಮ ಬಳಿ ಇರುವ ಪ್ರಮುಖ ದಾಖಲೆ, ನಗದು ಹಾಗೂ ಬೆಲೆಬಾಳುವ ಚಿನ್ನದ ಸುರಕ್ಷತೆಗಾಗಿ Bank Locker ಅನ್ನು ಬಳಸುತ್ತಾರೆ. ಇತ್ತೀಚಿಗೆ Reserve Bank Of India ಲಾಕರ್ ನಿಯಮವನ್ನು ಬದಲಾಯಿಸಿದೆ. ಗ್ರಾಹಕರಿಗೆ ಲಾಕರ್ ಒಪ್ಪಂದಕ್ಕೆ ಸಹಿ ಹಾಕುವಂತೆ RBI ಈಗಾಗಲೇ ಸೂಚನೆ ನೀಡಿದೆ.

RBI ನಿಯಮದಂತೆ ಎಲ್ಲ ಬ್ಯಾಂಕ್ ಗ್ರಾಹಕರು ಲಾಕರ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಲಾಕರ್ ನಿಯಮದ ಬಗ್ಗೆ ತಿಳಿದಿದ್ದಾರೆ. ಸದ್ಯ RBI ಲಾಕರ್ ನಿಯಮದಲ್ಲಿ ಹೊಸ ಮಾರ್ಗಸೂಚಿಯನ್ನು ಅಳವಡಿಸಿದೆ. ಇದೀಗ RBI ಲಾಕರ್ ನಲ್ಲಿ ಯಾವ ರೀತಿಯ ವಸ್ತುಗಳನ್ನು ಮಾತ್ರ ಇರಿಸಬಹುದು ಎನ್ನುವ ಬಗ್ಗೆ ಮಾಹಿತಿ ನೀಡಿದೆ. ಇನ್ನುಮುಂದೆ Bank Locker ಬಳಸುವವರು ಇಂತಹ ವಸ್ತುಗಳನ್ನು ಮಾತ್ರ ಇಡಲು ಅವಕಾಶ ಇರುತ್ತದೆ.

RBI New Rule For Bank Locker
Image Credit: Original Source

Bank Locker ಇದ್ದವರಿಗೆ ಇನ್ನೊಂದು ಹೊಸ ನಿಯಮ
ಆರ್ ಬಿಐ ಹೊಸ ನಿಯಮವನ್ನು ಹೊರಡಿಸಿದ್ದು ಗ್ರಾಹಕರು ಈ ನಿಯಮದ ಬಗ್ಗೆ ತಿಳಿಯುವುದು ಸೂಕ್ತ. ಈ ಹೊಸ ನಿಯಮ ಕೋಟ್ಯಾಂತರಗ್ರಾಹಕರ ಮೇಲೆ ಪರಿಣಾಮ ಬೀರಲಿದೆ. ಬ್ಯಾಂಕ್‌ ಗಳು ತಮ್ಮ ಗ್ರಾಹಕರೊಂದಿಗೆ ಲಾಕರ್‌ ಗಳನ್ನು ಬಾಡಿಗೆಗೆ ಪಡೆಯುವ ಒಪ್ಪಂದವನ್ನು ಈಗ ನವೀಕರಿಸಬೇಕಾಗುತ್ತದೆ ಎಂದು RBI ಹೇಳಿದೆ.

ಹೊಸ ನಿಯಮಗಳ ಪ್ರಕಾರ, ಈ ಒಪ್ಪಂದವನ್ನು ಸಿದ್ಧಪಡಿಸಲಾಗುತ್ತದೆ, ಇದರಲ್ಲಿ ಗ್ರಾಹಕರು ತಮ್ಮ ಲಾಕರ್‌ನಲ್ಲಿ ಯಾವ ರೀತಿಯ ಸರಕುಗಳನ್ನು ಇಡಬಹುದು ಮತ್ತು ಯಾವ ರೀತಿಯ ವಸ್ತುಗಳನ್ನು ಇಡಬಾರದು ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.

Bank Locker New Updates
Image Credit: Webnewsindia

ಇನ್ನುಮುಂದೆ ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನ ಮಾತ್ರ ಇಡಬಹುದು
RBI ಹೊಸ ಬ್ಯಾಂಕ್ ಲಾಕರ್ ನಿಯಮದ ಪ್ರಕಾರ, ಗ್ರಾಹಕರು ಬ್ಯಾಂಕ್ ಲಾಕರ್ ನಲ್ಲಿ ಆಭರಣಗಳು ಮತ್ತು ಪ್ರಮುಖ ದಾಖಲೆಗಳಂತಹ ಕಾನೂನು ಬದ್ದವಾಗಿ ಮಾನ್ಯವಾದ ವಸ್ತುಗಳನ್ನು ಮಾತ್ರ ಇಡಲು ಸಾಧ್ಯವಾಗುತ್ತದೆ. ಒಪ್ಪಂದದಲ್ಲಿ ಯಾವ ವಸ್ತುಗಳು ಇರಿಸಲಾಗುವುದು ಮತ್ತು ಯಾವ ವಸ್ತುಗಳನ್ನು ಇರಿಸುವಂತಿಲ್ಲ ಎನ್ನುವ ಬಗ್ಗೆ ಮಾಹಿತಿಯನ್ನ ನೀಡಬೇಕಾಗುತ್ತದೆ.

Join Nadunudi News WhatsApp Group

ಬ್ಯಾಂಕ್ ಲಾಕರ್ ನಲ್ಲಿ ಇಂತಹ ವಸ್ತುಗಳನ್ನು ನಿಷೇದಿಸಲಾಗಿದೆ
ಇನ್ನುಮುಂದೆ ಗ್ರಾಹಕರಿಗೆ ಬ್ಯಾಂಕ್ ಲಾಕರ್ ಅನ್ನು ಅವರ ವೈಯಕ್ತಿಕ ಬಳಕೆಗಾಗಿ ಮಾತ್ರ ನೀಡಲಾಗುತ್ತದೆ. ಬ್ಯಾಂಕ್ ಲಾಕರ್ ಗಳನ್ನೂ ವರ್ಗಾವಣೆ ಮಾಡಲಾಗುವುದಿಲ್ಲ. ಗ್ರಾಹಕರು ತಮ್ಮ ಲಾಕರ್ ಗಳಲ್ಲಿ ನಗದು ಅಥವಾ ವಿದೇಶಿ ಕರೆನ್ಸಿಗಳನ್ನುಇಡಲು ಸಾಧ್ಯವಾಗುವುದಿಲ್ಲ. ಶಸ್ತ್ರಾಸ್ತ್ರ, ಔಷಧ ಅಥವಾ ಇನ್ನಿತರ ವಿಷಕಾರಿ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇರಿಸುವುದನ್ನು RBI ನಿಷೇಧಿಸಿದೆ.

Join Nadunudi News WhatsApp Group